Home namma chikmagalur chikamagalur ರಾಜಕೀಯ ಅಸಮಾನತೆ ವಿರುದ್ಧ ಪರ್ಯಾಯ ರಾಜಕೀಯ ಕಡೆ ದಲಿತ ಸಮುದಾಯದ ಮರಳಬೇಕು
chikamagalurHomeLatest Newsnamma chikmagalur

ರಾಜಕೀಯ ಅಸಮಾನತೆ ವಿರುದ್ಧ ಪರ್ಯಾಯ ರಾಜಕೀಯ ಕಡೆ ದಲಿತ ಸಮುದಾಯದ ಮರಳಬೇಕು

Share
Share

ಚಿಕ್ಕಮಗಳೂರು: ಪ್ರಸಕ್ತ ರಾಜಕೀಯ ಅಸಮಾನತೆಯನ್ನು ಮತ್ತು ದೌರ್ಜನ್ಯವನ್ನು ಮನಗಂಡು ಪರ್ಯಾಯ ರಾಜಕೀಯದ ಕಡೆಗೆ ಸಮಸ್ತ ದಲಿತ ಸಮುದಾಯದ ಪ್ರಜ್ಞಾವಂತರು ಮರಳಬೇಕಾದ ಅಗತ್ಯ ಇದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಲವಾರು ವರ್ಷಗಳ ಅಧಿಕಾರದಲ್ಲಿ ದಲಿತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಇಂದಿನವರೆಗೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇರುವ ದಲಿತ ಸಮುದಾಯದ ಮುಖಂಡರು ಈ ರಾಜಕೀಯ ಅಸಮಾನತೆಯನ್ನು ಖಂಡಿಸಿ ಪಕ್ಷದಿಂದ ಹೊರಬಂದು ಸ್ವಾಭಿಮಾನದಿಂದ ಸ್ವತಂತ್ರ ರಾಜಕೀಯ ಮಾಡಬೇಕಾಗಿದೆ ಎಂದು ಹೇಳಿದರು.

ದಲಿತ ಸಮುದಾಯವನ್ನು ಪಕ್ಷದಲ್ಲಿ ಗುರ್ತಿಸಿಕೊಂಡಿರುವ ಮುಖಂಡರು ದಿಕ್ಕುತಪ್ಪಿಸಿದಂತಾಗುತ್ತದೆ, ಮುಂದಿನ ಪೀಳಿಗೆಯ ರಾಜಕೀಯ ಪ್ರಾತಿನಿಧ್ಯಕ್ಕೆ ಇದು ಮಾರ್ಗವಾಗಿದ್ದು, ದಸಂಸ ಯಾವುದೇ ಜಾತಿಗೆ ಸಿಕ್ಕಿ ಸ್ಥಾನಮಾನವನ್ನು ಗೌರವಿಸುತ್ತದೆ ಆದರೆ ದಲಿತರ ಓಟು ಪಡೆದು ಅಧಿಕಾರಕ್ಕೆ ಬಂದ ನಂತರ ಸಮುದಾಯವನ್ನು ಮರೆತಿರುವ ಸೂಕ್ತ ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆ ಕಾಲಘಟ್ಟದ ಪರಿಸ್ಥಿತಿಯನ್ನು ಅರಿತು ಕಾಂಗ್ರೆಸ್ ಪಕ್ಷ ಒಂದು ಸುಡುವ ಮನೆ ಎಂದು ಹೇಳಿದ್ದಾರೆ. ಅದು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು, ರಾಜಕೀಯ ಅಸಮಾನತೆ, ರಾಜ್ಯದಲ್ಲಿ ಅಧಿಕಾರ ನಡೆಸುವ ಕಾಂಗ್ರೆಸ್ ಪಕ್ಷ ಜಿಲ್ಲೆಯ ದಲಿತ ಬಾಂಧವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಸ್ವತಂತ್ರ ಬಂದು ೭೮ ವರ್ಷ ಕಳೆದರೂ ರಾಜಕೀಯ ಪಕ್ಷಗಳಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನಗಳು ಲಭಿಸಿಲ್ಲ, ಅದೇ ರೀತಿ ಜಿಲ್ಲೆಯಲ್ಲಿಯೂ ಕೂಡ ರಾಜಕೀಯ ತಾರತಮ್ಯ ಅನುಸರಿಸಿ ದಲಿತ ಸಮುದಾಯಕ್ಕೆ ಯಾವುದೇ ಸೂಕ್ತ ಸ್ಥಾನಮಾನ ನೀಡದೆ ಸಾಮಾಜಿಕ, ಆರ್ಥಿಕವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರುಗಳಾದ ವಿರೂಪಾಕ್ಷ, ಮಂಜುನಾಥ್, ಚಿದಾನಂದ, ಅರುಣ್‌ಕುಮಾರ್, ಕುಶಾಲ್ ಉಪಸ್ಥಿತರಿದ್ದರು.

Dalit community must return to alternative politics against inequality

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಉಮೇಶ್ ಜಮೀನು ಕೆಲಸಕ್ಕೆ ತೆರಳಿದ್ದ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನಯ್ ಬಿ.ಕೆ....

Related Articles

ನಿಗಮದ ಸಾಲದ ಬಡ್ಡಿ ಮನ್ನಾಗೆ ಸಿ.ಟಿ.ರವಿ ಖಂಡನೆ

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿಯನ್ನ ತೀವ್ರವಾಗಿ...

ಜಿಲ್ಲಾಸ್ಪತ್ರೆಗೆ ಎಂಎಲ್ಸಿ ಸಿ.ಟಿ. ರವಿ ಭೇಟಿ

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ...

ಸ್ನಾನಕ್ಕೆ ಇಳಿದಿದ್ದ ಯುವಕ ಕೆರೆಯಲ್ಲಿ ನಾಪತ್ತೆ

ಕಳಸ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಅಂಬಾತೀರ್ಥದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಭದ್ರಾ...

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಮಹಿಳೆಗೆ ವಂಚನೆ

ಚಿಕ್ಕಮಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಅಮಿಷಕ್ಕೆ ಒಳಗಾದ ಮಹಿಳೆಯೊಬ್ಬರು...