ಚಿಕ್ಕಮಗಳೂರು: ಸೋಷಿಯಲ್ ಮಿಡಿಯಾದಲ್ಲಿ ಪರಿಚಯವಾದ ಹುಡುಗ ,ಹುಡುಗಿಯರು ಪ್ರೀತಿಸಿ ಮೋಸ ಹೋಗುವ ಹಲವು ಘಟನೆಗಳಿವೆ.
ಪಾಕಿಸ್ತಾನದ ಗೃಹಿಣಿ ಭಾರತದ ಯುವಕ,ಬಾಂಗ್ಲಾದೇಶ ಹುಡುಗ ಭಾರತದ ಯುವತಿ ಪ್ರೀತಿಯ ಜಾಲದಲ್ಲಿ ಮುಳುಗಿದ ಸುದ್ದಿಗಳನ್ನು ಕೇಳಿತ್ತಿರುವಾಗಲೇ ವಿವಿಧ ರಾಜ್ಯಗಳ ಹಡುಗ ಹುಡುಗಿಯರ ಪ್ರೇಮ್ ಕಹಾನಿ ಗೊತ್ತು ಫಜೀತಿ ಮಾಡಿಕೊಂಡಿದ್ದು ಉಂಟು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆಯ ಗೃಹಿಣಿಯ ಪ್ರೇಮ ಕತೆ ಇನ್ನೂ ಮಜವಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರದ ಇಪ್ಪತ್ತೈದು ವಯಸ್ಸಿನ ನವನೀತ್ ಎಂಬ ಯುವಕ ಹುಡುಗಿ ಎಂದು ನಂಬಿ ಗೃಹಿಣಿಯನ್ನು ಪ್ರೀತಿಸಿ ಗುಂಡಿಗೆ ಬಿದ್ದು ಪೇಚಾಡುತ್ತಿರುವ ವಿಷಯ ತಿಳಿದುಬಂದಿದೆ.
ಇನ್ ಸ್ಟಾದಲ್ಲಿ ಪರಿಚಯವಾಗಿ ಚಾಟಿಂಗ್ ನಲ್ಲಿ ಪ್ರೀತಿ ವಿಷಯ ಪ್ರಸ್ತಾಪವಾಗಿದೆ ಮೂಡಿಗೆರೆ ತಾಲೂಕಿನ ಹೊಸಕೆರೆ ಎಂಬ ಊರಿನ ಅನ್ನಪೂರ್ಣ ನವನೀತ್ ಮನೆಗೆ ಹೋಗಿ ಬಂದು ಮದುವೆ ಪ್ರಸ್ತಾಪ ಕೂಡ ಆಗಿದೆ.ನವನೀತ್ ಬಂಧುಗಳಿಗೆ ವಿಷಯ ತಿಳಿದು ಮದುವೆಗೆ ಒತ್ತಾಯ ಮಾಡಿದ್ದಾರೆ.ಒಂದು ವರ್ಷದಿಂದ ಕಾರಣ,ನೆಪ ಹೇಳಿಕೊಂಡು ಮದುವೆ ಮುಂದೆ ಮಾಡಿಕೊಳ್ಳುವ ಎಂದು ದುಡ್ಡು,ಖಾಸು ತೆಗೆದು ಕೊಂಡು ಬಂದಿದ್ದಾಳೆ ಎನ್ನುತ್ತಾನೆ .
ಇತ್ತೀಚಿಗೆ ಅನ್ನಪೂರ್ಣ ಳ ಮೊಬೈಲ್ ಗೆ ಕರೆ ಮಾಡಿದಾಗ ಅಣ್ಣನ ಮಗನಿಗೆ ಹುಷಾರಿಲ್ಲಾ ಎಂಬ ಕಾರಣ ಹೇಳಿ ನವನೀತ್ ನಂಬರ್ ಬ್ಲಾಕ್ ಮಾಡಿದ್ದಾಳಂತೆ ಹಣ ತೆಗೆದುಕೊಂಡು ಬಂದ ನವನೀತ್ ಹೊಸಕೆರೆಯ ಅನ್ನಪೂರ್ಣ ಮನೆಗೆ ಬಂದು ನೋಡಿದಾಗ ಬೆಚ್ಚಿಬಿದ್ದಿದ್ದಾನೆ.ಅನ್ನಪೂರ್ಣ ಮೂರು ಮಕ್ಕಳ ತಾಯಿ ಗಂಡ ಕೂಡ ಇದ್ದಾನೆ ಎಂದು ತಿಳಿದು ಹಣ ಕಳೆದುಕೊಂಡು ಮೋಸ ಹೋಗಿದ್ದೇನೆ ಎಂದು ತಿಳಿದು ಚಡಪಡಿಸುತ್ತಾ ಆಕ್ರೋಶ ವ್ಯಕ್ತಪಡಿಸಿ ಕೂಗಾಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
Aunty Preetse shocked the young man!
Leave a comment