ತರೀಕೆರೆ: ತರೀಕೆರೆ ಕ್ಷೇತ್ರದಲ್ಲಿ ಕಂತು,ಕಂತು ದಂಧೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ .ಇದಕ್ಕೆ ಸಾಕ್ಷಿ ಎಂಬಂತೆ 2023 ರಲ್ಲಿ ರೆಕಾರ್ಡ್ ಮಾಡಿದ ವಿಡಿಯೋ ಹರಿದಾಡುತ್ತಿದೆ.
ಲಿಂಗದಹಳ್ಳಿ ಸಮೀಪದಲ್ಲಿ ಇರುವ ಹಬ್ಬೆ ಫಾಲ್ಸ್ ನೋಡಲು ಪ್ರವಾಸಿಗರು ಬರುತ್ತಾರೆ. ಇವರನ್ನು ಕರೆದುಕೊಂಡು ಹೋಗಲು ಸ್ಥಳೀಯ ಪಿಕಪ್ ವಾಹನಗಳನ್ನು ಬಿಡಲಾಗಿದೆ.ವಾಹನಗಳ ಮಾಲೀಕರು ಹಲವರಿಗೆ ಮಾಮೂಲಿ ನೀಡುತ್ತಿರುವುದು ಬಹಿರಂಗ ಸತ್ಯ.ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದೆ.ಇದರಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಶಾಸಕರು ಮಾಮೂಲಿ ಪಡೆಯುತ್ತಾರೆ ಎಂಬ ಸುದ್ದಿ ಗುಟ್ಟಾಗಿ ಉಳಿದಿಲ್ಲ.
ತರೀಕೆರೆ ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಮೇಶ್ ಎಂಬಾತನ ಜೊತೆ ಬಾಬು ನಾಯ್ಕ ಮಾತನಾಡಿರುವ ವೀಡಿಯೋದಲ್ಲಿ ಶಾಸಕ ಶ್ರೀನಿವಾಸ್ ಮತ್ತು ಅಕ್ಕಾ ನ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ.ಆದು 2023 ರಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಎಂದು ನಾಯ್ಕ ಹೇಳಿದ್ದು ನಿನ್ನೆ ಮತ್ತೊಂದು ವಿಡಿಯೋದಲ್ಲಿ ವಾಹನಗಳ ಮೇಲೆ ಸಾಲ ತೀರಿಸಲು ಮಾತನಾಡಿದ್ದು ಎಂದು ಹೇಳಿದ್ದಾನೆ.ಈತ ಹೇಳಿರುವುದು ಸತ್ಯ ಯಾವುದು ಎಂಬದು ಗೊತ್ತಾಗ ಬೇಕು ಇಲ್ಲ ಇಲ್ಲಿನ ಜನರ ಕಿವಿಗೆ ಹೂವು ಇಡುವ ಕೆಲಸ ಎಂದು ಹೇಳಬೇಕಾಗುತ್ತದೆ.
ನಿನ್ನೆ ಇಡೀ ದಿನ ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಏನು ನಡೆದಿದೆ ಮಹೇಂದ್ರ ಎಂಬುವನನ್ನು ಕೂರಿಸಿದ್ದು ಏಕೆ ? ಎರಡು ವಿಡಿಯೋದಲ್ಲಿ ಮಾತನಾಡಿರುವ ಬಾಬು ನಾಯ್ಕನ ಪಾತ್ರವೇನು? ಯಾರಿಂದ ಒತ್ತಡವಿದೆ ಎಂಬುದನ್ನು ಬಹಿರಂಗ ಪಡಿಸಲು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಪಾಪ ಭ್ರಷ್ಟಾಚಾರವೇ ಗೊತ್ತಿಲ್ಲದ ಜನರನ್ನು ಬೀದಿಗೆ ತಂದಿದ್ದು ಏಕೆ ? ಇದನ್ನು ಕೇಳಿದ ಜನ ನಗಬಾರದ ಜಾಗದಲ್ಲಿ ನಗೆಯಾಡುತ್ತಿದ್ದಾರೆ.ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಗುಡ್ಡೆ ಪಂಚಾಯತಿ ಬಗ್ಗೆ ಠಾಣಧಿಕಾರಿ ಕತೆ ಹೇಳುತ್ತಾರೆ. ಜೊತೆಗೆ ಯಾವ ದೂರು ಬಂದಿಲ್ಲ ಎನ್ನುತ್ತಾರೆ. ಆಗದರೆ ಮಹೇಂದ್ರ ಎಂಬುವನನ್ನು ಠಾಣೆಯಲ್ಲಿ ಕರೆದು ಕೂರಿಸಿದ್ದು ಏಕೆ ?ಯಾರ ಒತ್ತಡ ಇತ್ತು ? ಅಧಿಕಾರಸ್ಥರ ಕೈ ಗೊಂಬೆಯಂತೆ ವರ್ತಿಸುವ ಪೊಲೀಸ್ ರ ನಡವಳಿಕೆ ಬಗ್ಗೆ ಸಾರ್ವಜನಿಕರು ಸಂಶಯ ಪಡುವಂತೆ ಆಗಿದೆ.
ಲಿಂಗದಹಳ್ಳಿ ಸುತ್ತ ಮುತ್ತ ನಡೆಯುತ್ತಿರುವ ದಂಧೆಗಳು ಹಲವು ಹಬ್ಬೆ ಫಾಲ್ಸ್ ದಂಧೆಯ ಜೊತೆಗೆ ಕೆಮ್ಮಣ್ಣುಗುಂಡಿ ಜಂಗಲ್ ರೆಸಾರ್ಟ್,ಹೋಮ್ ಸ್ಟೇಗಳಲ್ಲಿ ಆಕ್ರಮವಾಗಿ ನಡೆಯುವ ದಂಧೆಗಳಿಗೆ ಯಾರ ಕುಮ್ಮಕ್ಕು ಇದೆ.ತಣಗೆಬೈಲು ಸಮೀಪ ವಿ ಐ ಎಸ್ ಎಲ್ ಜಾಗ ಸಮತಟ್ಟು ಮಾಡಿ ಜನರಿಂದ ಮೂವತ್ತರಿಂದ ಐವತ್ತು ಸಾವಿರ ಹಣ ವಸೂಲಿ ಮಾಡಿರುವುದು ಯಾರು ? ಆಕ್ರಮ ಮರ ಸಾಗಣೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಇನ್ನೂ ಪಟ್ಟಿ ಮಾಡುತ್ತಾ ಹೋದರೆ ಇದು ಜಂಗಲ್ ಆಡಳಿತ ಎನ್ನಬೇಕು .
Cat and mouse in Tarikere area
Leave a comment