Home namma chikmagalur chikamagalur ರೈತರ ಒಪ್ಪಿಗೆಯಿಲ್ಲದೇ ಭೂಪ್ರದೇಶ ಕಬಳಿಕೆ ವಿರುದ್ಧ ಕ್ರಮಕ್ಕೆ ಮನವಿ
chikamagalurHomeLatest Newsnamma chikmagalur

ರೈತರ ಒಪ್ಪಿಗೆಯಿಲ್ಲದೇ ಭೂಪ್ರದೇಶ ಕಬಳಿಕೆ ವಿರುದ್ಧ ಕ್ರಮಕ್ಕೆ ಮನವಿ

Share
Share

ಚಿಕ್ಕಮಗಳೂರು: ರೈತರ ಒಪ್ಪಿಗೆ ಇಲ್ಲದೇ ಜಮೀನಿನಲ್ಲಿ ವಸತಿ ಬಡಾವಣೆಗೆ ಕೃಷಿ ಭೂ ಮಿಯನ್ನು ಆಕ್ರಮಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಇಂದಾವರ ಗ್ರಾಮಸ್ಥರು ಗುರುವಾರ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಗ್ರಾಮದ ಮುಖಂಡ ಐ.ಎಸ್.ಯತೀಶ್ ಕಸಾಬ ಹೋಬಳಿ ಇಂದಾವರ ಗ್ರಾಮದ ರೈತರು ಸಿಡಿಎಕ್ಕೆ ಈಗಾಗಲೇ ೧೯೩ ಎಕರೆ ಜಮೀನನ್ನು ಎಬಿ ವಾಜಪೇಯಿ ವಸತಿ ಬಡಾವಣೆ, ೨೦೮ ಎಕರೆ ಜಮೀನು ಇಂದಾವರ ವಸತಿ ಬಡಾವಣೆ ನೀಡಿದ್ದು ಬಡಾವಣೆಯನ್ನು ನಿರ್ಮಿಸಲಾಗಿದೆ ಎಂದರು.

ಪ್ರಸ್ತುತ ನಿರ್ಮಿಸಿರುವ ಬಡಾವಣೆಯಲ್ಲಿ ರೈತರಿಗೆ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ವಾಜಪೇಯಿ ವಸತಿ ಬಡಾವಣೆಗೆ ನೀರಿನ ಸೌಕರ್ಯವಿಲ್ಲ, ತಾತ್ಕಾಲಿಕ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದಾವರ ಬಡಾವಣೆಯ ಕೆಲಸವು ಆಮೆಗತಿಯಲ್ಲಿ ಸಾಗಿದ್ದು ಈಗಾಗಲೇ ಎರಡು ಕಡೆ ಭೂಮಿಯನ್ನು ಸಿಡಿಎ ಅಭಿವೃದ್ದಿಗಾಗಿ ನೀಡಲಾಗಿದೆ ಎಂದು ಹೇಳಿದರು.

ಮಲ್ಲಂದೂರು ಮುಖ್ಯರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಇಂದಾವರ ವಸತಿ ಬಡಾವ ಣೆಯ ಎ.ಬಿವಾಜಪೇಯಿ ಬಡಾವಣೆಗೆ ಹೊಂದಿಕೊಂಡಿರುವ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ೧೫೦ ಎಕರೆ ಪ್ರದೇಶದಲ್ಲಿ ರೈತರ ಸಹಭಾಗಿತ್ವದಲ್ಲಿ ಶೇ.೫೦:೫೦ ರ ಅನುಪಾತ ಎಂದು ನಮೂದಿಸಿದ್ದು ರೈತರು ಒಪ್ಪ ದಿದ್ದಲ್ಲಿ ಭೂಸ್ವಾಧೀನದಡಿ ಹೆಚ್ಚುವರಿ ವಸತಿ ಯೋಜನೆಯ ರೂಪಿಸುವುದಾಗಿ ಆತಂಕವೊಡ್ಡುತ್ತಿದ್ದಾರೆ ಎಂ ದರು

ಈಗಾಗಲೇ ಸಿಡಿಎ ಹಲವಾರು ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದು, ಪ್ರಾಧಿಕಾರದ ಆ ಯುಕ್ತರು, ಗುತ್ತಿಗೆದಾರರು ನೀಡುವ ಹಣದ ಆಮಿಷದೊಂದಿಗೆ ರೈತರಿಗೆ ನೋಟೀಸ್ ನೀಡಿ ಬೆದರಿಕೆ ಒಡ್ಡು ವ ಮೂಲಕ ಹೆಚ್ಚುವರಿ ವಸತಿ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿರುವುದು ವಿಷಾಧಕರ ಸಂಗತಿ ಎಂದರು.

ಈ ಪ್ರದೇಶದಲ್ಲಿ ಕಾಫಿ, ಅಡಿಕೆ, ಸಿಲ್ವರ್, ತೆಂಗು, ಬಾಳೆ, ಕಾಳುಮೆಣಸು ಮತ್ತು ಮಾಸಿಕ ಬೆಳೆಗಳಾದ ತರಿಕಾರಿ ಇತ್ಯಾದಿಗಳನ್ನು ಬೆಳೆದು, ಹಸಿರು ವಲಯದಲ್ಲಿದ್ದರೂ ಸಹ ವಸತಿ ಬಡಾವಣೆ ನಿರ್ಮಿಸಲು ಹೊರ ಟಿರುವುದು ಬೇಸರದ ಸಂಗತಿ, ಹೀಗಾಗಿ ಇಂದಾವರ ಗ್ರಾಮಸ್ಥರಿಗೆ ಜೀವನ ಸಾಗಿಸಲು ಕೃಷಿ ಭೂಮಿಯ ಅವಶ್ಯಕತೆಯಿರುವ ಕಾರಣ ಭೂಮಿ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಂದಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಿರಿಯಣ್ಣಗೌಡ, ಗ್ರಾಮಸ್ಥರಾದ ಚೇತನ್, ಸೋಮೇಗೌಡ, ಗುರುಶಾಂತಪ್ಪ ಉಪಸ್ಥಿತರಿದ್ದರು.

Appeal for action against land grabbing without farmers’ consent

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಉಮೇಶ್ ಜಮೀನು ಕೆಲಸಕ್ಕೆ ತೆರಳಿದ್ದ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನಯ್ ಬಿ.ಕೆ....

Related Articles

ನಿಗಮದ ಸಾಲದ ಬಡ್ಡಿ ಮನ್ನಾಗೆ ಸಿ.ಟಿ.ರವಿ ಖಂಡನೆ

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿಯನ್ನ ತೀವ್ರವಾಗಿ...

ಜಿಲ್ಲಾಸ್ಪತ್ರೆಗೆ ಎಂಎಲ್ಸಿ ಸಿ.ಟಿ. ರವಿ ಭೇಟಿ

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಔಷಧಿಗಳ ತೀವ್ರ ಕೊರತೆಯ ಕುರಿತು ಕೇಳಿಬಂದ...

ಸ್ನಾನಕ್ಕೆ ಇಳಿದಿದ್ದ ಯುವಕ ಕೆರೆಯಲ್ಲಿ ನಾಪತ್ತೆ

ಕಳಸ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಅಂಬಾತೀರ್ಥದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಭದ್ರಾ...

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ಮಹಿಳೆಗೆ ವಂಚನೆ

ಚಿಕ್ಕಮಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಅಮಿಷಕ್ಕೆ ಒಳಗಾದ ಮಹಿಳೆಯೊಬ್ಬರು...