ಚಿಕ್ಕಮಗಳೂರು: ನಗರದ ಹೊರವಲಯದಲ್ಲಿರುವ ಉಪ್ಪಳ್ಳಿಯ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ಶಾಲಾ ಸಾಕ್ಷರತಾ ವತಿಯಿಂದ ಶಾಲಾ ಚುನಾವಣೆಯನ್ನು ಆಯೋಜಿಸಲಾಗಿತ್ತು.
ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವ ಮತ್ತು ಮತದಾನದ ಅರಿವನ್ನು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳು ಮತದಾನದ ಮಹತ್ವ, ಮತದಾನದ ಪ್ರಕ್ರಿಯೆ ಮತ್ತು ಸದೃಢ ದೇಶ ನಿರ್ಮಾಣಕ್ಕಾಗಿ ಉತ್ತಮ ನಾಯಕರ ಆಯ್ಕೆ ಮಾಡುವುದನ್ನು ತಿಳಿದುಕೊಂಡರು
ಚುನಾವಣೆ ಪ್ರಕ್ರಿಯೆಯಲ್ಲಿ ಒಂಬತ್ತು ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಸ್ಕೂಲ್ ಲೀಡರ್, ಸ್ಪೋರ್ಟ್ಸ್ ಲೀಡರ್, ಲಿಟರರಿ ಆಕ್ಟಿವಿಟಿ ಲೀಡರ್ ಮತ್ತು ಡಿಸಿಪ್ಲಿನ್ ಲೀಡರ್ ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು. ಮತದಾನ ಮಾಡಲು ನಾಲ್ಕನೇ ತರಗತಿಯಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
ಡೈರಿಯಲ್ಲಿ ಮಗುವಿನ ಫೋಟೋ. ಮಗುವಿನ ವಿವರ ಮತ್ತು ಪೋಷಕರ ಸಹಿ ಕಡ್ಡಾಯವಾಗಿ ಇರಬೇಕು.ಐಡಿ ಕಾರ್ಡ್ ಅಥವಾ ಡೈರಿ ಇರದವರಿಗೆ ಮತದಾನ ಮಾಡಲು ಅವಕಾಶ ಇರಲಿಲ್ಲ. ತರಗತಿವಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರು ಶಿಕ್ಷಕರು ಕೂಡ ಮತದಾನ ಮಾಡಿದರು.
ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಮುಗಿದ ನಂತರ ಮಾಡೆಲ್ ಶಾಲಾ ನಾಯಕನಾಗಿ ಹತ್ತನೇ ತರಗತಿ ವಿದ್ಯಾರ್ಥಿ ಮುಂತಾಸಿರ್ ರಜಾ, ಕ್ರೀಡಾ ನಾಯಕಿಯಾಗಿ ೯ನೇ ತರಗತಿ ವಿದ್ಯಾರ್ಥಿನಿ ಸಾರಿಯ ಸುಲ್ತಾನ, ಲಿಟರೆರಿ ಆಕ್ಟಿವಿಟಿ ನಾಯಕಿಯಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ವಿದ್ಯಾ ಐ. ವಿ. ಮತ್ತು ಡಿಸಿಪ್ಲಿನ್ ನಾಯಕಿಯಾಗಿ ೯ನೇ ತರಗತಿ ವಿದ್ಯಾರ್ಥಿನಿ ಅಲೀನಾ ಖಾನ್ ಆಯ್ಕೆಯಾದರು.
ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಶಾಲಾ ಮ್ಯಾನೇಜ್ಮೆಂಟ್ ವತಿಯಿಂದ ವಿಜೇತ ಸ್ಪರ್ಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ತಮಗೆ ಸಿಕ್ಕಿರುವ ಸ್ಥಾನಕ್ಕೆ ಮಹತ್ವ ಕೊಟ್ಟು ಆಡಳಿತ ಪಕ್ಷವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಲಾಯಿತು.
ಶಾಲಾ ಚುನಾವಣಾ ಪ್ರಕ್ರಿಯೆ ನಡೆದಿದ್ದು ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಮುಖ್ಯ ಶಿಕ್ಷಕ ಯೋಗೀಶ್, ಕ್ರಿಷ್ಟಿ ಪ್ರಭ ಮತ್ತು ದಿವ್ಯಶ್ರಿ ಇದ್ದರು.
Election to select leaders in model school
Leave a comment