ಚಿಕ್ಕಮಗಳೂರು : ಕಲ್ಯಾಣ ಮಂಟಪಕ್ಕೆ ನುಗ್ಗಿ ಮದುವೆ ಹೆಣ್ಣಿನ ಒಡವೆಯನ್ನೇ ಕಳ್ಳತನ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಬಳಿಯ ಶಾಲಿಮಾರ್ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಮೂರೂವರೆ ಲಕ್ಷದ ವಧುವಿನ ನೆಕ್ಲೆಸ್ ಕಿವಿ ಓಲೆ ಎಗರಿಸಿ ಕಳ್ಳರು ಪರಾರಿಯಾಗಿದ್ದರು.
ಮದುವೆ ಮಂಟಪದಲ್ಲಿ ವಧುವಿನ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ವರನ ಮನೆಯವರು ತಂದಿದ್ದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳುವು ಮಾಡಲಾಗಿದೆ
ಒಡವೆಯನ್ನ ರೂಂನಲ್ಲಿಟ್ಟು ಲಾಕ್ ಮಾಡಿ ಸಂಬಂಧಿಕರು ಮುಹೂರ್ತ ಕಾರ್ಯದಲ್ಲಿ ಬ್ಯುಸಿ ಇದ್ದಾಗ ಸ್ಲೈಡಿಂಗ್ ಕಿಟಕಿಯಿಂದ ನುಸುಳಿ ರೂಮ್ ಲಾಕ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಒಟ್ಟು ಮೂರುವರೆ ಲಕ್ಷ ಮೌಲ್ಯದ ನೆಕ್ಲೆಸ್ ಹಾಗೂ ಕಿವಿ ಓಲೆ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ.
ಕಳ್ಳತನದಿಂದ ಕಲ್ಯಾಣ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮದುವೆ ಮಂಟಪದ ಪಕ್ಕದಲ್ಲಿನ ನಿರ್ಮಾಣ ಹಂತದ ಕಟ್ಟಡದಿಂದ ಒಳ ನುಗ್ಗಿರುವ ಖದೀಮರು ಕಳವು ಮಾಡಿದ್ದಾರೆ ಎನ್ನಲಾಗುತ್ತಿದೆ. ಮೂಡಿಗೆರೆ ತಾಲೂಕಿನ ಹಾಂದಿಯ ಶಾಲಿಮಾರ್ ಹಾಲ್ ನಲ್ಲಿ ಈ ಘಟನೆ ನಡೆದಿದೆ. ಘಟನೆ ನಂತರ ಕೆಲ ಅನುಮಾನಸ್ಪದ ವ್ಯಕ್ತಿಗಳ ದೃಶ್ಯ ಸಿ.ಸಿ ಟಿವಿಯಲ್ಲಿ ಪರಿಶೀಲನೆ ಕೂಡ ಮಾಡಲಾಗುತ್ತಿದೆ. ಸ್ಥಳಕ್ಕೆ ಆಲ್ದೂರು ಪೊಲೀಸರು ಡಾಗ್ ಸ್ಕ್ವಾಡ್ ಜೊತೆ ಭೇಟಿ ನೀಡಿದ್ದು ಕಲ್ಯಾಣ ಮಂಟಪ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Leave a comment