ತರೀಕೆರೆ : ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕೆಂದು ಗ್ಯಾರಂಟಿ ಯೋಜನೆಗಳ ತಾಲೂಕು ಅನು?ನ ಸಮಿತಿ ಸಣೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಸೂಚಿಸಿದರು.
ಅವರು ತರೀಕೆರೆ ಗ್ಯಾರಂಟಿ ಯೋಜನೆಗಳ ತಾಲೂಕು ಅನು?ನ ಸಮಿತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಅನು?ನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸುವ ಜೊತೆಗೆ ಸರ್ಕಾರದ ಅತ್ಯಂತ ಮಹತ್ತರವಾದ ಯೋಜನೆಗಳಾದ ಐದು ಗ್ಯಾರಂಟಿಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಆಗುವ ಲೋಪ ದೋ?ಗಳನ್ನು ಅರಿತು ನಿವಾರಿಸಬೇಕು ಎಂದರು.
ಲಿಂಗದಹಳ್ಳಿ ಹೋಬಳಿಯಲ್ಲಿ ಪದೇ ಪದೇ ವಿದ್ಯುತ್ ನಿಲುಗಡೆಯಾಗುತ್ತಿರುತ್ತದೆ. ಈ ಪ್ರದೇಶದ ಕಾಫಿ ಎಸ್ಟೇಟ್ ಭಾಗದಲ್ಲೂ ವಿದ್ಯುತ್ ಅಡಚಣೆಯಾಗುತ್ತಿದ್ದು, ವಿದ್ಯುತ್ ನಿಲುಗಡೆಯಿಂದ ಸಾರ್ವ ಜನಿಕರ ದೈನಂದಿನ ಕೆಲಸ ಕಾರ್ಯಕ್ಕೆ ತೊಂದರೆ ಯಾಗುತ್ತಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಸಾರ್ವಜನಿಕರು ಪಡಿತರ ಪಡೆಯಲು ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಐದಾರು ಕಿ.ಮೀ. ಸಾಗಬೇಕಾಗಿದ್ದು,. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮೀಪದಲ್ಲೇ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಬೇಕು. ಕೆ. ಹೊಸೂರು ಮತ್ತು ನಂದಿಹೊಸಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಉಪಕೇಂದ್ರ ತೆರೆಯಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಪ್ರಯಾಣಿಕರ ಜೊತೆ ನಿರ್ವಾಹಕರು ಮತ್ತು ಚಾಲಕರು ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಗೆ ಸಮಯಕ್ಕೆ ಸರಿಯಾಗಿ ಬರಬೇಕು. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನು?ನ ಪ್ರಾದಿಕಾರ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ?ರೀಫ್, ಜಿಲ್ಲಾ ಪ್ರಾಧಿಕಾರ ಸದಸ್ಯ ಸಂತೋ? ಕುಂಟನಮಡು, ತಾಲೂಕು ಗ್ಯಾರಂಟಿ ಯೋಜನೆ ಅನು?ನ ಸಮಿತಿ ಸದಸ್ಯರಾದ ಭಾಗ್ಯಲಕ್ಷ್ಮಿ, ಲಕ್ಷ್ಮೀಬಾಯಿ, ಮೆಹಬೂಬ್, ಶ್ರೀಧರ, ಮಣಿಕಂಠ, ಸಂತೋ? ನಾಯ್ಕ, ಸಂತೋ?, ಮಾಲತೇಶ್, ಪ್ರಸನ್ನ, ಮೆಸ್ಕಾಂ ಇಲಾಖೆಯ ಎ.ಇ.ಇ. ಮಂಜುನಾಥ್ ನಾಯ್ಕ, ಆಹಾರ ಇಲಾಖೆಯ ಚಂದ್ರ ಕಲಾ, ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ದ್ರಾಕ್ಷಾಯಿಣಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದಿಲೀಪ್, ಕೆಎಸ್ ಆರ್ರ್ಟಿಸಿ. ಮಧು, ಚಂದ್ರಶೇಖರ್, ಅಶ್ವಿನಿ ಸಭೆಯಲ್ಲಿ ಭಾಗವಹಿಸಿದ್ದರು.
Ensure adequate delivery of guarantee schemes to beneficiaries
Leave a comment