ಚಿಕ್ಕಮಗಳೂರು :
ಬೀಟಮ್ಮ ಗ್ಯಾಂಗಿನ ಸಲಗ ಸಾವು ಪ್ರಕರಣದಲ್ಲಿ ಮೆಸ್ಕಾಂ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆಯಲ್ಲಿ JE, AE ಹಾಗೂ EE ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಫಾರೆಸ್ಟ್ ಆಕ್ಟ್ ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಬೀಟಮ್ಮ ಗ್ಯಾಂಗ್ ನ ಕಾಡಾನೆ ಸಾವಿಗೆ ಮೆಸ್ಕಾಂ ನಿರ್ಲಕ್ಷ್ಯ ಎಂಬುದು ಇದೀಗ ಗೊತ್ತಾಗಿದೆ. ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಮೆಸ್ಕಾಂನ ಮೂವರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ. ಅರಣ್ಯ ಇಲಾಖೆಯಲ್ಲಿ ಮೆಸ್ಕಾಂ ಅಧಿಕಾರಿಗಳ ವಿರುದ್ದ ಎಫ್ಐಆರ್ ರಿಜಿಸ್ಟರ್ ಆಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆಲ್ದೂರು ಸಮೀಪ ಕಾಡಾನೆ ಒಂದು ಮೃತಪಟ್ಟಿತ್ತು. ಅರಣ್ಯಾಧಿಕಾರಿ ಹರೀಶ್ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೆಸ್ಕಾಂನ ಜ್ಯೂನಿಯರ್ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನಿಯರ್, ಎಕ್ಸಿಕ್ಯೂಟಿವ್ ಎಂಜಿನಿಯರ್ ವಿರುದ್ದ ಎಫ್ಐಆರ್ ಆಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಮೂವರ ವಿರುದ್ದ ಕೇಸ್ ಆಗಿದ್ದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಸುತ್ತಮುತ್ತಲಲ್ಲಿ ಈಗಲೂ ಬೀಟಮ್ಮ ಗ್ಯಾಂಗ್ ಹಾವಳಿ ಮುಂದುವರೆಸಿದೆ
Leave a comment