ಚಿಕ್ಕಮಗಳೂರು: ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ಕ್ಷೇತ್ರದಲ್ಲಿ ಹೊಸ ಆಯಾಮ ವನ್ನು ಸೃಷ್ಟಿಸುವ ಕೆನಾನ್ ಕ್ಯಾಮರಾಗಳು ಛಾಯಾಗ್ರಾಹಕರ ಅನುಕೂಲತೆಗೆ ತಕ್ಕಂತೆ ಬಹಳಷ್ಟು ತಂತ್ರಾಂಶ ವನ್ನು ಅಡಕಗೊಳಿಸಲಾಗಿದೆ ಎಂದು ಕೆನಾನ್ ಕ್ಯಾಮಾರಾ ಕಂಪನಿ ತರಬೇತಿದಾರ ನಾಗೇಶ್ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದಿಂದ ಗುರುವಾರ ಏರ್ಪಡಿಸಿ ದ್ಧ ‘ಕೆನಾನ್’ ಕಂಪನಿಯ ಕ್ಯಾಮಾರಾಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಹೊಸ ವಿಧಾನಗಳು ಇತರೆ ಕ್ಯಾಮರಾಗಳಿಗಿಂತ ವಿಭಿನ್ನ ರೀತಿಯ ಲ್ಲಿ ಕೆನಾನ್ ಕ್ಯಾಮಾರಾದಲ್ಲಿ ಅಳವಡಿಸಿದೆ. ಈ ತಂತ್ರಜ್ಞಾನವಳು ಮದುವೆ ಜೊತೆಗೆ ಸಿನಿಪೋಟೋ ಹಾಗೂ ವೀಡೀಯೋಗ್ರಫಿಗೆ ಪೂರಕವಾಗಿದ್ದು ಲೆನ್ಸ್‌ಗಳು ಕೂಡಾ ಗುಣಮಟ್ಟತೆಯಿಂದ ಕೂಡಿವೆ ಎಂದರು.
ಪ್ರಸಕ್ತ ಸಾಲಿನಲ್ಲಿ ಕೆನಾನ್ ಕಂಪನಿಯ ಕ್ಯಾಮಾರಾಗಳು ಛಾಯಾಗ್ರಾಹಕರ ವೃತ್ತಿ ಬದುಕಿನಲ್ಲಿ ಅನೇಕ ಸಮಯವನ್ನು ಉಳಿಸುವ ಶಕ್ತಿ ಹೊಂದಿದೆ. ಎಡಿಟಿಂಗ್ ಕೆಲಸ, ಕಲರ್ ಪಿಕ್ಸಿಂಗ್ ಸೇರಿದಂತೆ ಗಂಟೆಗಟ್ಟಲೇ ಯ ಹೆಚ್ಚು ಸಮಯವನ್ನು ಕ್ಯಾಮಾರಗಳ ಸೆಟ್ಟಿಂಗ್‌ನಿಂದಲೇ ಉಳಿಸುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಸಿನಿಮಾ, ಧಾರವಾಹಿ ಕ್ಷೇತ್ರಗಳಲ್ಲಿ ಕೆನಾನ್ ಕಂಪನಿಯ ಕ್ಯಾಮರಾಗಳು ಬಳಕೆಯಾಗುತ್ತಿದೆ. ಕೆಲವರು ಕ್ಯಾಮಾರಾ ಬಗ್ಗೆ ಸುಳ್ಳುಸುದ್ದಿಗಳು ಹರಡುತ್ತಿದ್ದು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಎಲ್ಲವೂ ಗುಣ ಮಟ್ಟ ಹಾಗೂ ತಂತ್ರಜ್ಞಾನದಿಂದ ಕೂಡಿದ ಕಾರಣ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅತಿಹೆಚ್ಚು ಕೆನಾ ನ್ ಕ್ಯಾಮಾರಾ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.
ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನದೀಮ್ ಪಾಷ ಮಾತನಾಡಿ ಮಲೆನಾಡು ಭಾಗ ವಿಪರೀತ ಮಳೆ ಯಾಗುವ ಪ್ರದೇಶ. ಈ ಜಾಗದಲ್ಲಿ ಛಾಯಾಚಿತ್ರಣ ಬಹುದೊಡ್ಡ ಕೆಲಸವಾದ ಕಾರಣ ಛಾಯಾಗ್ರಾಹಕರಿಗೆ ಅನುಕೂಲವಾಗಲು ಕೆನಾನ್ ಕಂಪನಿ ತರಬೇತಿದಾರರಿಂದ ಕಾರ್ಯಾಗಾರ ಹಮ್ಮಿಕೊಂಡು ಕ್ಯಾಮಾರದ ವಿ ಶೇಷತೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕೆನಾನ್ ಕಂಪನಿ ತರಬೇತುದಾರ ಯಲ್ಲಪ್ಪ ಪಾಟೀಲ್ ಮಾಡೆಲ್‌ನೊಂದಿಗೆ ಕೆನಾನ್ ಕ್ಯಾ ಮಾರಗಳ ವಿಶೇಷತೆಯನ್ನು ಛಾಯಾಗ್ರಾಹಕರಿಗೆ ಮನದಟ್ಟು ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತಿಕೆರೆ ಪ್ರದೀಪ್, ಗೌರವಾಧ್ಯಕ್ಷ ಎಂ.ಆರ್.ರಮೇಶ್, ಉಪಾಧ್ಯಕ್ಷ ಪಾರ್ಥ ಸಾರಥಿ, ಖಜಾಂಚಿ ಜಯನಾಯಕ್ ಸಹ ಕಾರ್ಯದರ್ಶಿ ರೇಣುಕುಮಾರ್, ನಿರ್ದೇಶಕರುಗಳಾದ ಹರೀಶ್, ನೀಲಕಂಠ, ರಾಜೇಶ್, ನವೀನ್, ಪ್ರಭು, ಸಂತೋಷ್, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.
Canon cameras are great for photo-videography
Leave a comment