ಚಿಕ್ಕಮಗಳೂರು: ಕೇಂದ್ರಸರ್ಕಾರ ಸಂಸತ್ನಲ್ಲಿ ಆರ್ಥಿಕ ಬಿಲ್ ಸಲ್ಲಿಸುವಾಗ ೮ನೇ ವೇತನ ಆಯೋಗ ರಚನೆಯಾಗಿ ಕಾರ್ಯಾಚರಣೆಯಲ್ಲಿದ್ದು, ನಿವೃತ್ತ ಪಿಂಚಣಿದಾರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿಭತ್ಯೆ ಪರಿಷ್ಕರಿಸಲು ಕಷ್ಟಸಾಧ್ಯವೆಂದು ಹೇಳಿರುವುದನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
೨೦೨೫ ರ ಮಾಚ್.೨೫ ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಬಿಲ್ ಸಲ್ಲಿಸುವಾಗ ನಿವೃತ್ತ ಸರ್ಕಾರಿ ನೌಕರರ ಪಿಂಚಣಿದಾರರಿಗೆ ೮ನೇ ವೇತನ ಆಯೋಗದಲ್ಲಿ ಹಾಲಿ ಇರುವ ಸೌಲಭ್ಯಗಳನ್ನು ಪರಿಷ್ಕರಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಎಲ್ಲಾ ನಿವೃತ್ತ ಪಿಂಚಣಿದಾರರ ಒಕ್ಕೂಟಗಳು ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ನಿರ್ದೇಶನದಂತೆ ಜಿಲ್ಲಾ ಮಟ್ಟದ ಸಭೆಯನ್ನು ಆಹ್ವಾನಿಸಿ ಚರ್ಚಿಸಲಾಗಿದ್ದು, ೦೧-೦೪-೨೦೨೫ಕ್ಕಿಂತ ಮುಂಚಿತವಾಗಿ ನಿವೃತ್ತರಾದ ನೌಕರರಾದ ಪಿಂಚಣಿದಾರರಿಗೆ, ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕಾಲ ಕಾಲಕ್ಕೆ ನೀಡುವ ತುಟ್ಟಿ ಭತ್ಯೆಗಳನ್ನು ಪುನರ್ ಪರಿಶೀಲಿಸಿ ಯಥಾವತ್ತಾಗಿ ಜಾರಿಮಾಡುವಂತೆ ಮನವಿ ಮಾಡಿದ್ದಾರೆ.
ಈಗ ನೀಡುತ್ತಿರುವ ಸೌಲಭ್ಯಗಳನ್ನು ೮ನೇ ವೇತನ ಆಯೋಗದಲ್ಲಿಯೂ ಸೇರಿಸಿ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎ. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಕೃಷ್ಣಮೂರ್ತಿ, ರಾಜ್ಯ ಪರಿಷತ್ ಸದಸ್ಯ ಬಿ.ಶಿವಣ್ಣ, ಉಪಾಧ್ಯಕ್ಷರಾದ ಭೋಜೇಗೌಡ, ಹೆಚ್.ಆರ್ ವಿರೂಪಾಕ್ಷಪ್ಪ, ಬಿ.ಎನ್. ಉಮಾಪತಿ, ಖಜಾಂಚಿ ಕಾಳಯ್ಯ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರ
Appeal from the State Government Retired Employees Association
Leave a comment