- ಚಿಕ್ಕಮಗಳೂರು :
ಸಿ.ಟಿ.ರವಿ ರಾಜ್ಯ ಬಿಜೆಪಿ ನಾಯಕ ಸತತ ನಾಲ್ಕು ಬಾರಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ಪ್ರತಿನಿಧಿಸಿದ ದಾಖಲೆ ಇದೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯ
ಸಿ.ಟಿ.ರವಿ ಸದಾಕಾಲವೂ ರಾಜ್ಯ ಸುತ್ತುವ ಮುಖಂಡ. ಬೀದರ್ ನಿಂದ ಚಾಮರಾಜನಗರದವರೆಗೆ, ಕೋಲಾರದಿಂದ ಕಾರವಾರದ ತನಕ ಓಡಾಡುವ ವಾಚಾಳಿ. ಮಂಡ್ಯಕ್ಕೆ ಉರಿಗೌಡ, ನಂಜೇಗೌಡರನ್ನು ಹುಟ್ಟ ಹಾಕಿ ಆದಿಚುಂಚನಗಿರಿ ಸ್ವಾಮಿಜೀ ಯಿಂದ ಗುಮ್ಮಿಸಿಕೊಂಡ ನಂತರ ತೆಪ್ಪಗಾದವರು ಪ್ರತಿ ವಿಚಾರದಲ್ಲಿ ಬಾಯಿ ತೆರೆದು ಅಬ್ಬರಿಸುವ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ತಮ್ಮಯ್ಯ ಲೆಕ್ಕಕ್ಕೆ ಇಲ್ಲ ಎಂಬ ಅತೀ ಉತ್ಸಾಹ ಹಾಗೂ ಪಕ್ಷದವರಿಂದಲೇ ಒಳಏಟು ತಿಂದ ಅನುಭವ ಇದೆ. ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಸಿ.ಟಿ.ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೆತ್ತಗಾದಂತೆ ಕಂಡುಬರುತ್ತಿದೆ. ಇದು ತಂತ್ರಗಾರಿಕೆ ಎನ್ನುವುದಕ್ಕಿಂತ ಕ್ಷೇತ್ರದಲ್ಲಿ ಇರುವ ವೀರಶೈವ ಲಿಂಗಾಯತರ ಮತಗಳಿಗಾಗಿ ಗೇಮ್ ಆಡುತ್ತಿದ್ದಾರೆ ಎನ್ನುವುದಕ್ಕೆ ಅಭಿವೃದ್ಧಿ ಕೆಲಸಕ್ಕೆ ನನ್ನ ಬೆಂಬಲ ಎಂದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಅಬ್ಬರಿಸುತ್ತಾರೆ ಅಂದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಇಲ್ಲ ಎಂದ ಮೇಲೆ ಚಿಕ್ಕಮಗಳೂರಲ್ಲಿ ಅಭಿವೃದ್ಧಿ ಕೆಲಸ ಹೇಗೆ ನಡೆಯುತ್ತವೆ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಕೊಡುವವರು ಯಾರು ?
ಚಿಕ್ಕಮಗಳೂರಿನಲ್ಲಿ ಸೇಫ್ ಗೇಮ್ ಆಡಿ ರಾಜ್ಯದಲ್ಲಿ ಮತ್ತೊಂದು ರೀತಿಯ ಗೇಮ್ ಆಡುತ್ತಿರುವುದು ನಗೆಪಾಟಲೆಗೆ ಕಾರಣವಾಗಿದೆ.
Leave a comment