ಚಿಕ್ಕಮಗಳೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಒಳ ವ್ಯವಹಾರ ಮಾಡಿಕೊಂಡತೆ ಕಾಣುತ್ತದೆ ಎಂದು ಜನ ಸಾಮಾನ್ಯರು ಮಾತನಾಡಿ ಕೊಳ್ಳುತ್ತಿದ್ದಾರೆ.ಆಡಳಿತ ಪಕ್ಷದವರು ಜಿಲ್ಲೆಯ ಜನರ ಬವಣೆಗೆ ಸ್ಪಂದಿಸುವ ಬದಲು ದೇಶ,ವಿದೇಶದ ಪ್ರವಾಸದಲ್ಲಿ ಮುಳುಗಿದ್ದಾರೆ. ವಿರೋಧ ಪಕ್ಷದವರು ಮೌನವಾಗಿ ವ್ಯವರಿಸುತ್ತಿರುವುದು ನೋಡಿದರೆ ಎಂತವರಿಗೂ ಸಂಶಯ ಬರುತ್ತದೆ.
ಕಂದಾಯ ಇಲಾಖೆಯಲ್ಲಿ ಏನು ನಡೆಯುತ್ತಿದೆ ರೈತರಿಗೆ,ಬೆಳೆಗಾರರಿಗೆ ಮತ್ತು ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಲ್ಲದಕ್ಕೂ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪರಿಸ್ಥಿತಿ ಇದೆ ಆದರೆ ಇದರ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಗಪ್,ಚುಪ್ ಆಗಿವೆ.ಒಂದು ಶೆಡ್ ನಿರ್ಮಾಣ ಮಾಡುವುದು ಕಷ್ಟವಾಗಿದೆ. ಇನ್ನೂ ಕಳೆದ ಒಂದು ತಿಂಗಳಿಂದ ಇಪ್ಪತೈದಕ್ಕೂ ಹೆಚ್ಚು ಆನೆಗಳ ಹಿಂಡು ನಗರಕ್ಕೆ ಹೊಂದಿಕೊಂಡು ಬಿಡಾರ ಬಿಟ್ಟಿವೆ ಅರಣ್ಯ ಇಲಾಖೆ ಮೌನ ಎನ್ನುವುದಕ್ಕಿಂತ ತಿಪ್ಪೆ ಸಾರಿಸುವ ಕೆಲಸದಲ್ಲಿ ನಿರತವಾಗಿದೆ.ರೈತರು ಪ್ರತಿಭಟನೆ ಕೇಳುವವರು ಯಾರು?
ಅಬಕಾರಿ ಇಲಾಖೆ ಇದ್ದರೂ ಇಲ್ಲದಂತೆ ಕಣ್ಣು ಮುಚ್ಚಿ ಕುಳಿತಿದೆ ಕಾನೂನು ಮೀರಿ ಸಿ,ಎಲ್ 7ಗೆ ಅನುಮತಿ ಕೊಡುತ್ತಿರುವುದರ ಹಿಂದೆ ಆಡಳಿತ ಪಕ್ಷದವರ ಒತ್ತಡವಿದೆ. ಅರೋಗ್ಯ ಇಲಾಖೆಯಲ್ಲಿ ಬಹಿರಂಗ ಅವ್ಯವಹಾರ ನಡೆದರೂ ಡಿ ,ಹೆಚ್,ಒ ಕೇರ್ ಲೆಸ್ ಇನ್ನೂ ಜಿಲ್ಲಾ ಆಸ್ಪತ್ರೆ ಗಬ್ಬೆದ್ದು ಹೋದರು ಸಾಟಿ ವ್ಯವಹಾರದಲ್ಲಿ ನೂರ್ ಅಹಮದ್ ಜೊತೆಗೆ ಕೈ ಜೋಡಿ ಸಿ ನಗುತ್ತಲೇ ಸೀಮಂತ ಮಾಡುತ್ತಿದ್ದಾರೆ.ಕೃಷಿ ತೋಟಗಾರಿಕೆಗೆ ಅನುದಾನವಿಲ್ಲದೆ ನಲುಗಿವೆ. ಲೋಕೋಪಯೋಗಿ ಇಲಾಖೆಯಲ್ಲಿ ಗುಂಡಿ ಮುಚ್ಚಲು ಅನುದಾನವಿಲ್ಲದೆ ಕೈ ಕಟ್ಟಿ ಕುಳಿತಿದ್ದಾರೆ.ರೈತ ಸಂಘದ ಪ್ರತಿಭಟನೆ ಹೊರತು ಪಡಿಸಿ ಮೌನಕ್ಕೆ ಜಾರಿರುವ ಜಾಣ ಮೌನವಹಿಸಿರುವವರ ಮಧ್ಯೆ ಜಿಲ್ಲೆ ಮತ್ತು ಜನ ನಲುಗಿದ್ದಾರೆ.ಆದರೆ ಪ್ರವಾಸಿಗರು ದಂಡೀ,ದಂಡಿಯಾಗಿ ಹರಿದು ಬರುತ್ತಿದ್ದಾರೆ ಇವರ ಮೋಜು ಮಸ್ತಿ ಹೆಗ್ಗಿಲ್ಲದೆ ನಡೆಯುತ್ತಿರುವುದನ್ನು ನೋಡಿ ಮುಂದಿನ ದುಸ್ಥಿತಿ ಬಗ್ಗೆ ಚಿಂತೆ ಶುರುವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಮತಪಡಿಯುವ ಬಗ್ಗೆ ಲೆಕ್ಕಾಚಾರದಲ್ಲಿ ಇದ್ದಾರೆ.
Leave a comment