ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ ಮಾಡುತ್ತಿರುವುದು ಕಾಂಗ್ರೆಸ್ ನ ತಂತ್ರಗಾರಿಕೆ ಎಂದು ಬಿಜೆಪಿಯವರ ಆರೋಪ.
ರಾಜಕೀಯವಾಗಿ ದೊಡ್ಡ ಮನೆ ಎಂದು ಕರೆಯಿಸಿಕೊಳ್ಳುವವರು ಕೊಟ್ಟ ಡಿಚ್ಚಿಗೆ ಕಾಂಗ್ರೆಸ್ ಅಪ್ಪಚ್ಚಿಯಾಯಿತು ಎನ್ನುವವರಿಗೆ ಆಗಾದರೆ 2 ಮತ್ತು3 ವಾರ್ಡ್‌ನಲ್ಲಿ ದೊಡ್ಡ ಮನೆಯವರು ಏಕೆ ಡಿಚ್ಚಿ ಹೊಡೆಯಲಿಲ್ಲ ಎಂದು ಪ್ರಶ್ನೆ ಮಾಡುವವರು ಉಂಟು ಜೊತೆಗೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾರಿಗೆ ಡಿಚ್ಚಿ ಹೊಡೆತರೋ ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನ ಗಳಿಸಿದರೆ ಕಾಂಗ್ರೆಸ್ ಐದು ಸ್ಥಾನ ಗಳಿಸಿದೆ. ಬಿಜೆಪಿಗೆ ಸರಳ ಬಹುಮತ ಇದೆ ಆದರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಏನಾದರೂ ಮಾಡಿ ಆಡಳಿತಕ್ಕೆ ಬರಬೇಕು ಎಂದು ಲೆಕ್ಕಾಚಾರದೊಂದಿಗೆ ಚುನಾವಣೆ ಇದುವರೆಗೆ ನಡೆಯದಂತೆ ನೋಡಿಕೊಂಡಿದ್ದಾರೆ ಎಂದು ಗೆದ್ದ ಸದಸ್ಯರುಗಳ ಅಳಲು ಕಾಂಗ್ರೆಸ್ ಗೆ ಡಿಚ್ಚಿಯಿಂದ ಬಿಜೆಪಿಗೆ ಹೊಡೆಸ ಬೇಕು ಎಂಬ ಪ್ರಯತ್ನ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ರವರಿಂದ ಒತ್ತಡ ತರಿಸುವುದು ಸೇರಿದಂತೆ ಖರೀದಿ ಲೆಕ್ಕಾಚಾರಗಳು ನಡೆಯುತ್ತಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಕಾಂಗ್ರೆಸ್ ಬಿಡಲು ಎ.ಟಿ.ಶ್ರೀನಿವಾಸ್ ತೀರ್ಮಾನ ಮಾಡಿದ ಬಳಿಕ ಶಾಸಕ ಶ್ರೀನಿವಾಸ್ ಗೆ ದಿಗಿಲಾಗಿ ಅಜ್ಜಂಪುರದ ಹನ್ನೊಂದು ವಾರ್ಡ್ ಗಳ ಬಿಫಾರಂ ತಂದು ಕೊಡಲು ಹೋದಾಗಲೇ ನೀರಿಳಿಸಿ ಕಳುಹಿಸಿದವರು ಮತ್ತೆ ಕಾಂಗ್ರೆಸ್ ಗೆ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ.
ಬಿಜೆಪಿಯರು ಎಚ್ಚರಿಕೆ ವಹಿಸಿ ಈಗಾಗಲೇ ಕೆಲ ಸದಸ್ಯರನ್ನು ಪ್ರವಾಸ ಕಳುಹಿಸಿದ್ದಾರೆ.ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುತ್ತಿದ್ದಾರೆ.ಅಧ್ಯಕ್ಷ ಸ್ಥಾನ ಬಿಸಿಎಂ,ಉಪಾಧ್ಯಕ್ಷ ಸ್ಥಾನ ಎಸ್.ಸಿಗೆ ಮೀಸಲಾಗಿದ್ದು ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾದ ಆಕಾಂಕ್ಷಿಗಳು ಇರುವುದು ತಲೆಬಿಸಿಯಾಗಿದೆ.ಕಾಂಗ್ರೆಸ್ ನಿಂದ ಬಿಜೆಪಿ ಸೇರಿರುವ ಕವಿತಾ ಕೇಶವ ಮತ್ತು ಮೂಲತಃ ಬಿಜೆಪಿಯ ಮುಖಂಡ ಎರಡನೇ ಬಾರಿ ಗೆದ್ದಿರುವ ರಂಗಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದು ಇಬ್ಬರಿಗೂ ಅಧಿಕಾರ ಹಂಚಿಕೆಯಾಗ ಬಹುದು. ಆದರೆ ಮೊದಲು ಯಾರಿಗೆ ಅವಕಾಶ ಎನ್ನುವುದು ತಲೆನೋವು ತರಬಹುದು. ಇದರ ಲಾಭ ಪಡೆಯಲು ಕಾಂಗ್ರೆಸ್ ನವರು ಕಾಯುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಈಗಾಗಲೇ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ನ ಅಣ್ಣಯ್ಯಗೆ ಮೀಸಲಾಗಿದೆ.ಏಕೆಂದರೆ ಎಸ್.ಸಿ.ಮೀಸಲು ಕ್ಷೇತ್ರದಿಂದ ಗೆದ್ದಿರುವ ಏಕೈಕ ಅಭ್ಯರ್ಥಿ. ಪಟ್ಟಣ ಪಂಚಾಯತಿ ಅಧ್ಯಕ್ಷ ಗದ್ದುಗೆ ಹಿಡಿಯಲು ಕೈ ಮತ್ತು ಕಮಲ ಪಕ್ಷದವರು ಬಿಗಿ ಪಟ್ಟಣಗಳನ್ನು ಹಾಕುತ್ತಿದ್ದಾರೆ ಬಿಜೆಪಿಯವರು ಮೈ ಮರೆತರೆ ಕೈಗೆ ತುತ್ತಾಗುವುದು ಖಚಿತ. ರಾಜಕೀಯ ನಿಂತ ನೀರಲ್ಲಾ ಯಾವ ಕಡೆ ಹರಿಯುತ್ತದೆ ಎಂಬದು ನಿಗೂಢ .
Ajjampur town panchayat election
Leave a comment