Home namma chikmagalur chikamagalur ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ
chikamagalurHomeLatest Newsnamma chikmagalur

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

Share
Share

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಅವರನ್ನು ಸೋಮವಾರ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಕಡೂರು ತಾಲೂಕಿನ ಮದಗದ ಕೆರೆಯ ಚಾನಲ್ ದುರಸ್ತಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ, ಆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚಾನಲ್ಲಿನ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ, ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ದೂರಿದರು.

ಚಾನಲ್ಲಿನ ಒಳಗೆ ಮತ್ತು ಪಕ್ಕದಲ್ಲಿ ಬಾರೀ ಗಾತ್ರದ ಮರಗಳಿದ್ದು ಅವುಗಳನ್ನು ತೆರೆವುಗೊಳಿಸದೆ ಮರದ ಬುಡಗಳಿಗೇ ಜಲ್ಲಿ, ಸಿಮೆಂಟ್, ಕಾಂಕ್ರೀಟ್ ಹಾಕಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು ಮುಂದೆ ಆ ಮರದ ಬೇರುಗಳು ಬೆಳೆದಂತೆ ಕಾಲುವೆಯಲ್ಲಿ ಬಿರುಕುಂಟಾಗುತ್ತದೆ, ಕ್ರಮೇಣ ಚಾನಲ್ ಒಡೆದು ಹೋಗುತ್ತದೆ, ಇದರಿಂದಾಗಿ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.

ಕಾಲುವೆ ಒಳಗೆ ಮತ್ತು ಪಕ್ಕದಲ್ಲಿರುವ ಮರಗಳನ್ನು ತೆರವುಗೊಳಿಸಿ ನಂತರ ಕಾಮಗಾರಿಯನ್ನು ಮಾಡುವಂತೆ ಸಂಬಂಧ ಪಟ್ಟವರಿಗೆ ಆದೇಶಿಸಬೇಕು, ಕಳಪೆ ಕಾಮಗಾರಿ ಮುಂದುವರೆದಲ್ಲಿ ಕಾಮಗಾರಿಯ ಬಿಲ್ ಅನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ ಪದಾಧಿಕಾರಿಗಳು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮು ನಾಯಕ್, ಜಿಲ್ಲಾಧ್ಯಕ್ಷ ಪಿ.ಕುಮಾರ್, ಪದಾಧಿಕಾರಿಗಳಾದ ಶಶಿ, ರವಿ, ಭಾಷಾ ಹಾಜರಿದ್ದರು.

District administration urged to prevent shoddy work

Share

Leave a comment

Leave a Reply

Your email address will not be published. Required fields are marked *

Don't Miss

ಅಂತರಘಟ್ಟೆ ಗ್ರಾಮದಲ್ಲಿ ಸರಣಿ ಕಳ್ಳತನ

ಅಜ್ಜಂಪುರ:  ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ದುರ್ಗಾಂಬಾದೇವಿ ಸುಕ್ಷೇತ್ರವಾಗಿರುವ ಈ ಗ್ರಾಮದಲ್ಲಿ ರಾತ್ರಿ ಖದೀಮರು ಏಳು ಮನೆಗಳ ಬೀಗ ಮುರಿದು ನಗದು...

ಪ್ರಿಯಾಂಕ್ ಖರ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ

ಚಿಕ್ಕಮಗಳೂರು: ಸಿಎಂ ಬದಲಾವಣೆ ವಿಷಯವನ್ನು ಮರೆಮಾಚುವ ಉz್ದೆÃಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾರೆ. ಸಚಿವ ಸ್ಥಾನ ಸಿಕ್ಕಿದೆ ಎಂಬ ಕಾರಣಕ್ಕೆ ಅವರಿಗೆ ಅಹಂಕಾರದ ಪಿತ್ತ ನೆತ್ತಿಗೇರಿದೆ. ಆರ್‌ಎಸ್‌ಎಸ್...

Related Articles

ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಶ್ರಮಿಸಬೇಕು

ಚಿಕ್ಕಮಗಳೂರು:  ಪ್ರಸ್ತುತ ಸಾಕಷ್ಟು ತೊಂದರೆ, ಸವಾಲುಗಳ ಮಧ್ಯೆ ಕೈಗಾರಿಕೆಗಳನ್ನು ನಡೆಸಬೇಕಾಗಿದ್ದು, ಎಂಎಸ್‌ಎಂಇಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು,...

ಜನತೆಗೆ ಸತ್ಯದ ಅರಿವು ಮೂಡಿಸಲು ಕಾರ್ಯಾಗಾರ

ಚಿಕ್ಕಮಗಳೂರು: ಭಾರತ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂ ದ್ರ ಸರ್ಕಾರ ವೈಫಲ್ಯತೆ...

ಎಂಪಿಎಂಸಿ ಆವರಣದಲ್ಲಿ ಹಮಾಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕಮಗಳೂರು: ಆರೋಗ್ಯವನ್ನು ಪ್ರತಿಯೊಬ್ಬ ಮನುಷ್ಯನ ಜೋಪಾನದಿಂದ ಕಾಪಾಡಿ ಕೊಳ್ಳಬೇಕು. ದೈನಂದಿನ ಕಾಯಕದ ಜೊತೆಗೆ ಶರೀರದ ಏರುಪೇರನ್ನು...

ಎನ್.ಆರ್.ಪುರ ಪಟ್ಟಣದಲ್ಲಿ ಕುಡುಕನೊಬ್ಬನ ‘ಎಣ್ಣೆ’ ಪುರಾಣ

ಚಿಕ್ಕಮಗಳೂರು:  ಕಾಫಿನಾಡಿನಲ್ಲಿ ಒಂದು ಕಡೆ ಕಾಡಾನೆ ದಾಳಿ ಹಾಗೂ ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಭಾರಿ...