ಚಿಕ್ಕಮಗಳೂರು: ಕಳೆದ ಏಳೆಂಟು ವರ್ಷಗಳಿಂದ ಚಿಕ್ಕಮಗಳೂರು ವ್ಯಾಪ್ತಿಯ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಕ್ಸಲರ ಚಟುವಟಿಕೆ ಚುರುಕುಕೊಂಡಿರುವ ಅನುಮಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಚಿಕ್ಕಮಗಳೂರು ಹಾಗೂ ಉಡುಪಿ ವ್ಯಾಪ್ತಿಯ ಕಾರ್ಕಳ, ಶೃಂಗೇರಿ, ಕುದುರೆಮುಖ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯದಲ್ಲಿ ನಕ್ಸಲರು ಬಂದಿದ್ದಾರೆಂಬ ಅನುಮಾನದಿಂದ ತೀವ್ರ ತಪಾಸಣಾ ಕಾರ್ಯ ಪ್ರಗತಿಯಲ್ಲಿದೆ.
ಸುತ್ತಮುತ್ತಲಿನ ಹಳ್ಳಿಯ ಜನರ ಮಾಹಿತಿ ಆದರಿಸಿ ಆರು ಜನ ನಕ್ಸಲರು ಈ ಭಾಗದಲ್ಲಿ ಓಡಾಡಿರುವ ಶಂಕೆ ವ್ಯರ್ಥವಾಗಿದೆ. ಕೇರಳದ ಮೂಲಕ ಚಾಮರಾಜನಗರ ಜಿಲ್ಲೆಯಿಂದ ಈ ಭಾಗಕ್ಕೆ ಬಂದಿರಬಹುದು ಎಂಬ ಅನುಮಾನ ಮೂಡಿಸಿದೆ.
ಕಳೆದ ಹಲವು ವರ್ಷಗಳಿಂದ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ತೀವ್ರ ಪ್ರಮಾಣದಲ್ಲಿ ಕುಂಠಿತವಾಗಿತ್ತು. ಇದೀಗ ರಾಜ್ಯ ಸರ್ಕಾರ ಒತ್ತುವರಿ ತೆರವಿಗೆ ಮುಂದಾದ ಬೆನ್ನಲ್ಲೇ ಮಲೆನಾಡಿನಲ್ಲಿ ಹಲವು ವರ್ಷಗಳ ಬಳಿಕ ನಕ್ಸಲ್ ಓಡಾಟದ ಹೆಜ್ಜೆ ಗುರುತುಗಳು ಪತ್ತೆಯಾಗಿರೋದು ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ಕಾರ್ಯಚರಣೆಗೆ ಕಾರಣವಾಗಿದೆ.
Leave a comment