ಚಿಕ್ಕಮಗಳೂರು: ಸಂಕ್ರಣ್ಣ ಈ ಬಾರಿಯಾದರೂ ವಿಧಾನ ಪರಿಷತ್ ಸದಸ್ಯರಾಗ ಬಹುದಾ ಎಂದು ರಾಗ ಎಳೆಯುತ್ತಿದ್ದಾರೆ ಅವರ ಅಭಿಮಾನಿ ಬಳಗ !.
ಸಂಕ್ರಣ್ಣ ಅಲ್ಲ ಮಹರಾಯ ಶಂಕರಣ್ಣ ಎನ್ನಬೇಕು ತಾನೇ ಎಂದು ಹುರಿದು ಬಿದ್ದ ಸೆಟ್ ದೋಸೆಗಳು ನಿಯೋಗ ಹೋಗಿ ಬಿ.ಎಲ್.ಎಸ್.ಪರ ಲಾಭಿ ಮಾಡುತ್ತಿದ್ದಾರಂತೆ.
ರಾಜ್ಯದ ವಿಧಾನ ಪರಿಷತ್ ನಲ್ಲಿ ನಾಲ್ಕು ಸ್ಥಾನ ಖಾಲಿಯಾಗಿವೆ.ಕಾಂಗ್ರೆಸ್ ನ ಗೋವಿಂದರಾಜ್,ಲಮಾಣಿ,ಜೆಡಿಎಸ್ ನ ತಿಪ್ಪೇಸ್ವಾಮಿ ಮತ್ತು ರಾಜೀನಾಮೆ ನೀಡಿರುವ ಯೋಗೀಶ್ ಸ್ಥಾನಗಳು ಖಾಲಿಯಾಗಿದ್ದು,ನಾಲ್ಕು ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಗೆ ಅಧಿಕಾರ ನೀಡಲಾಗಿದೆ.
ಆದರೂ ಸಿಎಮ್ ಒಬ್ಬರ ಹೆಸರು ಹೇಳುವುದಾದರೆ ಅದು ಗೋವಿಂದರಾಜ್ ಹೆಸರು ಮಾತ್ರ ಏಕೆಂದರೆ ಸಿ.ಎಂ.ಸಿದ್ದರಾಮಯ್ಯನವರ ಸ್ನಾನ ಮಾಡುವಾಗ ಬಿಟ್ಟರೆ ಸದಾಕಾಲವೂ ಹಿಂದೆ, ಮುಂದೆ ಸುತ್ತುವ ಗೋವಿಂದರಾಜ್ ಮತ್ತೆ ವಿಧಾನ ಪರಿಷತ್ ಸದಸ್ಯರಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ವಕ್ಕಲಿಗರ ಖೋಟಾ ಮುಗಿದ ಮೇಲೆ ಮತ್ತೊಬ್ಬರ ಆಯ್ಕೆ ಕಷ್ಟ.
ಯೋಗೀಶ್ ವಕ್ಕಲಿಗರಾಗಿ ರಾಜೀನಾಮೆ ನೀಡಿರುವುದರಿಂದ ಅವರ ಸ್ಥಾನಕ್ಕೆ ಬಿ.ಎಲ್.ಶಂಕರ್ ಯಾಕೆ ತರಬಾರದು.ಕಳೆದ ಇಪ್ಪತೈದು ವರ್ಷಗಳಿಂದ ಅದೇ ಚಿತ್ರಕಲಾ ಪರಿಷತ್,ಬಣ್ಣ,ಬಣ್ಣದ ಚಿತ್ರ ನೋಡಿ ಬೇಜಾರಾಗಿದೆ ವಿಧಾನ ಪರಿಷತ್ ಗೆ ಕಳುಹಿಸಿ ಎಂಬ ಲಾಭಿ ನಡೆಯುತ್ತಿದ್ದು ಈಗಾಗಲೇ ಕುವೆಂಪು ಪ್ರತಿಷ್ಠಾನಕ್ಕೆ ನೇಮಕ ಮಾಡಿಲ್ಲವ್ವಾ ಎಂದು ಡಿ.ಕೆ.ಶಿವಕುಮಾರ್ ಹೇಳಿದರು
ಬೇಕೆ,ಬೇಕು ಶಂಕರಣ್ಣ ಬೇಕು ಎಂದು ಹಠ ಹಿಡಿದು ಅಲ್ ಪಾರ್ಟಿ ಲೀಡರ್ ಗಳ ಒತ್ತಾಯವಿರುವುದರಿಂದ ಕಾದು ನೋಡಿ ಏನಾದರೂ ಮಾಡುವ ಭರವಸೆ ಸಿಕ್ಕದೆ ಎಂದು ತಿಳಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ ಸಾರ್ ನನಗೆ ಚುನಾವಣೆ ಇಷ್ಟವಿರಲಿಲ್ಲ ನೀವು ಹೇಳಿದ್ದಕ್ಕೆ ಚುನಾವಣೆಗೆ ಸ್ಪರ್ಧಿಸಿ ಸೋತು ಕೋರ್ಟ್ ಆಲೆಯುವುದಾಗಿದೆ ಆದ್ದರಿಂದ ನನಗೆ ಎಂ,ಎಲ್,ಸಿ ಮಾಡಬೇಕು ಎಂದು ಕೇಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಇಬ್ಬರು ಜಗಳದಲ್ಲಿ ಯಾರು ವಿಧಾನ ಪರಿಷತ್ ಗೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕು.
B. L. Shankar to go to Vidhan Parishad?
Leave a comment