ಚಿಕ್ಕಮಗಳೂರು: “ಆಪರೇಷನ್ ನಾರ್ಕೋಸ್” ಎಂಬ ವಿಶೇಷ ಕಾರ್ಯಚರಣೆಯ ಅಡಿಯಲ್ಲಿ, ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ವಿಶೇಷ ತಂಡವು ನಡೆಸಿದ ತಪಾಸಣೆಯಲ್ಲಿ 2.16 ಲಕ್ಷ ರೂ ಮೌಲ್ಯದ ಮಾದಕ ವಸ್ತು ದೊರಕಿದೆ.
ರೈಲು ಸಂಖ್ಯೆ 18111 ಟಾಟಾ – ಯಶವಂತಪುರ ಎಕ್ಸ್‌ಪ್ರೆಸ್ ನಲ್ಲಿ ಬೀರೂರು ಮತ್ತು ಕಡೂರು ನಿಲ್ದಾಣಗಳ ನಡುವೆ ತಪಾಸಣೆ ನಡೆಸಿದ ವೇಳೆ ಮಾದಕ ವಸ್ತುಗಳು ಪತ್ತೆಯಾಗಿವೆ. ತಂಡವು ಜನರಲ್ ಕೋಚ್ ಸಂಖ್ಯೆ SWR 247321 ರಲ್ಲಿ ಪ್ರಾಥಮಿಕ ತನಿಖೆ ವೇಳೆ ವಾರಸುದಾರರು ಇಲ್ಲದ ಬ್ಯಾಗ್ ಪತ್ತೆಯಾಗಿದೆ.
ಅನುಮಾನಾಸ್ಪದ ರೀತಿಯಲ್ಲಿದ್ದ ಬ್ಯಾಗ್ ತೆರೆಯಲಾಗಿದ್ದು, ಅದರಲ್ಲಿ ಸುಮಾರು ₹1,25,000 ಮೌಲ್ಯದ 25 ಗ್ರಾಂ ಎಂಡಿಎಂಎ (ಕೃತಕ ಮಾದಕ ವಸ್ತು), ₹90,000 ಮೌಲ್ಯದ 1.522 ಕೆ.ಜಿ ಗಾಂಜಾ ಮತ್ತು ₹1,850 ಮೌಲ್ಯದ 210 ಗ್ರಾಂ ತೂಕದ 37 ಭಾಂಗ್ ಚಾಕೊಲೇಟ್‌ಗಳನ್ನು ಪತ್ತೆಯಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹2,16,850.
ಈ ಬ್ಯಾಗ್ ಅನ್ನು ಆರ್‌ಪಿಎಫ್ ತಂಡವು ಕಡೂರು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದೆ. ಈ ಕಾರ್ಯಚರಣೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತರಾದ ಶ್ರೀ ಸ್ಯಾಮ್ ಪ್ರಸಾಂತ್ ಜೆ.ಆರ್. ಅವರ ನೇತೃತ್ವದಲ್ಲಿ ನಡೆಯಿತು. ಈ ತಂಡದಲ್ಲಿ ಆನಂದ ಬಿ. (ASI/CIB/MYS, ಕ್ರೈಮ್ ಪ್ರಿವೆನ್ಷನ್ ಡಿಟೆಕ್ಷನ್ ತಂಡದ ಉಸ್ತುವಾರಿ), ಶಿವಾನಂದ ಟಿ, ಹೆಡ್ ಕಾನ್ಸ್ಟೇಬಲ್, ಸಿ. ವೆಂಕಟೇಶ (ASI/RPF/RRB) ಇದ್ದರು.
Drugs worth Rs 2.16 lakh found on train
Leave a comment