ತರೀಕೆರೆ: ಅಮೃತಾಪುರ ಗ್ರಾಮದ ಪ್ರಜ್ವಲ್ (20) ಮೇ 8ರಂದು ಬಾವಿಕೆರೆ ಭದ್ರಾ ಚಾನಲ್‌ಗೆ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ, ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದನು.
ಗುಡ್ಡದಹಟ್ಟಿಹಾಳ್ ಸಮೀಪದ ಸೇತುವೆ ಬಳಿ ಮೇ 16ರಂದು ಯುವಕನ ಶವ ಪತ್ತೆಯಾಗಿದೆ.
ಯುವಕನ ಪತ್ತೆಗಾಗಿ ಒಂದು ವಾರದಿಂದ ಅಗ್ನಿಶಾಮಕ ದಳ, ಪೊಲೀಸರು ಹಾಗೂ ತಜ್ಞರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಲಕ್ಕವಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
Body of young man who went swimming found
Leave a comment