ಬಾಳೆಹೊನ್ನೂರು: ಹುಯಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡವಾನೆ ಜಾಗರ ಬಳಿ ಕೃಷಿಕ ಸಬ್ರಾಯಗೌಡ (65) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ, ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಕಾಡಾನೆ ತೋಟದ ಒಳಗೆ ದಾಟುವ ವೇಳೆ ಐಬೆಕ್ಸೆ ಬೇಲಿಗೆ ತಗುಲಿ ಕೂಗಿದೆ. ಯಾವುದೋ ಪ್ರಾಣಿ ಕೂಗಿದ ಶಬ್ದ ಕೇಳಿ ಸುಬ್ರಾಯಗೌಡ ಹೊರ ಬಂದು ಬೇಲಿಯ ಬಳಿ ತೆರಳುತ್ತಿದ್ದಂತೆ ಸ್ಥಳದಲ್ಲಿದ್ದ ಐಕಾಡಾನೆ ಕಾಲಿನಿಂದ ತುಳಿದು ಸಾಯಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಲ್ಕು ದಿನದ ಹಿಂದೆ ಬನ್ನೂರು ಬಳಿ ಅನಿತಾ (24) ಆನೆ ದಾಳಿಗೆ ಬಲಿಯಾಗಿದ್ದು, ಇದೀಗ ಅದೇ ಆನೆ ಮತ್ತೊಂದು ಬಲಿ ಪಡೆದಿದೆ ಎನ್ನಲಾಗಿದೆ.
ವಿವಿಧ ರೈತ ಸಂಘಟನೆಗಳು ಸೋಮವಾರ ಬಾಳೆಹೊನ್ನೂರಿನಲ್ಲಿ ರಸ್ತೆ ತಡೆ ನಡೆಸಲು ಸಿದ್ಧತೆ ನಡೆಸಿವೆ. ಘಟನೆ ತಿಳಿಯುತ್ತಿದ್ದಂತೆ ಠಾಣಾಧಿಕಾರಿ ರವೀಶ ಸ್ಥಳಕ್ಕೆ ತೆರಳಿದ್ದಾರೆ.
Farmer dies in wild elephant attack near Huigere village
Leave a comment