ಚಿಕ್ಕಮಗಳೂರು :
ಸಂಬಂಧಿಗಳ ಜೊತೆಯಲ್ಲಿ ಕೆರೆಯಲ್ಲಿ ಈಜಲು ಹೋದ ಯುವಕ ನಾಪತ್ತೆಯಾಗಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಮೂಲದ ಪುನೀತ್ ಕಣ್ಮರೆಯಾದ ಯುವಕನಾಗಿದ್ದು, ಚಿಕ್ಕಮಗಳೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ಘಟನೆ ನಡೆದಿದೆ.
ಜೊತೆಗೆ ಇಬ್ಬರು ಈಜಲು ಹೋಗಿ ಓರ್ವ ವಾಪಸ್ ಬಂದಿದ್ದಾನೆ, ಆದರೆ ಮತ್ತೋರ್ವ ನಾಪತ್ತೆಯಾಗಿದ್ದಾನೆ,
ಮಂಡ್ಯದಿಂದ ಚಿಕ್ಕಮಗಳೂರಿಗೆ ಹಬ್ಬಕ್ಕೆ ಬಂದಿದ್ದ ಪುನೀತ್ ಕೆರೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಅರಸೀಕೆರೆ-ಕಡೂರು ಚಿಕ್ಕಮಗಳೂರಿನ ಗಡಿ ಗ್ರಾಮ ಇದಾಗಿದ್ದು, ಎತ್ತಿನಹೊಳೆ ಯೋಜನೆ ಹಾಗೂ ಭಾರೀ ಮಳೆಯಿಂದಾಗಿ ಕೆರೆ ತುಂಬಿದ್ದು ಕೋಡಿ ಹೋಡೆದಿತ್ತು ಎನ್ನಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ,
ನಾಪತ್ತೆಯಾದವನಿಗಾಗಿ ಶೋಧ ಕಾರ್ಯದಲ್ಲಿ ಸ್ಥಳಿಯರು ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕೆ.ಎನ್ ಸಿಬ್ಬಂದಿಗಳಾದ ಯೋಗೇಂದ್ರ, ಚೇತನ್ ಚಂದ್ರಶೇಖರ್, ಧ್ಯಾನ್ ದೇವ್, ರವಿ ಹುಡುಕಾಟ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Leave a comment