Home namma chikmagalur ರೈತ ಸಂಘಟನೆ ದಾರಿ ಬಿಟ್ಟಿತು ? ಎಲ್ಲಿಗೆ ಪಯಣ ಯಾವುದೋ ದಾರಿ !
namma chikmagalurchikamagalurHomeLatest News

ರೈತ ಸಂಘಟನೆ ದಾರಿ ಬಿಟ್ಟಿತು ? ಎಲ್ಲಿಗೆ ಪಯಣ ಯಾವುದೋ ದಾರಿ !

Share
Share

ಮಾಸದಿರಲಿ ಬದಲಾಯಿಸದಿರಲಿ ರೈತರ ಹೆಗಲ ಮೇಲೇರಿರುವ ಶಾಲಿನ ಹಸಿರು ಬಣ್ಣ.

ದೇಶಕ್ಕೆ ಅನ್ನ ಕೊಡುವ ರೈತ ಇಂದಿಗೂ ಖಾಲಿ ಹೊಟ್ಟೆಯ ಬರಿಗೈ ಬಂಟ. ಇದು 45ನೇ ರೈತ ಹುತಾತ್ಮ ದಿನಾಚರಣೆ ಸಂದರ್ಭ.

ಸಾಮ್ರಾಜ್ಯಗಳು ಅಳಿದವು ಸಾಮ್ರಾಜ್ಯಗಳು ಉರುಳಿದವು, ಸರ್ಕಾರಗಳು ಇಳಿದವು, ಸರ್ಕಾರಗಳು ಏರಿದವು ಆದರೂ ರೈತನ ಬದುಕು ಇಂದಿಗೂ ಹಸನಾಗಿಲ್ಲ,

ಓ ನನ್ನ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನಾನಿಗಳೇ,,,,

ಗಮನಿಸಿ, ದೇಶಕ್ಕೆ ದೇಶವೇ ರೈತರ ಮೇಲಿನ ಹಸಿರು ಶಾಲನ್ನು ಗೌರವದಿಂದ ನೋಡುತ್ತಿದೆ. ನೋಡಲೇಬೇಕು.

ಈ ಎರಡು ಕಾರಣಕ್ಕಾಗಿ ಇಂದಿನ ರೈತ ಹೋರಾಟಗಾರರು ಅಂದು ಬಂಡಾಯದ ಕಹಳೆಯನ್ನು ಮೊಳಗಿಸಿ, ರಾಜ್ಯ ರೈತ ಸಂಘದ ಉದಯಕ್ಕೆ ಕಾರಣರಾಗಿ, ಆ ಸಂಘವನ್ನು ಸಿದ್ಧಾಂತ ಮತ್ತು ಬದ್ಧತೆಯೊಂದಿಗೆ ಕಷ್ಟಪಟ್ಟು ಕಟ್ಟಿ ಕರ್ನಾಟಕದ ಜನಪರ ~ ರೈತಪರ ಚಳುವಳಿಗೆ ಜೀವಂತವಾದ ಹೊಸ ದಿಕ್ಸೂಚಿನೀಡಿದ ಇತಿಹಾಸ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಇದೆ.

ಈ ಸಂಘಟನೆಗೆ ಧುಮುಕುವವರು ಮೊದಲು ರಾಜ್ಯ ರೈತ ಸಂಘದ ಇತಿಹಾಸ, ಸಿದ್ಧಾಂತ , ಬದ್ಧತೆ ಅರಿಯದೆ ಹೋದರೆ ಹೆಗಲ ಮೇಲೆ ಹಾಕಿಕೊಳ್ಳುವ ಹಸಿರು ಶಾಲು ನಾಡಿನ ಜನತೆಗೆ ಇದು ಒಂದು ಪ್ಯಾಶನ್ ನಂತೆ ಕಾಣಬಹುದು. ಹಸಿರು ಶಾಲು ಎಂಬುದು ಕೇವಲ ಪ್ಯಾಶನ್ ಆಗದೆ, ಅದು ಈ ನೆಲದ ಋಣವನ್ನು ತೀರಿಸುವ ಹೊಸ ಸಾಧನವಾಗಬೇಕು. ಈ ಹಿನ್ನೆಲೆಯಲ್ಲಿ 45ನೇ ರೈತ ಹುತಾತ್ಮರ ದಿನಾಚರಣೆಯನ್ನು ನಾವೆಲ್ಲ ಎದ್ದು ನಿಂತು ನೋಡಬೇಕಾಗಿದೆ.

ರೈತನೇ ದೇಶದ ಬೆನ್ನೆಲುಬು ಎಂದು ಬೀಗುವ ಸರ್ಕಾರದ ವಿರುದ್ಧ ಸೆಟ್ದು ನಿಂತು, ಅಧಿಕಾರಿಗಳ ನಿರ್ಲಕ್ಷತನಕ್ಕೆ ಬೆರಳು ಮಾಡಿ, ಈ ವ್ಯವಸ್ಥೆಯ ವಿರುದ್ಧ ಬಂಡಾಯದ ಮುಷ್ಟಿ ಎತ್ತಿ ಅಂದು ನಾಲ್ಕು ದಶಕಗಳ ಹಿಂದೆ 1980ರಲ್ಲಿ ರೂಪಿಸಿದ ರೈತ ಬಂಡಾಯ ಚಳುವಳಿಯೇ ಇಂದಿನ ಕರ್ನಾಟಕ ರಾಜ್ಯ ರೈತ ಸಂಘದ ಉದಯಕ್ಕೆ ಕಾರಣವಾಗಿರುವುದು.

ಬಾರೋಕೋಲು , ಒಂಟಿಕಾಲು, ಅರೆಬೆತ್ತಲೆ,ಕರ ನಿರಾಕರಣೆ, ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ , ಸರ್ವೋದಯದ ಸಿದ್ಧಾಂತದಡಿಯಲ್ಲಿ ರಾಜಿ ರಹಿತವಾದ ಹೋರಾಟದ ಇತಿಹಾಸ ರೈತ ಸಂಘಗಳಿಗಿದೆ.

ಕರ್ನಾಟಕ ರಾಜ್ಯದ ಇಂದಿನ ಧಾರವಾಡ ಮತ್ತು ಬೆಳಗಾಂ ಜಿಲ್ಲೆಗೆ ಹೊಂದಿಕೊಂಡಿರುವ ಘಟಪ್ರಭೆಯ ನೀರಿಗಾಗಿ, ಅಂದು ನರಗುಂದ ನವಲಗುಂದ ಸವದತ್ತಿ ನೆಲದ ಆ ಕಪ್ಪು ಮಣ್ಣಿನಲ್ಲಿ, ರೈತ ಬಂಡಾಯ ಹೋರಾಟವು ಕರ್ನಾಟಕ ರಾಜ್ಯ ರೈತ ಸಂಘದ ಉಗಮಕ್ಕೆ ಕಾರಣವಾಗಿ, ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಿಸಿದ ರೈತ ಬಂಡಾಯ ಹೋರಾಟ ಇಂದು ಎತ್ತ ಕಡೆ ಸಾಗುತ್ತಿದೆ…..???

ಹುತಾತ್ಮರ ಆದರ್ಶಗಳು, ನೇತಾರರ ಆಶಯಗಳು, ಸಂಘದ ನೀತಿ ನಿಯಮಗಳನ್ನು ಮರೆತು ಮಂತ್ರಗಳನ್ನು ಪಠಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದನ್ನು ನೋಡಿದರೆ, ರೈತ ಸಂಘ ದಂತಹ ರೈತ ಸಂಘಗಳು ಕೂಡ ಆರತಿ ಮತ್ತು ತೀರ್ಥಕ್ಕೆ ಸೀಮಿತವಾಗಿ ಬಿಟ್ಟವೆ ಎಂಬುದು ಹಲವು ಮೂಲ ರೈತ ಹೋರಾಟಗಾರರ ಆತಂಕವಾಗಿದೆ.

ಆಳುವ ಸರ್ಕಾರವನ್ನು ಉರುಳಿಸಿ, ಹೊಸ ಸರ್ಕಾರದ ರಚನೆಗೆ ಮುನ್ನುಡಿ ಬರೆದ ರೈತ ಹೋರಾಟದ ಇತಿಹಾಸವನ್ನು ಎಷ್ಟರಮಟ್ಟಿಗೆ ಇಂದಿನ ರೈತ ಹೋರಾಟಗಾರರು, ರೈತ ಸಂಘದ ಇತಿಹಾಸವನ್ನು ಮತ್ತು ಅದರ ಸಿದ್ದಾಂತವನ್ನು ಅರಿಯಲು ಸಾಧ್ಯವಾಗಿದೆ ಎಂಬುದು ಚಿಂತಿಸಬೇಕಾದ ವಿಷಯವಾಗಿದೆ.

ರೈತ ಚಳುವಳಿಯ ಮಹತ್ವ ಮತ್ತು ಮೌಲ್ಯವನ್ನು ಪ್ರತಿರೋಧದ ಹೊಸ ಆಯುಧಗಳೊಂದಿಗೆ ಯುವ ಸಮುದಾಯಕ್ಕೆ ದಾಟಿಸಬೇಕಾಗಿದೆ.

ಆದರ್ಶಗಳು,ಆಶಯಗಳು ಸಿದ್ಧಾಂತಗಳು, ಚಳುವಳಿಯ ಚಹರೆಗಳು , ಒಂದು ಕಾರ್ಯಕ್ರಮದ ರೂಪರೇಷೆಗಳು ಹೇಗಿರಬೇಕು ಎಂಬುದನ್ನು ರೈತ ಸಂಘಟನೆಯಂತಹ ಮುಖ್ಯಸ್ಥರು ಅರಿಯದಿದ್ದರೆ , ನಗುವವರ ಮುಂದೆ ಎಡವಿ ಬಿದ್ದಂತೆ ಆಗಬಹುದು.

ಇದಕ್ಕೆ ಉದಾಹರಣೆ ನೆನ್ನೆ ಚಿಕ್ಕಮಗಳೂರು ಅಜಾದ್ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಸಂಘಟನೆಯ ಆಶ್ರಯದಲ್ಲಿ ನಡೆದ ಹುತಾತ್ಮ ದಿನಾಚರಣೆಯ ಕಾರ್ಯಕ್ರಮವನ್ನು, ಕೆಲವರಿಗಷ್ಟೇ ಅರ್ಥವಾಗುವ ಸಂಸ್ಕೃತದ ಶ್ಲೋಕದ ಮೂಲಕ ಉದ್ಘಾಟನೆ ಮಾಡುವ ಅಗತ್ಯತೆ ಇತ್ತೆ, ರೈತ ಚಳುವಳಿಗೆ ಹೊಸ ಸಂಚಲನ ಮೂಡಿಸಿದ ರೈತ ಗೀತೆಗಳು ಹೋರಾಟಗಾರರ ನಾಲಿಗೆಯ ಮೇಲಿಂದ ಯಾಕೆ ಮಾಯವಾದವು ಎಂಬ ಅಂಶ ಈ ಸಮಯದಲ್ಲಿ ಎದ್ದು ಕಾಣುತ್ತಿತ್ತು.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದರು ಕೂಡ , ಇಂದಿಗೂ ಒಂದಲ್ಲ ಒಂದು ರೀತಿ ರೈತರ ಬದುಕು ಮತ್ತು ಬವಣೆಗಳನ್ನು ಸರಿಯಾಗಿ ಅರಿಯದೆ, ಆ ರೈತರ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಹೊದಿಸಿ, ರೈತರು ನಡೆಯುವ ದಾರಿಗೆ ಮೊಳೆಯನ್ನು ನೆಟ್ಟು ಗಾಯ ಮಾಡುವಂತಹ ರಾಜಕೀಯ ಪಕ್ಷದ ಪ್ರಮುಖರು ಇಂದಿನ ಕಾರ್ಯಕ್ರಮದ ಅತಿಥಿಗಳಾಗಿದ್ದು ವಿಶೇಷವಾಗಿತ್ತು.

ಇದನ್ನೆಲ್ಲ ನೋಡಿದ , ರೈತ ಸಂಘದ ಕೆಲವು ಹಿರಿಯ ಕಾರ್ಯಕರ್ತರು ಸಾರ್ಥಕವಾಯಿತು ಎಂಬ ನಿಡುಗಾಲದ ನಡುವಿನಲ್ಲಿ ನಿಂತು ಸಂಕಟದ ಉಸಿರನ್ನು ಬಿಟ್ಟವರಂತೆ ಕಾಣುತ್ತಿತ್ತು.

ನಗರದಲ್ಲಿ ನಡೆದ,ಈ ರೖತ ಹುತಾತ್ಮರ ದಿನಾಚರಣೆ ಯಲ್ಲಿ ಗುಂಡುಹೊಡೆದವರು ಗುಂಡು ಹೊಡೆಸಿಕೊಂಡವರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ರೖತ ಹುತಾತ್ಮರಿಗೆ ಕನ್ನಡೇತರ ಭಾಷೆಯ ಪಠಣದೊಂದಿಗೆ ಪುಷ್ಪಾರ್ಚನೆ ಮಾಡಿ, ಹುತಾತ್ಮರ ಆತ್ಮ ಮಗ್ಗಲು ಬದಲಿಸಿದಂತೆ ಮಾಡಿದರು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರೈತ ಹುತಾತ್ಮರಿಗೆ ಗೌರವ ಸಲ್ಲಿಸಿರುವ ಕಾರ್ಯಕ್ರಮದ ವಿಧಾನವನ್ನು, ಚಿಕ್ಕಮಗಳೂರಿನ ಹುತಾತ್ಮ ದಿನಾಚರಣೆ ಆಚರಿಸಿದ ರೈತ ಮುಖಂಡರು ಅತ್ತಕಡೆ ಒಮ್ಮೆ ಮುಖ ಮಾಡಿ ನೋಡಬೇಕಾಗಿರುವುದು ಒಳಿತು ಎಂದೆನಿಸಿತು. ಈ ರೀತಿ ಕಾರ್ಯಕ್ರಮ ಬಹುಶಃ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ನಡೆದಿರಲಾರದು .

ನಲವತೖದು ವರ್ಷಗಳ ರೖತ ಚಳುವಳಿಗೆ ಅಳಿಸಲಾಗದಂತಹ ಮಸಿ ಬಳಿಯಲಾಗಿದೆ. ಬದಲಾದ ಸಂದರ್ಭದಲ್ಲಿ ರಾಜ್ಯ ರೈತ ಸಂಘ ತನ್ನ ಮೂಲ ಸಿದ್ಧಾಂತವನ್ನು ಬದಿಗೊತ್ತಿ ವ್ಯವಸ್ಥೆಯೊಂದಿಗೆ ರಾಜಿ ಆಗುವಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಚಳುವಳಿಯ ಹಿನ್ನೆಲೆ ಗೊತ್ತಿಲ್ಲದ ಸೈದ್ಧಾಂತಿಕ ವೈಜ್ಞಾನಿಕ ಮನೋಭಾವವಿಲ್ಲದವರಿಗೆ, ಚಳುವಳಿಯ ಜವಾಬ್ದಾರಿ ವಹಿಸಿದರೆ ಎಂತಹ ಅನಾಹುತ ಸೃಷ್ಟಿಸಬಹುದು ಎಂಬುದಕ್ಕೆ ಚಿಕ್ಕಮಗಳೂರಿನ ರೈತ ಹುತಾತ್ಮರ ದಿನಾಚರಣೆ ಉದಾಹರಣೆಯಾದಿತು.

ಜನಪರ ಹಿನ್ನೆಲೆ ಇರುವ . ಕಮ್ಯುನಿಸ್ಟ್ ಸಿದ್ಧಾಂತದೊಂದಿಗೆ ನಡೆದುಕೊಳ್ಳುತ್ತಿರುವ ಕಮ್ಯುನಿಸ್ಟ್ ಪಕ್ಷದ ರಾಧಾ ಸುಂದರೇಶ್ ಮತ್ತು ರೈತ ಸಂಘದ ಹಿರಿಯ ಮುಖಂಡರಾದ ಕೃಷ್ಣೆಗೌಡರಂಥವರು ವೇದಿಕೆಯ ಮೇಲಿದ್ದರೂ ಕೂಡ ಇದನ್ನು ಪ್ರತಿಭಟಿಸದೆ ಮೌನಕ್ಕೆ ಜಾರಿದ್ದು ಹಲವು ಹೋರಾಟಗಾರರಿಗೆ ಮುಜುಗರವಾಗಿದ್ದು ಕಂಡುಬಂದಿತು.

ಬದಲಾದ ವ್ಯವಸ್ಥೆ ಎಂತಹವರನ್ನು ರಾಜಿ ಮಾಡಿಸುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ರೈತ ಸಂಘದ ಕಚೇರಿ ಎರಡನೇ ನಿತ್ಯಾನಂದನ ಆಶ್ರಮ ಆದರೂ ಅಚ್ಚರಿಪಡಬೇಕಾಗಿಲ್ಲ, ಆದರೆ ಈ ಸ್ಥಿತಿಗೆ ರೈತ ಸಂಘ ಜಾರದಿರಲಿ.

ಹಿರಿಯ ಹೋರಾಟಗಾರರು ರೈತ ಸಂಘದ ಅಭಿಮಾನಿಗಳು ಚಳುವಳಿಯಿಂದ ಹೊರಗಿರುವವರು ಆಲೋಚಿಸಿ,ರೈತ ಸಂಘಟನೆ ತನ್ನ ಸಿದ್ಧಾಂತದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ, ರೈತ ಸಂಘವು ತನ್ನ ಸಿದ್ದಾಂತ ಮತ್ತು ವಿಚಾರಕ್ಕೆ ಪೂರಕವಾಗಿ ನಡಾವಳಿಗಳನ್ನು ರೂಡಿಸಿಕೊಂಡು ಮುಂದುವರಿಸುವ ನಾಯಕತ್ವಕ್ಕೆ ಬೆಂಬಲ ಕೊಡಬೇಕಾಗಿದೆ.

Did the farmer’s organization give way? Where is the journey to?

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು: : ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ...

ದೇವನಹಳ್ಳಿ 1,777 ಎಕರೆ ಭೂ ಸ್ವಾಧೀನ ನೋಟಿಫಿಕೇಶನ್ ರದ್ದು

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ ಒಟ್ಟ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ರೈತರು,...

Related Articles

ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪ್‌ಸಿಂಗ್

ಚಿಕ್ಕಮಗಳೂರು:  ಪರಾಕ್ರಮ-ಆದರ್ಶ ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪಸಿಂಗ್ ಎಂದು ಕರ್ನಾಟಕ ರಜಪೂತ ಮಹಾಸಭಾ ನಿರ್ದೇಶಕ ಬೆಂಗಳೂರಿನ...

ದತ್ತು ಸಂಸ್ಥೆಯ ಸಿಬ್ಬಂದಿ ಆಯಾ ಅಮಾನತು

ಚಿಕ್ಕಮಗಳೂರು: ನಗರದ ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗು ಸುಟ್ಟ...

ವೈದ್ಯ ಇಲ್ಲದ ಕಳಸ ತಾಲೂಕು ಆಸ್ಪತ್ರೆ

ಚಿಕ್ಕಮಗಳೂರು: ಕಳಸ ತಾಲೂಕು ಆಸ್ಪತ್ರೆಯಲ್ಲಿ ಓರ್ವ ವೈದ್ಯರೂ ಇಲ್ಲದೆ ಜನರು ಚಿಕಿತ್ಸೆಗೆ ಪರದಾಡುವಂತಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು...

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ವಿದ್ಯಾರ್ಥಿಗಳು ದೃಢ ಆತ್ಮವಿಶ್ವಾಸ, ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಳ್ಳ ಬೇಕೆಂದು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ...