Home namma chikmagalur chikamagalur ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸುವಲ್ಲಿ ಪೋಲೀಸರು ಯಶಸ್ವಿ
chikamagalurHomeLatest Newsnamma chikmagalur

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸುವಲ್ಲಿ ಪೋಲೀಸರು ಯಶಸ್ವಿ

Share
Share

ಚಿಕ್ಕಮಗಳೂರು: ಕೊಲೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬೀರೂರು ಪೋಲೀಸರು ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೆ.೦೪ರಂದು ೧೦.೩೦ರ ವೇಳೆಯಲ್ಲಿ ಬೀರೂರಿನಲ್ಲಿ ರಂಗನಾಥಎಂಬವನು ಪತ್ನಿ ಮಮತಾಳ ಶೀಲಾ ಶಂಕಿಸಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಅನುಮಾನಪಟ್ಟು ಜೋರಾಗಿ ಜಗಳವಾಡಿ ಕೈಗಳಿಂದ ಹೊಡೆದು ವೇಲ್ ನಿಂದ ಹೆಂಡತಿಯ ಕುತ್ತಿಗೆಗೆ ಬಿಗಿಯಾಗಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ರತ್ನಮ್ಮ ಎಂಬವರು ದೂರು ನೀಡಿದ್ದರು.

ಬೀರೂರು ಪಟ್ಟಣದ ರತ್ನಮ್ಮಎಂಬವರ ಮಗಳಾದ ಮಮತ ೩೩ ವರ್ಷ, ಈಕೆಯನ್ನು ೦೯ ವರ್ಷಗಳ ಹಿಂದೆ ಬುರುಡೆಕಟ್ಟೆ ವಾಸಿ ರಂಗನಾಥ್ ಎಂಬವರ ಮದುವೆ ಮಾಡಿಕೊಟ್ಟಿದ್ದು ಮುಂಚೆ ಸಾಂಸಾರಿಕವಾಗಿ ಅನ್ಯೋನ್ಯವಾಗಿ ಅವರಿಗೆ ೮ ವರ್ಷದ ಗಂಡು ಮಗು ಮತ್ತು ೩ ವರ್ಷದ ಹೆಣ್ಣು ಮಗಳಿದ್ದಳು.

ಬೀರೂರಿನ ಮಾರ್ಗದ ಕ್ಯಾಂಪ್ ಚೌಡಮ್ಮನ ಬೀದಿಯ ಪುಟ್ಟಣ್ಣ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುತ್ತಾರೆ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಹಾಗೂ ಕೊಲೆ ಆರೋಪಿತನಾದ ರಂಗನಾಥನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.

Police were successful in arresting the accused within hours of the murder.

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಬಜೆಟ್‌ ನಲ್ಲಿ ರಾಜ್ಯಕ್ಕೆ ಬಿಡಿಗಾಸು ನೀಡದೆ ಮಲತಾಯಿ ಧೋರಣೆ

ಚಿಕ್ಕಮಗಳೂರು: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ರಾಜಕೀಯ ಲಾಭಕ್ಕೋಸ್ಕರ ಬಜೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿರುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಬಿಡಿಗಾಸನ್ನೂ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದು, ರಾಜ್ಯದಿಂದ ಆರಿಸಿ...

ಅಕ್ರಮ ಮದ್ಯ ಮಾರಾಟ-ಇಬ್ಬರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಣಕಲ್ ಪೊಲೀಸ್ ಠಾಣಾ...

Related Articles

ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆ

ಚಿಕ್ಕಮಗಳೂರು:  ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆಬ್ರವರಿ ೨೧...

ಅನುಮಾನಗಳಿಗೆ ಎಡೆಮಾಡಿಕೊಟ್ಟ ಲಘು ವಿಮಾನ ಹಾರಾಟ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಿಗೂಢವಾಗಿ ಹಾರಾಡಿದ ಲಘು ವಿಮಾನವೊಂದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ....

ಶರಣರ ವಚನಗಳು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು

ಚಿಕ್ಕಮಗಳೂರು: ಶರಣರ ವಚನಗಳು ಕೇವಲ ರಚನೆಗಳಲ್ಲ. ಅವು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು ಎಂದು ಸಾಣೆಹಳ್ಳಿ...

ಸಮಾಜ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ

ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತನ್ನ...