ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರದ ರೈಲು ನಿಲ್ದಾಣದ ಅಭಿವೃದ್ಧಿಗೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ. ಆದರೆ ರೈಲ್ವೆ ಅಧಿಕಾರಿಗಳು ಕೇಳಿಸಿದರು ಕೆಪ್ಪರಂತೆ ದರ್ಪ ತೋರುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಎಸ್,ಶಿವಾನಂದ ದೂರಿದ್ದಾರೆ.
ಅಜ್ಜಂಪುರ ರೈಲ್ವೆ ನಿಲ್ದಾಣದಿಂದ ಉತ್ತಮ ಅದಾಯ ಇಲಾಖೆ ಬರುತ್ತಿದ್ದರು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಜನರಿಗೆ ತೊಂದರೆ ಆಗುತ್ತಿದೆ ಎಂದ ಅವರು ಅಧಿಕಾರಿಗಳ ಅಸಡ್ಡೆಯಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ದೂರಿ ಲೋಕಸಭಾ ಸದಸ್ಯ ಶ್ರೀನಿವಾಸ್ ಪೂಜಾರಿಯನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ವಿವರಿಸಿದರು ಅಧಿಕಾರಿಗಳು ಡೊಂಟ್ ಕೇರ್ ಎನ್ನುತ್ತಿದ್ದಾರೆ.
ರೈಲು ನಿಲ್ದಾಣದಲ್ಲಿ ಶೌಚಾಲಯವಿಲ್ಲ,ವಿಶ್ರಾಂತಿ ಗೃಹ ಇಲ್ಲ, ಕಾಂಪೌಂಡ್ ಕಟ್ಟಿಲ್ಲ ಇನ್ನೂ ಪ್ರಯಾಣಿಕರು ರೈಲು ಹತ್ತಿ ಇಳಿಯಲು ಹಲವಾರು ವರ್ಷಗಳಿಂದ ಕಷ್ಟವಾಗುತ್ತಿದೆ ಈ ಬಗ್ಗೆ ಗಮನಹರಿಸಿಲ್ಲ ಹೇಳಿ,ಹೇಳಿ ಪತ್ರ ಬರೆದು ಸಾಕಾಗಿದೆ ಇನ್ನೂ ರೈಲು ತಡೆದು ಪ್ರತಿಭಟಿಸಬೇಕು ಎನ್ನುತ್ತಾರೆ ಸ್ಥಳೀಯ ಜನ.
ರಾಜ್ಯದ ವಿ.ಸೋಮಣ್ಣ ರೈಲ್ವೆ ಸಚಿವರಾಗಿರುವುದರಿಂದ ಕಣ್ಣು,ಮೂಗು,ಕಿವಿಯಿಲ್ಲದ ಅಧಿಕಾರಿಗಳಿಗೆ ನೆತ್ತಿ ಮೇಲೆ ಬಡಿದು ಮೂಲಭೂತ ಸೌಕರ್ಯಗಳನ್ನು ಒದಗಿಸುವರೇ ಕಾದು ನೋಡೋಣ.
Ajjampur railway station
Leave a comment