ಅಜ್ಜಂಪುರ: ಕಳೆದ ಏಳು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಆಗಷ್ಟ್ 17 ರಂದು ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜನತಾದಳದ ಮಧ್ಯೆ ಬಿರುಸಿನ ಪೈಪೋಟಿ ಪ್ರಾರಂಭವಾಗಿದೆ.
ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯತಿಯನ್ನಾಗಿಸಿದ್ದು ಕಳೆದ ಏಳು ವರ್ಷಗಳಿಂದ ಕೋರ್ಟ್ ಕಛೇರಿ ಎಂದು ಚುನಾವಣೆ ನಡೆದಿರಲಿಲ್ಲ. ಗ್ರಾಮ ಪಂಚಾಯತಿಯಲ್ಲಿ 29 ವಾರ್ಡ್ ಗಳು ಇದ್ದವು ಪಟ್ಟಣ ಪಂಚಾಯತಿಯಲ್ಲಿ 11 ವಾರ್ಡ್ ಗಳಿವೆ .
ಮಳೆ ಅಭಾವದಿಂದ ಜನ ಸಂಕಷ್ಟದಲ್ಲಿದ್ದಾರೆ.ಈರುಳ್ಳಿ ಕೈಗೆ ಸಿಕ್ಕಿದರೆ ಜನರಿಗೆ ಅನುಕೂಲವಾಗುತಿತ್ತು ಎನ್ನುತ್ತಿರುವಾಗ ಚುನಾವಣೆಯ ಕಾವು ಏರುವುದು ಖಚಿತ.ಈಗಾಗಲೇ ಒಂದಿಬ್ಬರು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಿಂದ ಜಿ.ನಟರಾಜ್,ಜೋಗಿಪ್ರಕಾಶ್,ಮಸೂದ್ ಅಹ್ಮದ್ ಮತ್ತು ರಿಯಾಜ್ ಅಹ್ಮದ್ ಚುನಾವಣೆ ಗೆ ಸ್ಪರ್ಧೆಸುತ್ತಾರೆ.ಬಿಜೆಪಿಯಿಂದ ಗಿರೀಶ್ ಚವಾಣ್,ರಂಗಸ್ವಾಮಿ, ಮಧುಸೂದನ್ ಮತ್ತು ಜನತಾದಳದ ಎಸ್,ಶಿವಾನಂದ್ ಚುನಾವಣಾ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಐದಾರು ವಾರ್ಡ್ ಗಳಲ್ಲಿ ನೇರ, ನೇರಾ ಸ್ಪರ್ಧೆ ಏರ್ಪಟ್ಟರೆ ಕೆಲವು ವಾರ್ಡ್ ಗಳಲ್ಲಿ ಹೆಚ್ಚಿನ ಸ್ಪರ್ಧಿಗಳು ಇರುವುದು ಖಚಿತ.
ಬಿಜೆಪಿ ಮತ್ತು ದಳ ಹೊಂದಾಣಿಕೆ ಮಾಡಿಕೊಳ್ಳುವದು ಖಚಿತ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದಾಗಿ ಪ್ರತಿಷ್ಟೆ ಪ್ರಶ್ನೆಯಾಗಿದೆ.
Ajjampur town panchayat election is pending
Leave a comment