ಚಿಕ್ಕಮಗಳೂರು: ಕಡೂರು ತಾಲ್ಲೂಕು ಅಂತರಘಟ್ಟೆ ಜಾತ್ರೆ ಘಮ್ಮತ್ತು ನೋಡಬೇಕಾದರೆ ಬರಬೇಕು.ಆದರೆ ಬರದವರು ಈ ಘಮ್ಮತ್ತು ನೋಡಿ.ಕಳೆದ ಮೂರು ದಿನಗಳಿಂದ ಮಟನ್ ಮಸಾಲೆ ಸುವಾಸನೆ ನೋಡಿದವರು ಇಂದು ಎತ್ತಿನ ಗಾಡಿ ಓಡುವುದನ್ನು ನೋಡಬೇಕು.
ಇಂದು ಅಂತರಘಟ್ಟೆ ದುರ್ಗಾದೇವಿ ರಥೋತ್ಸವ ,ಗಾಡಿ ಓಡಿಸಿ ಕೊಂಡು ಬಂದು ತಂಗಿ ಅಸದಿಗಳ ಪದ ಕೇಳಿದರೆ ಮೈ ಜುಮ್ಮ ಎನ್ನಿಸುತ್ತದೆ.
ಇಂದು ಹಳ್ಳಿ, ಹಳ್ಳಿಗಳಿಂದ ಎತ್ತಿನಗಾಡಿ ಓಡುವ ಸ್ಪರ್ಧೆ ನೋಡಿದರೆ ಮೈ ಜುಮ್ಮಿನಿಸುತ್ತದೆ.ಎತ್ತಗಳ ಅಲಂಕಾರ ಪೂಜೆ ಚಕ್ರದ ಗಾಡಿಗಳನ್ನು ಓಡಿಸುವುದು ಮೈ ನವರೇಳಿಸುತ್ತದೆ.
ಕುರಿ,ಕೋಳಿಗಳ ಅರ್ಪಿಸಿ ಧನ್ಯರಾಗುಗುವ ಭಕ್ತರ ಸಮೂಹ ಲಕ್ಷ, ಲಕ್ಷ ಸೇರಿ ಪುನೀತರಾಗುತ್ತಾರೆ.
ಒಟ್ಟಾರೆ ಅಂತರಘಟ್ಟೆ ಹಬ್ಬ ಆಚರಿಸುವುದು ಖುಷಿ, ಸಂತೋಷ, ಉಲ್ಲಾಸದಲ್ಲಿ ತೇಲುವ ಜನರ ಭಕ್ತಿಗೆ ಎಣೆಯಿಲ್ಲ.
Bullock cart competition as part of the Antaraghatte fair
Leave a comment