Home namma chikmagalur chikamagalur ಕೆಎಸ್‌ಆರ್‌ಟಿಸಿ ಬಸ್‌ ನಲ್ಲಿ ತರಕಾರಿ ಸರಕು ಸಗಾಟ
chikamagalurHomeLatest Newsnamma chikmagalur

ಕೆಎಸ್‌ಆರ್‌ಟಿಸಿ ಬಸ್‌ ನಲ್ಲಿ ತರಕಾರಿ ಸರಕು ಸಗಾಟ

Share
Share

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರನ್ನು ಕರೆದೊಯ್ಯುವ ಬದಲು ತರಕಾರಿ ಸರಕು ವಾಹನಗಳಾಗಿ ಬದಲಾಗುತ್ತಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು ಮಾರ್ಗವಾಗಿ ಶೃಂಗೇರಿಗೆ ಸಂಚರಿಸುವ ಸರ್ಕಾರಿ ಬಸ್‌ಗಳಲ್ಲಿ ನಿತ್ಯವೂ ಶೃಂಗೇರಿಯ ತರಕಾರಿ ಅಂಗಡಿಗಳಿಗೆ ಬೇಕಾದ ಮೂಟೆಗಳನ್ನು ಸೀಟುಗಳ ಮೇಲೆಯೇ ಲೋಡ್ ಮಾಡಲಾಗುತ್ತಿದೆ.

ನಿಯಮಾನುಸಾರ ಪ್ರಯಾಣಿಕರ ಲಗೇಜ್ ಜಾಗದಲ್ಲಿಡಬೇಕಾದ ಸರಕನ್ನು ನೇರವಾಗಿ ಬಸ್ಸಿನ ಹಿಂಬದಿಯ ಸೀಟುಗಳ ಮೇಲೆಯೇ ರಾಶಿ ಹಾಕುತ್ತಿರುವುದು ಸಿಬ್ಬಂದಿಯ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.

ಒಂದೆಡೆ ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದೇ ನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುತ್ತಿದ್ದರೆ, ಮತ್ತೊಂದೆಡೆ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸೀಟು ಸಿಗದೆ ಬರೋಬ್ಬರಿ ನೂರು ಕಿಲೋಮೀಟರ್‌ಗಳಿಗೂ ಅಧಿಕ ದೂರ ನಿಂತೇ ಪ್ರಯಾಣಿಸಬೇಕಾದ ನರಕಯಾತನೆ ಎದುರಾಗಿದೆ.

ಕಣ್ಣೆದುರೇ ಸೀಟುಗಳು ತರಕಾರಿ ಮೂಟೆಗಳಿಂದ ಭರ್ತಿಯಾಗಿದ್ದರೂ ಜನಸಾಮಾನ್ಯರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯದ ಈ ಅಕ್ರಮ ಸಾಗಾಟಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೇ ಸಾಥ್ ನೀಡುತ್ತಿದ್ದಾರೆ ಎಂದು ಕೆಂಡಾಮಂಡಲವಾಗಿರುವ ಪ್ರಯಾಣಿಕರು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Transportation of vegetables in KSRTC buses

Share

Leave a comment

Leave a Reply

Your email address will not be published. Required fields are marked *

Don't Miss

ಹರಿಹರಪುರದಲ್ಲಿ ಮನೆ ಕಳ್ಳತನ: ₹2 ಲಕ್ಷ ಮೌಲ್ಯದ ಚಿನ್ನದ ಸರ ಅಪಹರಣ

ಕೊಪ್ಪ: ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಸುಮಾರು ₹2 ಲಕ್ಷ ಮೌಲ್ಯದ 24 ಗ್ರಾಂ ತೂಕದ ಚಿನ್ನದ ಸರ ಹಾಗೂ ₹600 ನಗದು ಕಳವು ಮಾಡಿರುವ...

ಮಳೆರಾಯನ ಕೃಪೆಗಾಗಿ ಕಪ್ಪೆಗಳಿಗೆ ಸಂಪ್ರದಾಯಬದ್ಧ ಮದುವೆ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಬರದ ಛಾಯೆ ತೀವ್ರವಾಗಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆರಾಯನ ಕೃಪೆಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಕಪ್ಪೆಗಳಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಿ, ಊರಲ್ಲಿ ಮೆರವಣಿಗೆ ನಡೆಸಿ ಬಳಿಕ ಭರ್ಜರಿ ಸಾಮೂಹಿಕ...

Related Articles

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಷೇಧಿತ ಪಟಾಕಿಗಳ ಮಾರಾಟ ನಿಷೇಧ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 2026ನೇ ಸಾಲಿನ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಹಾಗೂ ಮಾನ್ಯ ಸರ್ವೋಚ್ಚ...

ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಅಂಧ ಕಲಾವಿದ ಡಿ.ರಾಮಪ್ಪ ಆಯ್ಕೆ

ಕಡೂರು: ಕರ್ನಾಟಕ ಜಾನಪದ ಅಕಾಡೆಮಿಯ 2026-27ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕಡೂರು ತಾಲ್ಲೂಕು ಬೀರೂರು...

ಶೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದ ಯವಕ ಆತ್ಮಹತ್ಯೆ

ಚಿಕ್ಕಮಗಳೂರು: ಶೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದ ಯುವಕನೊಬ್ಬ ತನ್ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ...

ಅಜ್ಜಂಪುರದಲ್ಲಿ ಭದ್ರಾ ನಾಲೆಗೆ ಹಾರಿದ ರೈತ ಆತ್ಮಹತ್ಯೆ

ಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ...