ಅಜ್ಜಂಪುರ: ಅಗಸ್ಟ್ 17ರಂದು ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆ ನಡೆಯಲಿದೆ.11ವಾರ್ಡ್ ಗಳಲ್ಲಿ 31 ಅಭ್ಯರ್ಥಿಗಳು ಸೆಣಸಾಡುತ್ತಿದ್ದಾರೆ. ಕಾಂಗ್ರೆಸ್ ಸುಲಭವಾಗಿ ಗೆಲ್ಲುವ ಉತ್ಸಾಹದಲ್ಲಿತ್ತು ಆದರೆ ಶಾಸಕ ಶ್ರೀನಿವಾಸ್ ಧೋರಣೆಯಿಂದಾಗಿ ಎಡವಟ್ಟು ಮಾಡಿಕೊಂಡು ಈಗ ಪೇಚಾಡುತ್ತಿದ್ದಾರೆ.
ಅಜ್ಜಂಪುರದ ಪ್ರಮುಖ ಮುಖಂಡರಾದ ತಿಪ್ಪೇರುದ್ರಯ್ಯರ ಕುಟುಂಬದವರಿಗೆ ಟಿಕೆಟ್ ನೀಡದೆ ಸತಾಯಿಸಿದ್ದರಿಂದ ಬೇಸತ್ತು ಎ.ಟಿ. ಶ್ರೀನಿವಾಸ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದು ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್ ಗೆ ಹಿನ್ನೆಡೆ ಉಂಟಾಗಿರುವುದನ್ನು ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ.ಶಾಸಕ ಶ್ರೀನಿವಾಸ್ ಮತ್ತು ಪತ್ನಿ ವಾಣಿ ಹಾಗೂ ಮಗಳು ರಚನಾ ಹಗಲಿರುಳು ಕಾಂಗ್ರೆಸ್ ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ.ಆದರೆ ಅಲ್ಲಿಯ ಚಿತ್ರಣ ನೋಡಿದರೆ ಕಷ್ಟ, ಕಷ್ಟ ಎನ್ನಿಸುತ್ತಿದೆ.
ಬಿಜೆಪಿಯ ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಮತ್ತು ಎಸ್.ಎಂ.ನಾಗರಾಜು ನೇತೃತ್ವದಲ್ಲಿ ಈ ಬಾರಿ ನಮ್ಮದೇ ಗೆಲುವು ಎನ್ನುತ್ತಿದ್ದಾರೆ. ಈ ಮಧ್ಯೆ ಎರಡು ಪಕ್ಷದಲ್ಲು ಒಳ ಒಳಗೆ ಮುಖಂಡರು ಅವರಿಗೆ ಇವರಿಗೆ ಬೆಂಬಲ ಕೊಡುತ್ತಿರುವ ಮಾತುಗಳು ಕೇಳಿಬರುತ್ತಿವೆ. ಮೇಲ್ನೋಟಕ್ಕೆ ಬಿಜೆಪಿಗೆ ಮುನ್ನಡೆ ಕಂಡುಬರುತ್ತಿದೆ.ಆದರೂ ಬಿಗುವಂತಿಲ್ಲ. ಕಾಂಗ್ರೆಸ್ ನಾಲ್ಕು ಸ್ಥಾನ ಗೆಲವು ಸಾಧಿಸಬಹುದು ಎನ್ನುತ್ತಿದ್ದಾರೆ .
ಒಂದನೇ ವಾರ್ಡ್ ನಲ್ಲಿ ಬಿಜೆಪಿ ಯ ಕವಿತಾ ಸುಲಭವಾಗಿ ಜಯಗಳಿಸುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ಮತದಾರರು.ಇಲ್ಲಿ ಕಾಂಗ್ರೆಸ್ ನಿಂದ ಮಾಲ ಸ್ಪರ್ಧೆ ಮಾಡಿದ್ದಾರೆ. ಎರಡನೆಯ ವಾರ್ಡ್ ಕಾಂಗ್ರೆಸ್ ಮುಖಂಡ ಜೋಗಿ ಪ್ರಕಾಶ್ ವಿರುದ್ದ ಬಿಜೆಪಿಯ ಮಲ್ಲಿಕಾರ್ಜುನ ಸ್ಪರ್ಧೆ ಮಾಡಿದ್ದು ತೀವ್ರ ಪೈಪೋಟಿ ಇರುವ ಕ್ಷೇತ್ರ ಮಲ್ಲಿಕಾರ್ಜುನ್ ಜಾತಿ ಬಲ ಗಳಿಸಿದರೆ ಪ್ರಕಾಶ್ ಗೆ ಕಷ್ಟವಾಗಬಹುದು ಪ್ರಕಾಶ್ ಪ್ರಬಲವಾಗಿದ್ದು ಗೆಲುವಿನ ಬಗ್ಗೆ ನಿಖರವಾಗಿ ಹೇಳಲು ಕಷ್ಟವಾದರೂ ಮಲ್ಲಿಕಾರ್ಜುನ ಮುನ್ನಡೆಯಲ್ಲಿರುವುದು ಕಂಡುಬರುತ್ತದೆ.
ಮೂರನೆಯ ವಾರ್ಡ್‌ನಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮುಸ್ಲಿಂ ಮತದಾರರು ಹೆಚ್ಚಾಗಿದ್ದು ಕಾಂಗ್ರೆಸ್ ನ ನಿಸಾರ್ ಅಹ್ಮದ್ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಬೆಂಬಲದ ಜನತಾದಳದ ಅಭ್ಯರ್ಥಿ ಎಸ್.ಶಿವಾನಂದ್ ಮತ್ತು ಪಕ್ಷೇತರ ಅಭ್ಯರ್ಥಿ ಷಡಕ್ಷರಿ ಸ್ಪರ್ಧೆ ಮಾಡಿರುವುದು ತಲೆನೋವು ತಂದಿದೆ.ಇಬ್ಬರ ಜಗಳ ಮೂರನೆಯವರಿಗೆ ಲಾಭ ಮಾಡುತ್ತದೆ ಎನ್ನುವವರು ಹೆಚ್ಚು. ಶಿವಾನಂದ್ ಹಿರಿಯ ರಾಜಕಾರಣಿ ಅವರು ಉರುಳಿಸುವ ದಾಳ ಯಾವುದು ಎನ್ನುವುದು ನಿಗೂಢವಾಗಿದೆ.ಷಡಕ್ಷರಿ ಸೆಡ್ಡು ಹೊಡೆಯುತ್ತಿದ್ದಾರೆ.ನಿಸಾರ್ ತಮ್ಮ ಜನಾಂಗದ ಜೊತೆಗೆ ಇತರೆ ಜಾತಿಯ ಮತ ಪಡೆದರೆ ಸುಲಭ ಜಯ ನನ್ನದು ಎನ್ನುತ್ತಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಸ್ವಲ್ಪ ಮುನ್ನಡೆಯಲ್ಲಿದೆ.
ನಾಲ್ಕನೆಯ ವಾರ್ಡ್ ಪರಿಶಿಷ್ಟ ಪಂಗಡದವರಿಗೆ ಕಾಂಗ್ರೆಸ್ ಇಲ್ಲಿ ಮಹಿಳಾ ಅಭ್ಯರ್ಥಿ ರತ್ನಮ್ಮರವರನ್ನು ಕಣಕ್ಕಿಳಿಸಿದೆ.ಬಿಜೆಪಿಯಿಂದ ರೇವಣ್ಣ ಅಭ್ಯರ್ಥಿ ಇಬ್ಬರ ಮಧ್ಯೆ ನೇರ ನೇರ ಸ್ಪರ್ಧೆ ಇದ್ದು ಕಾಂಗ್ರೆಸ್ ಮುನ್ನಡೆಯಲ್ಲಿದೆ. ಐದನೆಯ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇದ್ದಾರೆ.ಏಳು ಜನ ಸ್ಪರ್ಧೆ ಮಾಡಿದ್ದು ಕಾಂಗ್ರೆಸ್‌ನಿಂದ ಅಣ್ಣಪ್ಪ ಮತ್ತು ಬಿಜೆಪಿಯಿಂದ ಪ್ರಕಾಶ್ ಪಕ್ಷೇತರರಾಗಿ ಸುನಂದ್ ,ಬಿ.ಅನಂದ್ ಕುಮಾರ್, ಎಸ್.ಕುಮಾರ್,ಡಿ.ಪಿ ಲತ, ಮತ್ತು ಶ್ರೀನಿವಾಸ್ ಸ್ಪರ್ಧೆ ಮಾಡಿದ್ದಾರೆ.ಪ್ರಕಾಶ್ ಯುವಕನಾಗಿರುವುದರಿಂದ ಉತ್ಸಾಹ ಹೆಚ್ಚಾಗಿದೆ.
ಹಿರಿಯರಾದ ಅಣ್ಣಪ್ಪನಿಗಿಂತ ಕಿರಿಯ ದಾಪುಗಾಲು ಇಡುತ್ತಾನೆ ಎನ್ನುತ್ತಿದ್ದಾರೆ ಮತದಾರರು ಪಕ್ಷೇತರರು ನೆಪಕ್ಕೆ ಸ್ಪರ್ಧೆ ಮಾಡಿದಂತೆ ಕಂಡುಬರುತ್ತದೆ. ಆರನೆಯ ವಾರ್ಡ್ ಕಾಂಗ್ರೆಸ್ ನ ಮಂಜುನಾಥ್ ಮತ್ತು ಬಿಜೆಪಿಯ ರಂಗಸ್ವಾಮಿ ಮಧ್ಯೆ ಸ್ಪರ್ಧೆ ಇದ್ದು ರಂಗಸ್ವಾಮಿ ಕೈ ಚಳಕ ಮತ್ತು ಸ್ನೇಹಿತರು ಹೆಚ್ಚು ಹೀಗಾಗಿ ಗೆಲುವು ಖಚಿತ ಎನ್ನುವವರು ಹೆಚ್ಚು . ಏಳನೆಯ ವಾರ್ಡ್‌ನಲ್ಲಿ ಬಿಜೆಪಿ ಯಿಂದ ಎನ್.ಪೂಜಾ ಮತ್ತು ಕಾಂಗ್ರೆಸ್ ನಿಂದ ಎಸ್.ಎನ್.ಸುಮಲತಾರ ಮಧ್ಯೆ ಸ್ಪರ್ಧೆ ಇದೆ ಜೊತೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ರೇಖಾ ಮತ್ತು ಮೇಘನಾ ಸ್ಪರ್ಧೆ ಎರಡು ಪಕ್ಷಗಳಿಗೆ ಇಕ್ಕಟ್ಟು ಉಂಟಾಗಿದೆ.ಇಲ್ಲಿ ಪಕ್ಷೇತರರು ಪಡೆಯುವ ಮತಗಳ ನಿರ್ಣಾಯಕವಾಗುತ್ತದೆ.
ಎಂಟನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ನ ತೀರ್ಥಪ್ರಸಾದ್ ಬಲು ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎನ್ನಲಾಗಿದ್ದು ಬಿಜೆಪಿಯ ಸಂತೋಷ್ ಮತ್ತು ಪಕ್ಷೇತರರಾಗಿ ಅಶ್ವಿನಿ ಸ್ಪರ್ಧೆ ಮಾಡಿದ್ದು ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವುದು ತೀರ್ಥಪ್ರಸಾದ್ ಗೆ ಅನುಕೂಲ ವಾಗಿದೆ. ಒಂಬತ್ತನೆಯ ವಾರ್ಡ್‌ನಲ್ಲಿ ಬಿಜೆಪಿಯ ಮಧುಸೂದನ್ ಪ್ರಭಲ ಅಭ್ಯರ್ಥಿ ಕಾಂಗ್ರೆಸ್ ನಿಂದ ನವೀನ್ ಸ್ಪರ್ಧೆ ಮಾಡಿದ್ದಾರೆ ಮಧುಸೂದನ್ ಸುಲುಭವಾಗಿ ಜಯಗಳಿಸುತ್ತಾರೆ ಎಂದು ಮತದಾರರು ಹೇಳುತ್ತಾರೆ. ಹತ್ತನೆಯ ವಾರ್ಡ್ ಕಾಂಗ್ರೆಸ್ ನ ಕೆ.ಮೇಘನಾ ಮತ್ತು ಬಿಜೆಪಿಯ ಬಿಂದು ಮಧ್ಯೆ ಸ್ಪರ್ಧೆ ಇದ್ದು ಕಾಂಗ್ರೆಸ್ ಗೆ ಅನುಕೂಲವಾದರೆ ಆಶ್ಚರ್ಯ ಪಡಬೇಕಾಗಿಲ್ಲ .ಆದರೂ ಬಿಂದು ಬಿರುಸಿನ ಸ್ಪರ್ಧೆಯನ್ನು ನೀಡುತ್ತಿದ್ದಾರೆ.
ಹನ್ನೊಂದನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ನ ಕವಿತಾ ಮತ್ತು ಬಿಜೆಪಿಯಿಂದ ಶೋಭ ಸ್ಪರ್ಧೆ ಮಾಡಿದ್ದು ನೇರ,ನೇರ ಬಿರುಸಿನ ಸ್ಪರ್ಧೆ ಕಂಡುಬರುತ್ತಿದೆ.ಮತದಾರ ಹೇಳುವುದು ನೋಡಿದರೆ ಬಿಜೆಪಿಯ ಶೋಭ ಮುನ್ನಡೆ ಕಾದುಕೊಂಡಿದ್ದಾರೆ. ಬಹುತೇಕ ವಾರ್ಡ್ ಗಳ ಅಭ್ಯರ್ಥಿಗಳು ಮತದಾರರಿಗೆ ಗಾಳ ಹಾಕಲು ಕುರಿ,ಕೋಳಿ, ಮಧ್ಯ ನೈವೇದ್ಯ ನಡೆಯಿತ್ತಿದ್ದು ಇದರ ಜೊತೆಗೆ ಗಿಫ್ಟ್ ಕೂಡ ಸ್ಟಾಕ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೊನೆಯ ದಿನದ ವ್ಯವಸ್ಥೆ ಗೆಲುವಿನ ಮೇಲೆ ಪರಿಣಾಮ ಬೀರುವುದರಲ್ಲಿ ಅನಮಾನವಿಲ್ಲ.
Ajjampur town panchayat election
Leave a comment