ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್ 13 ರಂದು ನಡೆಯಲಿದೆ.
ಚಿಕ್ಕಮಗಳೂರು ಉಪವಿಭಾಗಧಿಕಾರಿಯವರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಿದ್ದು ಚಿಕ್ಕಮಗಳೂರು ತಹಶಿಲ್ದಾರರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.
ಬ್ಯಾಂಕ್ ನ 13 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಬಿಜೆಪಿಯವರು ಪ್ರಸ್ತುತ ಅಧಿಕಾರದ ಚುಕ್ಕಾಣಿ ಹಿಡಿದು ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಅಧ್ಯಕ್ಷರಾಗಿ ಅತ್ಯುತ್ತಮ ಬ್ಯಾಂಕ್ ಕಟ್ಟಡ ನಿರ್ಮಿಸಿರುವುದು ಸೇರಿದಂತೆ ರೈತರಿಗೆ ಸಕಾಲದಲ್ಲಿ ಸಾಲ ದೊರೆಯುವಂತೆ ಮಾಡಿದ್ದಾರೆ.
ಸಹಕಾರ ಕ್ಷೇತ್ರದ ಇತಿಹಾಸದಲ್ಲಿ ಘಾಟಾನುಘಟಿ ಸಹಕಾರಿಗಳು ಅತ್ಯುನ್ನತ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ಹಾತೊರೆದರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರಲಿಲ್ಲ.ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಇದೇ ಅವಧಿಯಲ್ಲಿ ದಾಖಲೆ ಬರೆದಿದ್ದಾರೆ.
ಮತ್ತೆ ಚುನಾವಣೆ ನಿಗಧಿಯಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದಾರೆ ಹೀಗಾಗಿ ಕುತೂಹಲ ಹುಟ್ಟಿಸಿದೆಯಾದರೂ ಒಂದಿಬ್ಬರು ಗೆದ್ದರೆ ಹೆಚ್ಚು ಎನ್ನುತ್ತಿದ್ದಾರೆ. ಏಕೆಂದರೆ ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಕೈ ಕಟ್ಟಿ ಕುಳಿತಿದ್ದೇ ಹೆಚ್ಚು. ಈಗಲೂ ಕೂಡ ಅದೇ ಸ್ಥಿತಿ ಯಥಾಸ್ಥಿತಿ ಎನ್ನುತ್ತಿದ್ದಾರೆ.
ಸಹಕಾರ ಸಂಘಗಳಿಗೆ ನಡೆದ ಚುನಾವಣೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಬಿಜೆಪಿಯವರು ಮತ್ತೊಂದು ಅವಧಿಯ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಮೂಡಿಗೆರೆಯಲ್ಲಿ ಬಹುತೇಕ ಸೊಸೈಟಿಗಳನ್ನು ಬಿಜೆಪಿಯವರು ಹಿಡಿತಕ್ಕೆ ಪಡೆದಿದ್ದಾರೆ ಕಾಂಗ್ರೆಸ್ ಕೊಪ್ಪ ದಲ್ಲಿ ಮಾತ್ರ ದಾರಿ ಸುಗಮ ಮಾಡಿಕೊಂಡಿದೆ.
DCC Bank Election on September 13
Leave a comment