ಚಿಕ್ಕಮಗಳೂರು : ನಗರದ ವಿಜಯನಗರ ಬಡಾವಣೆಯ ಅಪಾರ್ಟ್ಮೆಂಟ್ ಒಂದರಲ್ಲಿ ಕಳೆದ ರಾತ್ರಿ ಸರಣಿಯಾಗಿ ಮನೆ ಕಳ್ಳತನ ಮಾಡಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳೇ ಕಳ್ಳನನ್ನು ಹಿಡಿದುಕೊಟ್ಟ ಘಟನೆ ನಡೆದಿದೆ.
ಚಿಕ್ಕಮಗಳೂರಿನ ವಿಜಯನಗರ ಐದನೇ ಕ್ರಾಸ್ ನ ಕುವೆಂಪು ನಗರ ಬಳಿ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನ ಮಾಡಲು ನಿನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ಕೋಲ್ಕತ್ತಾ ಮೂಲದ ಇಬ್ಬರು ಕಳ್ಳರು ಅಪಾರ್ಟ್ಮೆಂಟಿನ ಎಲ್ಲರ ಮನೆಯ ಬಾಗಿಲಿನ ಮುಂದಿನ ಬೋಲ್ಟ್ ಗಳನ್ನು ಹೊರಗಿನಿಂದ ಹಾಕಿ, ಹಿಂಬದಿಯಿಂದ ನುಗ್ಗಿ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಅಪಾರ್ಟ್ಮೆಂಟಿನ ಎಲ್ಲರೂ ಸೇರಿ ಓರ್ವ ಕಳ್ಳನನ್ನು ಹಿಡಿದು ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನ ಮಾಡಲು ಬಂದಿದ್ದ ಇನ್ನೊಬ್ಬ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸ್ಥಳೀಯರು ಕಳ್ಳನನ್ನು ಹಿಡಿಯುವ ಕಾರ್ಯಾಚರಣೆ ರೋಚಕವಾಗಿತ್ತು ಕಳುವು ಮಾಡಲು ಯತ್ನದ ಸುಳಿವು ಸಿಗುತ್ತಿದ್ದಂತೆ ಪರಸ್ಪರ ಫೋನ್ ಕರೆ ಮಾಡಿಕೊಂಡು ಅಪಾರ್ಟ್ಮೆಂಟ್ ನ ನಿವಾಸಿಗಳೆಲ್ಲಾ ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಹಿಡಿದಿದ್ದಾರೆ ನಗರ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಾರಾಗೃಹಕ್ಕೆ ಕಳುಹಿಸಲಿದ್ದಾರೆ
Leave a comment