ಚಿಕ್ಕಮಗಳೂರು : ವರ್ಷಾಂತ್ಯದಲ್ಲಿ ಸರ್ಕಾರದಿಂದ ತೆರಿಗೆ ಹೆಚ್ಚಿಸಿಕೊಳ್ಳಲು ಹೊಸ ಪ್ಲಾನ್ ನಡೆದಿದೆ, ಅಬಕಾರಿ ಇಲಾಖೆಯಲ್ಲಿನ ಸಿಎಲ್ 5 ಬಾರ್ ಲೈಸೆನ್ಸ್ ಕೊಡಲು ಮುಂದಾಗಿದೆ (ಸಿಎಲ್ 5 )ಸಾಂದರ್ಭಿಕ ಲೈಸನ್ಸ್ ನೀಡಲು ಮುಂದಾದ ಸರ್ಕಾರ ಗಮನ ಸೆಳೆದಿದೆ.
ಅಬಕಾರಿ ನಿಯಮದಂತೆ ಸಾಂದರ್ಭಿಕ ಲೈಸನ್ಸ್ ನೀಡಲು ಮುಂದಾದ ಇಲಾಖೆ ಈ ಮೂಲಕ ಕ್ರಿಸ್ ಮಸ್, ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡಿದೆ. ಒಂದು ದಿನದ ಸಾಂದರ್ಭಿಕ ಬಾರ್ ಲೈಸೆನ್ಸ್ ಕೊಡುವುದು ಇದರ ಉದ್ದೇಶವಾಗಿದೆ, ಪ್ರವಾಸಿಗರ ಪಾಲಿನ ಸ್ವರ್ಗ ಎನಿಸಿರುವ ಚಿಕ್ಕಮಗಳೂರಿನಲ್ಲಿ ಸಿಎಲ್ 5 ಲೈಸೆನ್ಸ್ ನೀಡಿಕೆ ಅವಕಾಶ ಕೊಟ್ಟಿರುವುದು ವಿಶೇಷವಾಗಿದೆ
24 ಗಂಟೆಯ ಈ ಲೈಸೆನ್ಸ್ ಗೆ 12 ಸಾವಿರ ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ, ಕ್ರಿಸ್ಮಸ್ ಹಬ್ಬದ ಆಚರಣೆ ನಿಮಿತ್ತ ಆರು ಅರ್ಜಿಗಳು ಈಗಾಗಲೇ ಅಬಕಾರಿ ಇಲಾಖೆಗೆ ಸಲ್ಲಿಕೆಯಾಗಿವೆ, ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಸಾಂದರ್ಭಿಕ ಲೈಸನ್ಸ್ ನೀಡಲು ಇಲಾಖೆ ಮುಂದಾಗಿದೆ, ರೆಸ್ಟೋರೆಂಟ್, ಹೋಂ ಸ್ಟೇ ರೆಸಾರ್ಟ್ , ಹೋಟೆಲ್ , ಪಾರ್ಟಿ ಮಾಡುವ ಜಾಗಗಳಿಗೆ ಲೈಸೆನ್ಸ್ ನೀಡಲು ಮುಂದಾಗಿರುವ ಇಲಾಖೆಯ ನಿಯಮಕ್ಕೆ ಮೂಲ ಸನ್ನದುದಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a comment