ಚಿಕ್ಕಮಗಳೂರು / ಕಡೂರು :
ಬೀದಿ ಬೀದಿ ತಿರುಗಿ ಬೆಡ್ ಶೀಟ್ ಗಳನ್ನು ಮಾರಾಟ ಮಾಡುತ್ತಾ ಅಮಾಯಕನಂತೆ ವರ್ತಿಸುತ್ತಿದ್ದ ಅಜ್ಜಂಪುರ ತಾಲೂಕಿನ ಚನ್ನಾಪುರ ವಾಸಿ ಅರುಣಾ ಮಾಡುತ್ತಿದ್ದ ಸೈಡ್ ಬ್ಯುಸಿನೆಸ್ ಕೇಳಿ ಕಡೂರು ಪೊಲೀಸರು ಗಾಬರಿಯಾಗಿದ್ರು
ಪಟ್ಟಣದ ಸುತ್ತಮುತ್ತಲ ಪ್ರದೇಶಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಬೈಕ್ ಸಂಖ್ಯೆ ನಗಣ್ಯ, ಇದೀಗ 9 ಬೈಕ್ ಗಳನ್ನು ವಶಕ್ಕೆ ಪಡೆಸಿರುವ ಪೊಲೀಸರು 2 ಲಕ್ಷ 55 ಸಾವಿರ ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ತನಿಖೆ ನಡೆಸಿರುವ ಕಡೂರು ಪೊಲೀಸರು ಆರೋಪಿಯಾದ ಕೆ.ಅರುಣ್ @ ಸಡ್ಡೆ ಎಂಬುವವನನ್ನು ಬಂಧಿಸಿ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ ಕಡೂರು ಎಸೈಗಳಾದ ಪವನ್ ಕುಮಾರ್, ಅಜರುದ್ದೀನ್ ಧನಂಜಯ ಸಿಬ್ಬಂದಿಗಳಾದ ರಿಯಾಜ್, ದೇವರಾಜ್ ಬೀರೇಶ್ ಮಧು ಸೇರಿದಂತೆ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ನಯಾಜ್, ಅಬ್ದುಲ್ ರಬ್ಬಾನಿ ತಂಡದಲ್ಲಿ ಇದ್ದರು. ಚಿಕ್ಕಮಗಳೂರು ಎಸ್ಪಿ ಡಾ ವಿಕ್ರಮ್ ಅಮಟೆ ಪ್ರಕರಣ ಭೇದಿಸಿದ ಎಲ್ಲರಿಗೂ ಮಾರ್ಗದರ್ಶನ ನೀಡಿ ಅಭಿನಂದಿಸಿದ್ದಾರೆ.
ಇದರೊಂದಿಗೆ ಕಡೂರು ಪಟ್ಟಣ ಹಾಗೂ ಸುತ್ತಮುತ್ತ ಹೆಚ್ಚುತ್ತಿದ್ದ ಬೈಕ್ ಕಳ್ಳತನ ಪ್ರಕರಣ ಭೇದಿಸುವಳ್ಳಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬೈಕ್ ಕಳ್ಳತನದ ಆತಂಕ ಇದೀಗ ಸ್ವಲ್ಪ ಕಡಿಮೆ ಆದಂತೆ ಆಗಿದೆ
Leave a comment