ಚಿಕ್ಕಮಗಳೂರು: ಸದೃಢ ರಾಜ್ಯ ನಿರ್ಮಾಣ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊ ಂಡು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಅಧಿಕಾರ ಗದ್ದುಗೆಗೆ ಮುಖ್ಯ ರೂವಾರಿಯಾದ ಡಿ.ಕೆ.ಶಿವ ಕುಮಾರ್ ಸಂಘಟನಾ ಚತುರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ಯುವಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ಧ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಿಕೆಶಿಯವರ ರಾಜಕೀಯ ಆರಂಭದಲ್ಲಿ ಯುವಕಾಂಗ್ರೆಸ್ ಘಟಕದಿಂದ ಪಾದಾರ್ಪಣೆ ಮಾಡಿ ಯುವ ಕರಿಗೆ ಪ್ರೇರಣೆ ನೀಡಿದವರು. ಹಂತ ಹಂತವಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತು ಇದೀಗ ಕೆಪಿಸಿಸಿ ಅಧ್ಯ ಕ್ಷರಾಗಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಯುವಪೀಳಿಗೆಯ ನಾಯಕ ಡಿಕೆಶಿಯವರ ಜನ್ಮದಿನವನ್ನು ಒಳ್ಳೆಯ ಕಲ್ಪನೆ, ಚಿಂತನೆಗಳಡಿ ಆಚರಿಸಲು ಯುವಕಾಂಗ್ರೆಸ್ ಜೀವ ಉಳಿಸುವಂಥ ರಕ್ತದಾನದ ಮೂಲಕ ಆಚರಿಸಿರುವುದು ಖುಷಿಯ ವಿಚಾರ. ಜೊತೆ ಯಲ್ಲಿ ಸಮಾಜದ ಪರವಾಗಿ ಶಾಂತಿ, ನೆಮ್ಮದಿ ಹಾಗೂ ಸಂವಿಧಾನ ಉಳಿಸುವಂಥ ಗಟ್ಟಿಯಾದ ಹೆಜ್ಜೆ ಹಾ ಗೂ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮವನ್ನು ಯುವಕಾಂಗ್ರೆಸ್ ರೂಪಿಸಲಿ ಎಂದು ಆಶಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ವಿಶೇಷವಾಗಿ ಡಿಕೆಶಿಯವರ ಜನ್ಮದಿನವನ್ನು ಕಾರ್ಯಕರ್ತರು ರಕ್ತದಾನ ಮೂಲಕ ಪಕ್ಷಕ್ಕೆ ಪ್ರೇರಣೆಯಾಗುವಂತೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ರಾಜ್ಯಸರ್ಕಾರ ನಾಡಿನ ಜನತೆಗೆ ಕೊಟ್ಟಂಥ ಭರವಸೆಗಳನ್ನು ಈಡೇರಿಸುವ ಮೂಲಕ ಜೋಡೆತ್ತು ಗಳಂತೆ ಸಾಗುತ್ತಿವೆ ಎಂದರು.
ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆದಿಲ್ ಮಾತನಾಡಿ ಯುವಪೀಳಿಗೆಗೆ ಸಮರ್ಥ ನಾಯಕರಾ ಗಿ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್ ಯುವಕಾರ್ಯಕರ್ತರಿಗೆ ಸ್ಪೂರ್ತಿನಾಯಕ. ಇವರ ಮಾ ರ್ಗದರ್ಶನದಲ್ಲಿ ರಾಜ್ಯವು ಅತ್ಯಧಿಕ ಸ್ಥಾನಗಳನ್ನು ಗೆಲುವು ಸಾಧಿಸಿ ಅಧಿಕಾರ ಹಿಡಿದು ಎರಡು ವರ್ಷಗಳು ಪೂರೈಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಸುಮಾರು ೫೦ಕ್ಕೂ ಹೆಚ್ಚು ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್, ಯುವಕಾಂಗ್ರೆಸ್ ಮು ಖಂಡರಾದ ಅಭಿ, ಸೌದ್, ಮುಬಕರ್, ಸನ್ನಿದ್, ಶಮತ್, ಲಾಕೇಶ್, ಅಂತಕರಣ ಮತ್ತಿತರರಿದ್ದರು.
D.K. Shivakumar’s organizational skills in building a party
Leave a comment