Home namma chikmagalur chikamagalur ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಎಂ.ಎಸ್ ನಿರಂಜನ್‌ ಉಚ್ಚಾಟನೆ
chikamagalurHomeLatest Newsnamma chikmagalur

ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಎಂ.ಎಸ್ ನಿರಂಜನ್‌ ಉಚ್ಚಾಟನೆ

Share
Share

ಚಿಕ್ಕಮಗಳೂರು: ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಇತ್ತೀಚೆಗೆ ನಡೆದ ಡಿ.ಸಿ.ಸಿ ಬ್ಯಾಂಕ್‌ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ  ಸ್ಪರ್ಧಿಸಿದ್ದ ಎಂ.ಎಸ್ ನಿರಂಜನ್‌ರನ್ನು ೬ ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ತಿಳಿಸಿದ್ದಾರೆ.

ಬಿಜೆಪಿ ಜಿ.ಪಂಗೆ ಬಿಜೆಪಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಡಿ.ಸಿಸಿ ನಿರ್ದೇಶಕರನ್ನಾಗಿ ಪಕ್ಷವು ಮಾಡಿದ್ದರೂ ೨೦೨೧ ರ ವಿಧಾನ ಪರಿಷತ್ ಚುನಾವಣೆಯ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ರವರ ವಿರುದ್ಧ ಕಾಂಗ್ರೆಸ್‌ನವರ ಪರವಾಗಿ ಮತಯಾಚನೆ ಮಾಡಿರುವುದು.

೨೦೨೧ರ ಡಿಸೆಂಬರ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಪ್ಪೇನಹಳ್ಳಿ ವಿರುದ್ಧ ಕಾಂಗ್ರೆಸ್‌ನ ಪರವಾಗಿ ಕೆಸ ಮಾಡಿದ್ದರೂ ೨೦೨೪ರಲ್ಲಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.

ಡಿ.ಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದು,ಈ ಎಲ್ಲಾ ಕಾರಣದಿಂದ ಮುಂದಿನ ೬ ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದಿಂದ ನಿರಂಜನ್ ರವರನ್ನು ಉಚ್ಛಾಟಿಸಲಾಗಿದೆ ಎಂದಿದ್ದಾರೆ.

M.S. Niranjan expelled from BJP primary membership

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಬಜೆಟ್‌ ನಲ್ಲಿ ರಾಜ್ಯಕ್ಕೆ ಬಿಡಿಗಾಸು ನೀಡದೆ ಮಲತಾಯಿ ಧೋರಣೆ

ಚಿಕ್ಕಮಗಳೂರು: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ರಾಜಕೀಯ ಲಾಭಕ್ಕೋಸ್ಕರ ಬಜೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿರುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಬಿಡಿಗಾಸನ್ನೂ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದು, ರಾಜ್ಯದಿಂದ ಆರಿಸಿ...

ಅಕ್ರಮ ಮದ್ಯ ಮಾರಾಟ-ಇಬ್ಬರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಣಕಲ್ ಪೊಲೀಸ್ ಠಾಣಾ...

Related Articles

ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆ

ಚಿಕ್ಕಮಗಳೂರು:  ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆಬ್ರವರಿ ೨೧...

ಅನುಮಾನಗಳಿಗೆ ಎಡೆಮಾಡಿಕೊಟ್ಟ ಲಘು ವಿಮಾನ ಹಾರಾಟ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಿಗೂಢವಾಗಿ ಹಾರಾಡಿದ ಲಘು ವಿಮಾನವೊಂದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ....

ಶರಣರ ವಚನಗಳು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು

ಚಿಕ್ಕಮಗಳೂರು: ಶರಣರ ವಚನಗಳು ಕೇವಲ ರಚನೆಗಳಲ್ಲ. ಅವು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು ಎಂದು ಸಾಣೆಹಳ್ಳಿ...

ಸಮಾಜ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ

ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತನ್ನ...