ಕೊಪ್ಪ : ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚೀಲ ಗೊಬ್ಬರ ಬೇಕು ಅಂತ ಹೋದ್ರೆ ನಾಲ್ಕೈದು ಗಂಟೆ ಕಾಯಿಸುತ್ತಾರೆ. ರಾಜ್ಯದ ಕೃಷಿ ಸಚಿವರು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೃಂಗೇರಿಯ ಹರಂದೂರು ದ್ಯಾವೇಗೌಡ ಮೆಮೋರಿಯಲ್ ನಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯ ಕೃಷಿ ಸಚಿವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಒಂದು ಟಿ ಸಿ ಕನೆಕ್ಷನ್ ಪಡೀಬೇಕಾದ್ರೆ ಕುಮಾರಣ್ಣನ ಆಡಳಿತದಲ್ಲಿ 25ಸಾವಿರ ಇತ್ತು, ಈಗ ಎರಡೂವರೆ ಲಕ್ಷ ಆಗಿದೆ. ನೀವು ಏನ್ ಸರ್ಕಾರ ಮಾಡ್ತಿದ್ದೀರಾ ಅಂತ ರೈತರು ಪ್ರಶ್ನೆ ಮಾಡ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಅರಣ್ಯ ಪ್ರದೇಶದೊಳಗೆ ಜಾನುವಾರು ಮೇಯಿಸುವುದಕ್ಕೆ ನಿಷೇಧ ಸಚಿವ ಈಶ್ವರ್ ಖಂಡ್ರೆ ಆದೇಶಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳಿಂದ ಸರ್ಕಾರ ಆಡಳಿತ ಕುಸಿಯುತ್ತಿದೆ ಎಂದು ನೋಡಬಹುದು.ಶೃಂಗೇರಿ ಕ್ಷೇತ್ರದಲ್ಲಿ ಎಲ್ಲಾ ಕಡೆ ರಸ್ತೆಗಳು ಗುಂಡಿ ಬಿದ್ದಿದೆ. ಇದನ್ನ ಮುಚ್ಚುವುದಕ್ಕೂ ಈ ಸರ್ಕಾರದ ಬಳಿ ಹಣವಿಲ್ಲ ಎಂದು ವ್ಯಂಗ್ಯವಾಡಿದರು.
ಇಲ್ಲಿ ಸಾಕಷ್ಟು ಜನ ಮನೆಗಳನ್ನ ನಿರ್ಮಿಸಿಕೊಂಡಿದ್ದಾರೆ ಅವರಿಗೆ ಹಕ್ಕು ಪತ್ರ ನೀಡಿಲ್ಲ, ಯಾವುದೇ ರೀತಿಯಲ್ಲೂ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಇಲ್ಲಿಯವರೆಗೂ ಕಾಂಗ್ರೆಸ್ ಶಾಸಕರು ಕ್ಷೇತ್ರದ ಜನತೆ ಮೇಲೆ ಅಸಹಾಯಕಥೆ ತೋರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚಿಗೆ ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿಯ ಶಮಿತಾ ಎನ್ನುವ ವಿದ್ಯಾರ್ಥಿನಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ತಪ್ಪಾಗಿ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಪಾರದರ್ಶಕವಾಗಿ ತನಿಖೆಗೆ ನಾವು ಒತ್ತಾಯಿಸುತ್ತವೆ. ಇದನ್ನ ಕುಮಾರಣ್ಣನ ಗಮನಕ್ಕೆ ತಂದು ಗಂಭೀರವಾಗಿ ಪ್ರಕರಣವನ್ನ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮಾಡಿ ಎಂದು ಕೋರ್ಟ್ ಸೂಚನೆ ನೀಡಿದೆ.ಆದ್ರೆ ಚುನಾವಣೆ ಮಾಡಲು ಸರ್ಕಾರಕ್ಕೆ ಆತ್ಮವಿಶ್ವಾಸವಿಲ್ಲ. ಮೂರು ವರ್ಷ ಎಷ್ಟು ಆಗುತ್ತೋ ಅಷ್ಟು ದುಡ್ಡು ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದರಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸಾಧನ ಸಮಾವೇಶ ಮಾಡಿದ್ರು, ರಾಜ್ಯದಲ್ಲಿ ಏನು ಸಾಧನೆ ಆಗಿದೆ ಅಂತ ಕಾಂಗ್ರೇಸ್ಸಿಗರೇ ಉತ್ತರ ಕೊಡಬೇಕು.ಈ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಕ್ಕಿಂತ ಕುರ್ಚಿ ಕಿತ್ತಾಟವೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಹೆಚ್.ಕೆ ಕುಮಾರಸ್ವಾಮಿ,ಸುಧಾಕರ್ ಶೆಟ್ಟಿ, ಹೆಚ್.ವಿ. ವೆಂಕಟೇಶ್, ರಂಜನ್ ಅಜೀತ್ ಕುಮಾರ್, ಶ್ರೀಮತಿ ರಶ್ಮಿ ರಾಮೇಗೌಡ, ಶ್ರೀಮತಿ ಕನ್ಯಾಕುಮಾರಿ, ಶ್ರೀಮತಿ ಪೂರ್ಣಿಮಾ, ಮುಖಂಡರಾದ ಶ ದಿವಾಕರ್ ಭಟ್, ರಾಮಸ್ವಾಮಿ ಖಗ್ಗ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Congress government is unable to provide fertilizer to farmers
Leave a comment