Home ಜಾತೀಯತೆ, ಅಸ್ಪೃಶ್ಯತೆಯನ್ನು ಹೋಗಲಾಡಿದ ಕೀರ್ತಿ ಬಿ.ಕೃಷ್ಣಪ್ಪನವರದ್ದು
HomechikamagalurLatest Newsnamma chikmagalur

ಜಾತೀಯತೆ, ಅಸ್ಪೃಶ್ಯತೆಯನ್ನು ಹೋಗಲಾಡಿದ ಕೀರ್ತಿ ಬಿ.ಕೃಷ್ಣಪ್ಪನವರದ್ದು

Share
????????????????????????????????????
Share

ಚಿಕ್ಕಮಗಳೂರು:  ಜಾತೀಯತೆ, ಅಸ್ಪಶ್ಯತೆ, ಮೇಲು-ಕೀಳು ಎಂಬ ಕತ್ತಲೆಯ ಕೂಪದಲ್ಲಿ ಮುಳುಗಿದ್ದ ಶೋಷಿತರ ವರ್ಗಕ್ಕೆ ಸೂರ್ಯನ ಕಿರಣಗಳಂತೆ ಬೆಳಕಾದವರು ಪ್ರೊ.ಬಿ.ಕೃಷ್ಣಪ್ಪನವರು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಮಂಗಳವಾರ ನಡೆದ ಶೋಷಿತರ ಹರಿಕಾರ ದಿ|| ಪ್ರೊ.ಬಿ. ಕೃಷ್ಣಪ್ಪ ನವರ ೮೭ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಆಶಯವನ್ನು ರಾಜ್ಯದಲ್ಲಿ ಭಿತ್ತುವ ಸಲುವಾಗಿ ಸಂಘಟನೆಯನ್ನು ಸ್ಥಾಪಿಸಿದರು. ಬಳಿಕ ಬಿಎಸ್ಪಿ ಕಾನ್ಸಿರಾಂರನ್ನು ಭೇಟಿ ಮಾಡಿ ಅನೇಕ ಚರ್ಚೆಗಳೊಂದಿಗೆ ರಾಜ್ಯದಲ್ಲಿ ೧೯೯೨ರಲ್ಲಿ ಬಿಎಸ್ಪಿಗೆ ಸ್ಥಾಪನೆಗೆ ಕಾರಣಕರ್ತರಾಗಿ ಬಹುಜನರಿಗೆ ರಾಜಕೀಯ ಪ್ರಜ್ಞೆ ಹಾಗೂ ಅಧಿಕಾರ ಹಿಡಿಯಲು ಚಳುವಳಿ ರೂಪಿಸಿದ ಮಹಾಚೇತನ ಎಂದು ಬಣ್ಣಿಸಿದರು.

ದೇಶದಲ್ಲಿ ಬಹುಸಂಖ್ಯಾತರು ಅಧಿಕಾರದಿಂದ ವಂಚಿತರಾಗಿ ಮೂರನೇ ಶಕ್ತಿ ಅಧಿಕಾರ ಹಿಡಿಯಿತು. ಆದರೆ ರಾಜಕೀಯ ಪಕ್ಷಗಳು ಬಹುಜನರ ಮತವನ್ನು ಪಡೆದು ಪರಿವರ್ತನೆಗೊಳಿಸದೇ ಮೋಸವೆಸಗಿತ್ತು. ಅಲ್ಲದೇ ಕೃಷ್ಣಪ್ಪನವರು ಕೋಲಾರದಲ್ಲಿ ಚುನಾವಣಾ ಅಖಾಡಕ್ಕೆ ದುಮುಕಿದಾಗ ಕುತಂತ್ರದಿಂದ ಸೋಲುಣಿ ಸಿದರು ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನದಿಂದ ದೇಶವು ಸ್ವಾತಂತ್ರ್ಯಗೊಂಡರೂ ಅಸಮಾನತೆ, ಜಾತೀಯತೆ ಇಂದಿ ಗೂ ಕೆಲವೆಡೆ ತಾಂಡವವಾಡುತ್ತಿವೆ. ಆ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರ ಗದ್ದುಗೆ ಹಿಡಿದ ಬಿಎಸ್ಪಿ, ಸಂವಿಧಾನ ಜಾರಿಗೊಳಿಸಿ ಬಹುಜನರಿಗೆ ಅಭಿವೃದ್ದಿಗೆ ಸಹಕಾರ ನೀಡಿತು. ಇಂದಿಗೂ ಎಲ್ಲರೊಡನೆ ಮುಖಾ ಮುಖಿ ಮಾತನಾಡಲು ಧೈರ್ಯ ತುಂಬಿದವರು ಕೃಷ್ಣಪ್ಪನವರ ಹೋರಾಟವೇ ಕಾರಣ ಎಂದರು.

ಕೃಷ್ಣಪ್ಪನವರು ಸೊರಬ ತಾಲ್ಲೂಕಿನಲ್ಲಿ ಚಂದ್ರಗುತ್ತಿಯಲ್ಲಿ ಮಹಿಳೆಯರ ಬೆತ್ತಲೆ ಸೇವೆಯ ಅನಿಷ್ಟ ಪದ್ಧತಿ ನಿಷೇಧಿಸಲು ನಿರಂತರ ಹೋರಾಡಿ ಮಹಿಳೆಯರ ಮರ್ಯಾದೆ, ಸ್ವಾಭಿಮಾನ ಉಳಿಸಿದ ಕೀರ್ತಿ ಅವರ ಪಾ ಲಿಗಿದೆ. ಹೀಗೆಯೇ ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿ ಮೂಡನಂಬಿಕೆ, ಅನಿಷ್ಟ ಪದ್ಧತಿಗಳಿಗೆ ಕಡಿ ವಾಣ ಹಾಕಿದರು ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ವಿದ್ಯಾರ್ಥಿದೆಸೆಯಿಂದಲೇ ಪ್ರೊ.ಬಿ.ಕೃಷ್ಣಪ್ಪನವ ರಿಗೆ ಚಿಪ್ಪಿನಲ್ಲಿ ಟೀ ಕೊಡುವುದು, ತಾಯಿಗೆ ದೇವಾಲಯದ ಒಳಪ್ರವೇಶ ಅಡ್ಡಿಪಡಿಸುವುದನ್ನು ವಿರೋಧಿಸಿದ್ದ ರು. ಬಾಲ್ಯದಿಂದಲೇ ಜಾಗೃತರಾಗಿ ಪುರೋಹಿತ ಶಾಹಿ ವಿರುದ್ಧ ಹೋರಾಡಿದ ಬಳಿಕ ಜ್ಞಾನದ ಹಣತೆ ಹಂಚಿ ದ್ದು ಇಂದಿನ ಸಮಾಜ ಆ ಬೆಳಕನ್ನು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಿದೆ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಂಭೇಡ್ಕರ್ ಹಾಗೂ ಪ್ರೊ.ಬಿ. ಕೃಷ್ಣಪ್ಪನವರ ಹೆಸರಿನಲ್ಲಿ ಉಗಮಿಸಿರುವ ಕೆಲವು ಸಂಘಟನೆಗಳು ಆಶಯಕ್ಕೆ ಕೊಡಲಿಪೆಟ್ಟು ಹಾಕುತ್ತಿವೆ. ಸ್ವಾ ರ್ಥ ಹಾಗೂ ಹೊಟ್ಟೆಪಾಡಿಗಾಗಿ ಸಂಘಟನೆ ಹೆಸರನ್ನು ಬಳಸಿಕೊಂಡು ಅಂಭೇಡ್ಕರ್ ಚಿಂತನೆಗಳಿಗೆ ದ್ರೋಹ ವೆಸಗುತ್ತಿದೆ ಎಂದು ದೂರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್ ವಹಿಸಿ ಮಾತನಾಡಿ ದರು. ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ನಗರಾಧ್ಯಕ್ಷ ಡಿ.ಹೆಚ್. ವಿಜಯಕುಮಾರ್, ಹಿರಿಯ ಮುಖಂಡರುಗಳಾದ ಮಲ್ಲೇಶ್, ಚೆನ್ನಯ್ಯ, ತರೀಕೆರೆ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

B. Krishnappa is credited with eliminating casteism and untouchability.

 

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...