ಕಳಸ: ಹಿರೇಬೈಲು ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಕ್ರಮ ಕೈಗೊಂಡಿದ್ದು, ಕ್ಲಿನಿಕ್ ಅನ್ನು ಬಂದ್ ಮಾಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ.
ಸ್ಥಳೀಯರ ದೂರಿನ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಹರೀಶ್ ಬಾಬು ಮತ್ತು ಡಾ. ಶಶಿಕಲಾ ಅವರು, ಹಿರೇಬೈಲಿನ ಸ್ಪಂದನ ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದಾರೆ.
ಅಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಮಲ್ಲೇಶ ನಾಯಕ್ ಎಂಬುವರ ಬಳಿ ಎಂಬಿಬಿಎಸ್ ಪದವಿ ಪ್ರಮಾಣಪತ್ರ ಅಥವಾ ಭಾರತೀಯ ವೈದ್ಯ ನೋಂದಣಿ ಪ್ರಮಾಣಪತ್ರ ಇರಲಿಲ್ಲ.
ಈ ನಿಟ್ಟಿನಲ್ಲಿ ಇಡಕಿಣಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಿಬ್ಬಂದಿ ನೆರವಿನಿಂದ ಕ್ಲಿನಿಕ್ ಮುಚ್ಚಿಸಿದ್ದಾರೆ. ಮಲ್ಲೇಶ್ ನಾಯಕ್‍ಗೆ ಸ್ಪಷ್ಟನೆ ಕೇಳಿ, ನೋಟಿಸ್ ಜಾರಿ ಮಾಡಲಾಗಿದೆ.
ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ.ಹರೀಶ್ ಬಾಬು ತಿಳಿಸಿದ್ದಾರೆ.
Action against fake doctors in Hirebailu village
Leave a comment