ಚಿಕ್ಕಮಗಳೂರು :
ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಗೆ ಮಲೆನಾಡು ಭಾಗ ಅಕ್ಷರಶಃ ನಲುಗಿ ಹೋಗಿದೆ. ಧಾರಾಕಾರ ಮಳೆಗೆ ಸಂಚಾರ ದುಸ್ಥರವಾಗಿ ರಸ್ತೆಯೇ ಕಾಣದೆ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾದ ಘಟನೆ ನರಸಿಂಹರಾಜಪುರ ತಾಲೂಕಿನ ದೇವದಾನ ಬಳಿ ನಡೆದಿದೆ. ಮಾಗುಂಡಿ ಬಳಿ ಮನೆಗಳಿಗೆ ಮಳೆ ನೀರು ನುಗ್ಗುವ ಆತಂಕ ಎದುರಾಗಿದೆ.
ಕಾಪಿನಾಡಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ, ಭಾರೀ ಮಳೆಗೆ ರಸ್ತೆ ಕಾಣದೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಎನ್.ಆರ್.ಪುರ ತಾಲೂಕಿನ ದೇವದಾನ ಎಸ್ಟೇಟ್ ಬಳಿ ಘಟನೆ ಜರುಗಿದ್ದು, ಅದೃಷ್ಟವಶಾತ್ 2 ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಷ್ಟೇ ಅಲ್ಲದೇ ಇದೇ ತಾಲೂಕಿನ ಮಾಗುಂಡಿ ಹಾಗೂ ಬಾಳೆಹೊನ್ನೂರು ಹೋಬಳಿ ಸುತ್ತಮುತ್ತಾ ಧಾರಾಕಾರ ಮಳೆ ಸುರಿದಿದೆ. ಮಾಗುಂಡಿ ಸಮೀಪ ಮಳೆ ನೀರು ಮನೆಗಳಿಗೆ ನುಗ್ಗುವ ಆತಂಕ ಕೂಡಾ ಎದುರಾಗಿದೆ.
ಮಲೆನಾಡಲ್ಲಿ ಮಧ್ಯಾಹ್ನದ ಬಳಿಕ ಭಾರೀ ಮಳೆ ಸುರಿಯುತ್ತಿದೆ.
ಕಳೆದೊಂದು ವಾರದಿಂದ ನಿರಂತವಾಗಿ ಮಳೆ ಸುರಿಯುತ್ತಿರೋ ಕಾರಣದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Leave a comment