ಚಿಕ್ಕಮಗಳೂರು :
ವೈದ್ಯರ ನಿರ್ಲಕ್ಷ್ಯಕ್ಕೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಹಾಗೂ ದಲಿತ ಸಂಘಟನೆಗಳು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಒಂದೂವರೆ ವರ್ಷದ ಮಗು ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದೆ, ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತಂದಿದ್ದ ಪೋಷಕರು ಗಂಟೆಗಟ್ಟಲೆ ಕಾದರೂ ಆಸ್ಪತ್ರೆಗೆ ವೈದ್ಯರು ಆಗಮಿಸಿಲ್ಲ ಎಂದು ವೈದ್ಯರ ವಿರುದ್ಧ ಮಗುವಿನ ಕುಟುಂಬಸ್ಥರು ಹಾಗೂ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಸ್ಪತ್ರೆಯ ಮುಂದೆ ಪೋಷಕರು, ಸಂಬಂಧಿಕರಿಂದ ಪ್ರತಿಭಟನೆ ಕೂಡಾ ನಡೆಸಲಾಗಿದೆ.
ಮಗು ಸಾವಿಗೆ ಕಾರಣವಾದ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ತರೀಕೆರೆ ತಾಲೂಕಿನ ದೊರನಾಳು ಗ್ರಾಮದ ನಾಗರಾಜ್ ಹಾಗೂ ಮೇಘನ ದಂಪತಿಗಳ ಒಂದೂವರೆ ವರ್ಷದ ಮಗು ಮನ್ವಿತ್ ಆಸ್ಪತ್ರೆಗೆ ಬಂದು ಗಂಟೆ ಒಳಗೆ ಮೃತಪಟ್ಟಿದ್ದು ಚಿಕಿತ್ಸೆ ಕೊಡದ ವೈದ್ಯ ಮಂಜುನಾಥ್ ವಿರುದ್ಧ ಪೋಷಕರ ಪ್ರತಿಭಟನೆ ತೀವ್ರವಾಗಿಸುವ ಎಚ್ಚರಿಕೆಯನ್ನು ಸಂಘಟನೆಗಳು ನೀಡಿದ್ದು ಆತನನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
Leave a comment