ಚಿಕ್ಕಮಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿನ ನಿಗೂಡ ಸಾವಿನ ಪ್ರಕರಣವನ್ನು ಸಮಗ್ರ ಮತ್ತು ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಲು ವಿಶೇಷ ತಂಡವನ್ನು ರಚಿಸಬೇಕು ಎಂದು ಕರ್ನಾ ಟಕ ರಕ್ಷ ಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದ ಮುಖಂಡರುಗಳು ಜಿಲ್ಲಾಡಳಿತ ಮುಖಾಂತರ ಮುಖ್ಯ ಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಗುರುಮೂರ್ತಿ ಇತ್ತೀಚಿನ ದಿನಗಳಲ್ಲಿ ಧರ್ಮಸ್ಥ ಳದ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾ ಖಲಿಸಿದ ಕಾರಣ ಕೆಲವು ಮಾಧ್ಯಮಗಳಲ್ಲಿ ಮನುಷ್ಯರ ಅವಶೇಷಗಳು ಸಿಕ್ಕಿವೆ ಎಂಬ ವರದಿಗಳಾಗಿವೆ ಎಂ ದು ಹೇಳಿದರು.
ಇದಕ್ಕೆ ಪೂರಕವಾಗಿ ನಾಪತ್ತೆಯಾಗಿದ್ದವರಲ್ಲಿ ಓರ್ವರು ವೈದ್ಯಕೀಯ ವಿದ್ಯಾರ್ಥಿನಿಯ ಮನೆಯವರು ಹೇಳಿಕೆ ನೀಡಿದ್ದಾರೆ. ಈ ವರದಿ ಶವಗಳನ್ನು ಹೂತಿರುವ ವ್ಯಕ್ತಿಯ ಹೇಳಿಕೆಯು ಕಳೆದ ೨೦ ವರ್ಷಗಳ ಗಂ ಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ ಮಾಡಿ ಅಸ್ವಾಭಾವಿಕವಾದ ಸಾವು, ನಾಪತ್ತೆ ಪ್ರಕರಣಗಳಲ್ಲಿ ಹೆಚ್ಚಿನ ಭಾಗ ಮಹಿಳೆಯರು, ವಿದ್ಯಾರ್ಥಿಗಳ ಮೇಲೆ ನಡೆದಿರುವ ಬಗ್ಗೆ ಹೇಳಲಾಗಿದೆ ಎಂದರು.
ಆದ್ದರಿಂದ ಮುಖ್ಯಮಂತ್ರಿಗಳು ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಾಪತ್ತೆಯಾ ಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗಾಗಿ ಹಿರಿಯ ಬುದ್ದಿಜೀವಿಗಳ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಮಂಜುನಾಥ್ ತೆರೆದಾಳ್, ತಾಲ್ಲೂಕು ಅಧ್ಯಕ್ಷ ಎಂ.ದರ್ಶನ್, ಪ್ರಚಾರ ಸಮಿತಿ ಅಧ್ಯಕ್ಷರಾದ ಅನಿಲ್, ಧರ್ಮ, ತರೀಕೆರೆ ತಾಲ್ಲೂಕು ಉಪಾಧ್ಯಕ್ಷ ಶರತ್ ಪವರ್, ನಗರ ಅಧ್ಯ ಕ್ಷ ತ್ಯಾಗರಾಜ್, ಕಾರ್ಯದರ್ಶಿಗಳಾದ ಅಖಿಲ್, ಕಿರಣ್ಕುಮಾರ್, ಮುಖಂಡರುಗಳಾದ ಶ್ರೀಕಾಂತ್ ಶಶಿಕು ಮಾರ್ ಉಪಸ್ಥಿತರಿದ್ದರು.
Appeal to form a special team for the Dharmasthala mysterious death case
Leave a comment