ಚಿಕ್ಕಮಗಳೂರು : ದಲಿತರು ಹಾಗೂ ಒಕ್ಕಲಿಗರ ನಡುವಿನ ಜಾಗ ಸಂಘರ್ಷ ನಂತರ ಆಲ್ದೂರು ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದೆ, ಎರಡೂ ಸಮುದಾಯಗಳ ದೂರು ಪ್ರತಿ ದೂರಿನ ನಂತರ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿದ್ದು ಆಲ್ದೂರು ಸಂಪೂರ್ಣ ಪೊಲೀಸ್,ಮಯವಾಗಿದೆ
ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಎಲ್ಲಾ ಮಧ್ಯದ ಅಂಗಡಿಗಳನ್ನು ಬಂದ್ ಗೊಳಿಸಲಾಗಿದ್ದು ಎಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ ಇಂದು ಮಧ್ಯಾಹ್ನ ಮೃತಪಟ್ಟ ಮಹಿಳೆಯ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಪ್ರತಿಭಟನೆ ನಡೆಸಿ ವಿವಾದಿತ ಸ್ಥಳದಲ್ಲಿ ತಹಶಿಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಶವವನ್ನು ಹೂಳಲಾಗಿತ್ತು. ಈ ವೇಳೆ ಎರಡು ಸಮುದಾಯಗಳ ಜನರ ನಡುವೆ ತೀವ್ರ ವಾಗ್ವಾದ ನೂಕುನುಗ್ಗಲು ಉಂಟಾಗಿತ್ತು ಸ್ಥಳಕ್ಕೆ ಆಗಮಿಸಿದ ಎಸ್ ಪಿ ವಿಕ್ರಮ್ ಅಮಟೆ ಎರಡು ಕಡೆಯ ಮುಖಂಡರನ್ನು ಕರೆಸಿ ರಾಜಿ ಸಂಧಾನಕ್ಕೆ ಯತ್ನಿಸಿದ್ದರು ಎನ್ನಲಾಗಿದೆ, ಆದರೆ ಒಪ್ಪದ ಎರಡು ಕಡೆಯ ಮುಖಂಡರು ದೂರು ಪ್ರತಿ ದೂರನ್ನು ದಾಖಲಿಸಿದ್ದಾರೆ, ಇತ್ತ ದಲಿತರು ದೌರ್ಜನ್ಯ ಪ್ರಕರಣವನ್ನು ದಾಖಲಿಸಿದರೆ ಒಕ್ಕಲಿಗರು ಹಲ್ಲೆ ಹಾಗೂ ಟ್ರೆಸ್ ಪಾಸ್ ಪ್ರಕರಣವನ್ನು ದಾಖಲಿಸಿದ್ದಾರೆ ಸದ್ಯ ಆಲ್ದೂರ್ ಪಟ್ಟಣದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಹಾಗೂ ಅರೆಸೇನಾ ಪಡೆ ಹಾಗೂ ಹೆಚ್ಚುವರಿ ಪೊಲೀಸ್ ತೂಕಡಿಗಳನ್ನು ನಿಯೋಜಿಸಲಾಗಿದೆ
Leave a comment