ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಅಂತರಘಟ್ಟೆ ದುರ್ಗಂಬಾ ದೇವಿಯ ಜಾತ್ರೆ ಅಂಗವಾಗಿ ನಡೆಯುವ ಅಮ್ಮನ ಹಬ್ಬಕ್ಕೆ ಜನ ಸಜ್ಜಾಗಿದ್ದಾರೆ.ಇಂದಿನಿಂದ ನೆಂಟರು,ಇಷ್ಟರು,ಬಂಧು,ಬಳಗ,ಸ್ನೇಹಿತರು ಬರುತ್ತಿದ್ದು ಊರುಗಳು ಗೀಜುಗುಡುತ್ತಿವೆ.
ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬರುವುದು ಸಂಪ್ರದಾಯವಾಗಿದೆ.ಬರುತ್ತಿರುವ ಬಸ್ಸುಗಳು ರಶ್ ಆಗಿವೆ ಕಾರುಗಳ ಸಾಲು,ಸಾಲು ಸರದಿಯಲ್ಲಿ ಬರುತ್ತಿವೆ.ಊರ ತುಂಬಾ ನೆಂಟರಿಷ್ಟರು ಸ್ನೇಹಿತರ ಕಲರವ ನಡೆದಿದೆ.ಸಂಜೆಯಷ್ಟೊತ್ತಿಗೆ ಕಾಲಿಡುವುದು ಕಷ್ಟ ಅಷ್ಟೊಂದು ಜನ ಸೇರುತ್ತಾರೆ.
ಮನೆಯ ಮುಂದೆ ರಂಗು,ರಂಗಿನ ತೋರಣ,ರಂಗೋಲಿ, ಶಮಿಯಾನ ಸ್ವಾಗತಿಸುತ್ತಿವೆ.
ಅಂತರಘಟ್ಟೆ ಜಾತ್ರೆಯ ನೆಪದಲ್ಲಿ ಸೇರಿ ಊಟ ಮಾಡುವ ಸಂಭ್ರಮ ಮಟನ್ ಮಸಾಲೆಯ ಘಮ,ಘಮ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಶಿವನಿ,ಹಿರೇನಲ್ಲೂರು,ಚೌಳಹಿರಿಯೂರು ಮತ್ತು ಅಂತರಘಟ್ಟೆ ಸೇರಿದಂತೆ ನೂರಾರು ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ಮಾತು ಕುರಿ ರೇಟು ಬಿಟ್ಟು ಬೇರೆ ಏನು ಇಲ್ಲ.ವಾರಗಳ ಕಾಲ ಅಲ್ಲಿಂದ ಈ ಊರು ಆ ಊರಿಗೆ ಹೋಗಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಡಿಮ್ಯಾಂಡ್ : ಕುರಿ ಕೊಳ್ಳುವ ಉತ್ಸಾಹ ಮುಗಿದಿದ್ದು ಈ ಬಾರಿ 10 000 ದಿಂದ 75 ಸಾವಿರದವರೆಗೆ ಕುರಿ ರೇಟ್ ಏರಿದೆ ಆದರೂ ಜನರ ಉತ್ಸಾಹಕ್ಕೆ ಕೊರತೆ ಇಲ್ಲ.
ಅಂತರಘಟ್ಟೆ ಜಾತ್ರೆ ಬಂದರೆ ಈ ಭಾಗದ ಎಲ್ಲಾ ಜನರಿಗೂ ಖುಷಿ ಅದರಲ್ಲೂ ಹಿಂದುಳಿದ ವರ್ಗಗಳ ಜನರಿಗೆ ಡಬಲ್ ಖುಷಿ ಏಕೆಂದರೆ ನೆಂಟರಿಷ್ಟರ ಮತ್ತು ಸ್ನೇಹಿತರ ಸತ್ಕರಿಸುವ ಪರಿ ಹೇಳತೀರದು.ಖುಷಿ,ಆನಂದ, ಸಂತೋಷ ನಕ್ಕು ನಲಿಯುವ ಜೊತೆಗೆ ಹವ ಬಾಡೂಟದ ಘಮಲು ವರ್ಣನೆ ಮಾಡಲು ಸಾಧ್ಯವಿಲ್ಲ.
ಕುರಿ,ಮೇಕೆ,ಕೋಳಿ ಅಷ್ಟೇ ಅಲ್ಲ ಜಾತ್ರೆಗೆ ಚಕ್ರದ ಗಾಡಿ ಹೂಡಲು ಲಕ್ಷ, ಲಕ್ಷ ಕೊಟ್ಟು ಹೊರಿ ಖರೀದಿಯು ಹೊರಿಗಳ ಶೃಂಗಾರ ಹೇಳತೀರದು.ಒಟ್ಟಾರೆ ಒಂದು ವಾರಗಳ ಕಾಲ ಬಾಡೂಟದ ಹವ ಘಮಲು ಇರುತ್ತದೆ.
Durgamba Devi Fair
Leave a comment