Home Latest News ಸಾರ್ವಜನಿಕರ ಆರೋಗ್ಯ ಕಾಪಾಡಲು ತಪಾಸಣಾ ಶಿಬಿರ ಸಹಕಾರಿ
Latest NewschikamagalurHomenamma chikmagalur

ಸಾರ್ವಜನಿಕರ ಆರೋಗ್ಯ ಕಾಪಾಡಲು ತಪಾಸಣಾ ಶಿಬಿರ ಸಹಕಾರಿ

Share
Share

ಚಿಕ್ಕಮಗಳೂರು: ಸಾರ್ವಜನಿಕರ ಆರೋಗ್ಯ ಕಾಪಾಡಲು ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ ಎಂದು ಮಾಜಿ ಸಚಿವ ಸಿ.ಆರ್. ಸಗೀರ್ ಅಹಮದ್ ತಿಳಿಸಿದರು.

ಅವರು ಐಜಿ ರಸ್ತೆಯ ಉರ್ದು ಶಾಲೆಯಲ್ಲಿ ನ್ಯಾಷನಲ್ ವೆಲ್‌ಫೇರ್ ಮತ್ತು ಚಾಲಿಟೇಬಲ್ ಟ್ರಸ್ಟ್ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜಕೀಯದಲ್ಲಿ ಯಾವ ಮುಸಲ್ಮಾನ ನೂರಾರು ಕೋಟಿ ರೂವರೆಗೆ ಲೂಟಿ ಹೊಡೆದಿಲ್ಲ, ಈ ಕುರಿತು ಬಿಜೆಪಿ ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದ್ರೋಹದ ಕೆಲಸ ಮಾಡುವ ವ್ಯಕ್ತಿ ಇಲ್ಲಿ ಬದುಕಲು ಅವಕಾಶವಿಲ್ಲ, ನಾವೆಲ್ಲಾ ಭಾರತ ಮಾತೆಯ ಮಕ್ಕಳು, ದೇಶ ಮತ್ತು ಪ್ರಜೆಗಳನ್ನು ರಕ್ಷಿಸಲು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಜಾತಿ ಸಮೀಕ್ಷೆ ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದಿಂದ ಎಲ್ಲಾ ಸಮುದಾಯದ ವರ್ಗದ ಜನರಿಗೆ ಅನುಕೂಲವಾಗಬೇಕು, ಯಾವುದೇ ಸರ್ಕಾರ ಅಸ್ಥಿತ್ವಕ್ಕೆ ಬರಬೇಕಾದರೆ ಪ.ಜಾ, ಪ.ಪಂ ಹಾಗೂ ಮುಸ್ಲಿಂರ ಬೆಂಬಲ ಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾದರೂ ಒಂದು ನಿವೇಶನ ವಿತರಿಸಿಲ್ಲ ಎಂದು ಆರೋಪಿಸಿದರು.

ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಂಗಳೂರಿನ ಆಸ್ಪತ್ರೆ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸುವ ಮೂಲಕ ಕಾರ್ಯಪ್ರವೃತ್ತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ ಎಂದ ಅವರು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಬಡವರು ಶ್ರೀಮಂತರು ಎಂಬ ಬೇಧ ಭಾವವಿಲ್ಲದೆ ಒಳ್ಳೆಯ ಮನಸ್ಸಿನಿಂದ ಜನರ ಆರೋಗ್ಯಕ್ಕೆ ಪೂರಕವಾದ ಉಚಿತ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿರುವುದು ಸಂತೋಷಕರ ಸಂಗತಿ, ಬ್ರೆಸ್ಟ್ ಕ್ಯಾನ್ಸರ್‌ಗೆ ತುತ್ತಾಗಿ ವಾರ್ಷಿಕ ೧೬ ಲಕ್ಷ ಮಹಿಳೆಯರು ನಿಧನರಾಗುತ್ತಿದ್ದಾರೆಂದು ವಿವರಿಸಿದರು.

ಇದರ ಜೊತೆಗೆ ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಇದನ್ನು ಮನಗಂಡು ಎಲ್ಲರೂ ಆಸ್ಪತ್ರೆಗೆ ಹೋಗು ಚಿಕಿತ್ಸೆ ಪಡೆಯಲು ಶಕ್ತರಾಗಿರುವುದಿಲ್ಲ, ಇಂತಹ ಶಿಬಿರಗಳಲ್ಲಿ ತಜ್ಞ ವೈದ್ಯರುಗಳನ್ನು ಕರೆತಂದು ಆ ಮೂಲಕ ಉಚಿತ ಚಿಕಿತ್ಸೆ ನೀಡುತ್ತಿರುವುದ ನಮ್ಮೆಲ್ಲರ ಭಾಗ್ಯ ಎಂದರು.

ಮಾಜಿ ಸಚಿವ ಸಗೀರ್ ಅಹಮದ್ ಅವರ ಶ್ರಮದ ಫಲವಾಗಿ ಚಿಕ್ಕಮಗಳೂರು ನಗರದ ಜನತೆ ಯಗಚಿ ನೀರು ಕುಡಿಯಲು ಸಹಕಾರಿಯಾಗಿದ್ದು, ಇದಕ್ಕಾಗಿ ಅವರನ್ನು ಅಭಿನಂದಿಸುತ್ತ ಸಮಾಜದಲ್ಲಿ ಸಿಕ್ಕಿದ ಅಧಿಕಾರವಧಿಯಲ್ಲಿ ಶಾಶ್ವತವಾದ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಣಚೂರು ಆಸ್ಪತ್ರೆಯ ಮುಖ್ಯಸ್ಥ ಡಾ. ಯು.ಕೆ. ಮೋಣು ಮಾತನಾಡಿ, ವರ್ಷವಿಡೀ ನಡೆಯುವ ಸಾಮೂಹಿಕ, ಸಾಮಾನ್ಯ ಉಚಿತ ವೈದ್ಯಕೀಯ ಶಿಬಿರಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಟ್ರಸ್ಟಿಗಳು ನಡೆಸುತ್ತಾ ಬರುತ್ತಿದ್ದಾರೆ. ಇದರಲ್ಲಿ ಅತ್ಯುತ್ತಮವಾಗಿ ಇಲ್ಲಿನ ನ್ಯಾಷನಲ್ ಟ್ರಸ್ಟ್ ಸಮಯಕ್ಕೆ ಸರಿಯಾಗಿ ಯಾವುದೇ ಜಾತಿ, ಮತ, ಭೇದವಿಲ್ಲದೆ ರೋಗಿಗಳಿಗೆ ಶುಶ್ರೂಷೆ ನಡೆಸಿ ಆರೋಗ್ಯ ಕಾಪಾಡುತ್ತಿದ್ದಾರೆ ಎಂದರು.

ರಾಜ್ಯದ ಹಲವಾರು ಆಸ್ಪತ್ರೆಗಳಲ್ಲಿ ಕಣಚೂರು ಆಸ್ಪತ್ರೆ ರೋಗಿಗಳ ಸೇವೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ, ನಂ ೧ನೇ ಸ್ಥಾನದಲ್ಲಿರುವ ಈ ಆಸ್ಪತ್ರೆ ಇನ್ನೂ ಹೆಚ್ಚಿನ ಸ್ಥಾನಮಾನ ಗಳಿಸಬೇಕೆಂಬ ಉದ್ದೇಶದಿಂದ ಹೃದಯ, ಕಿಡ್ನಿ ಕ್ಯಾನ್ಸರ್ ಇನ್ನೂ ಮುಂತಾದ ದೊಡ್ಡ ದೊಡ್ಡ ರೋಗಗಳಿಗೆ ಚಿಕಿತ್ಸೆ ನೀಡಬೇಕೆಂಬ ಗುರಿಯೊಂದಿಗೆ ನಿರ್ಧರಿಸಿ ತರಿಸಲಾಗಿರುವ ಸಲಕರಣೆಗಳನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದ್ದಾರೆ ಎಂದು ಹೇಳಿದರು.

ಈ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಕಾಯಿಲೆಗಳಿಗೆ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳು ದೊರೆಯಲಿವೆ, ರೋಗಿಗಳ ಅನುಕೂಲಕ್ಕಾಗಿ ಚಿಕ್ಕಮಗಳೂರಿನಿಂದ ಬಸ್ ಸೌಲಭ್ಯ ಸಹ ಏರ್ಪಡಿಸಲಾಗಿದ್ದು, ಇದರ ಸೌಲಭ್ಯ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಮಹಮದ್ ರಿಯಾಜ್ ಖಾನ್, ಉಪಾಧ್ಯಕ್ಷ ಸೈಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ, ಪ್ರಧಾನ ಕಾರ್ಯದರ್ಶಿ ಶಫೀಉಲ್ಲಾ, ಖಜಾಂಚಿ ಮಹಮದ್ ಯೂನಸ್ ಸಲೀಮ್, ಬಿ.ಎ. ಅಕ್ಮಲ್, ಇಕ್ಬಲ್ ಅಹಮದ್ ಖುರೇಷಿ, ಅನ್ವರ್ ಅಲಿ, ಪರ್ವೀಜ್, ಅಸ್ಲಮ್, ಫಯಾಜ್ ಅಹಮದ್, ಮಹಮದ್ ಜಿಯಾ, ನವೀದ್ ಪಾಷಾ, ರಪೀಕ್ ಅಹಮದ್, ಸುಹೀಲ್ ತಾಜ್, ಮಹಮದ್ ಇರ್ಷಾದ್, ಕೆ.ಟಿ. ರಾಧಾಕೃಷ್ಣ, ಅಂಜದ್, ಝಹೀರ್ ಸಾಬ್, ಮತ್ತಿತರರು ಉಪಸ್ಥಿತರಿದ್ದರು.

Check-up camps help protect public health

Share

Leave a comment

Leave a Reply

Your email address will not be published. Required fields are marked *

Don't Miss

ನೀರಿಗಾಗಿ ರೈತರು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿ

ಕಡೂರು: ಜಿಲ್ಲೆಯ ಪ್ರಮುಖ ಕೆರೆಯಾದ ಅಯ್ಯನಕೆರೆ ತುಂಬಿ ಹರಿಯುವ ನೀರನ್ನು ಕೆರೆಗಳಿಗೆ ಹರಿಸುವುದರಿಂದ ಅಂತರ್ ಜಲ ಹೆಚ್ಚಿಸಿ ಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ರೈತರು ಹೇಳುತ್ತಾರೆ. ಭದ್ರ ಉಪ ಕಣಿವೆ ಯೋಜನೆಯ...

ಮಕ್ಕಳಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಕ್ರೀಡಾ ಶಿಕ್ಷಕ

ತರೀಕೆರೆ: ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯಗಳ ಜೊತೆಗೆ ದೈಹಿಕ ಶಿಕ್ಷಣವು ಬಹು ಮುಖ್ಯ. ಮಕ್ಕಳ ಆಸಕ್ತಿ ಗಮನಿಸಿ ಪ್ರೋತ್ಸಾಹ ನೀಡುವುದರ ಜೊತೆಗೆ ತರಭೇತಿ ನೀಡಿದರೆ ತಾಲ್ಲೂಕು, ಜಿಲ್ಲೆ,ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಲು...

Related Articles

ಅಮೃತಮಹಲ್ ಕಾವಲ್ ಪ್ರದೇಶದ ಒತ್ತುವರಿ ತೆರವಿಗೆ ಸೂಚನೆ

ಚಿಕ್ಕಮಗಳೂರು: ಜಿಲ್ಲೆಯ ಅಮೃತಮಹಲ್ ಕಾವಲ್‌ನ ಒತ್ತುವರಿ ಪ್ರದೇಶದವನ್ನು ಕೂಡಲೇ ತೆರವುಗೊಳಿಸುವಂತೆ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ...

ಫೋಟೋ-ವಿಡಿಯೋಗ್ರಫಿ ಕೆನಾನ್ ಕ್ಯಾಮಾರಗಳು ಶ್ರೇಷ್ಠ

ಚಿಕ್ಕಮಗಳೂರು:  ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ಕ್ಷೇತ್ರದಲ್ಲಿ ಹೊಸ ಆಯಾಮ ವನ್ನು ಸೃಷ್ಟಿಸುವ ಕೆನಾನ್ ಕ್ಯಾಮರಾಗಳು ಛಾಯಾಗ್ರಾಹಕರ...

ಕೊಳಮಗೆ ಬಳಿಯ ಭದ್ರಾ ನದಿಗೆ ಬಿದ್ದ ಪಿಕ್‌ಅಪ್: ಯುವಕ ಸಾವಿನ ಶಂಕೆ

ಕಳಸ: ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ಭದ್ರಾನದಿಗೆ ಗುರುವಾರ ಮಧ್ಯಾಹ್ನ ಪಿಕ್‌ಅಪ್ ವಾಹನ ಬಿದ್ದಿದ್ದು, ಯುವಕನೊಬ್ಬ...

ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ

ಕೊಪ್ಪ : ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚೀಲ ಗೊಬ್ಬರ ಬೇಕು...