ಚಿಕ್ಕಮಗಳೂರು: ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ ಜಾತ್ಯಾತೀತ ಸಿದ್ಧಾಂತದಡಿಯಲ್ಲಿ ನಂಬಿಕೆಯಿಟ್ಟು ಎಲ್ಲಾ ಸಮಯದಲ್ಲೂ ಸಂಘಟಿಸುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಇದೀಗ ೧೭ನೇ ಜಿಲ್ಲೆ ಯಾಗಿ ಚಿಕ್ಕಮಗಳೂರಿಗೆ ಆಗಮಿಸಿದ್ದೇವೆ. ಎಐಸಿಸಿ ವಹಿಸಿರುವ ಪಕ್ಷ ಸಂಘಟನೆಯಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಬೂತ್ ಮಟ್ಟದಲ್ಲಿ ಸ್ಥಳೀಯ ಮುಖಂಡರುಗಳು ಸರ್ಕಾರದ ಯೋಜನೆ ತಲುಪಿಸಲು ನಿರಂತರವಾ ಗಿ ಶ್ರಮಿಸಬೇಕು ಸೂಚನೆ ನೀಡಿದರು.
ಇಂದಿರಾಗಾಂಧಿ ಅವರಿಗೆ ಜಿಲ್ಲೆ ಪುನರ್‌ಜನ್ಮ ನೀಡಿರುವ ಕ್ಷೇತ್ರ. ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಬೇರಿ ಬಾರಿಸಿರುವುದು ಹೆಮ್ಮೆಯ ಸಂಗತಿ. ಇಂದಿಗೂ ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ನಿಲುವು, ಯೋಜನೆ ಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿದೆ. ಹೀಗಾಗಿ ಕ್ಷೇತ್ರವಾರು ಸಭೆ, ಸಮಾರಂಭ ನಡೆಸಿ ಪಕ್ಷದ ಸಿದ್ದಾಂತವನ್ನು ಮುಖಂಡರು ಪರಿಚಯಿಸಬೇಕು ಎಂದರು.
ರಾಜ್ಯಸರ್ಕಾರ ಅಧಿಕಾರ ಬಂದು ಆರೇ ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನ ಡೆಯುತ್ತಿದೆ. ಇದಕ್ಕೆ ವಿ.ಪಕ್ಷದ ಬಿಜೆಪಿ ಮುಖಂಡರುಗಳು ಇಲ್ಲಸಲ್ಲದ ಬಣ್ಣಕಟ್ಟಿ ರಾಜ್ಯಸರ್ಕಾರ ದಿವಾಳಿಯಾ ಗಿದೆ ಎಂದು ಅಪಪ್ರಚಾರ ಮಾಡಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಅವರ ಹೀನಾಯ ಸ್ಥಿತಿ ತೋರಿಸಿದಂತಾಗಿದೆ ಎಂದು ಹೇಳಿದರು.
ಗ್ಯಾರಂಟಿ ಜೊತೆಗೆ ಸರ್ಕಾರಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಶಾಸನ ಹೆಚ್ಚಿಸಿದೆ. ಪ್ರತಿ ಕ್ಷೇತ್ರವಾರು ಕೋಟ್ಯಾಂತರ ಅನುದಾನ ಒದಗಿಸಿದೆ. ಇಡೀ ದೇಶದಲ್ಲೇ ರಾಜ್ಯದ ಜಿಡಿಪಿ ಪ್ರಪ್ರಥಮ ಸ್ಥಾನ ದಲ್ಲಿರುವ ವಿಷಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದಾಗ ಮುಂದಿನ ಚುನಾವಣೆಗಳಲ್ಲಿ ಪಕ್ಷವು ಎಲ್ಲೆಡೆ ವಿಜಯಪತಾಕೆ ಹಾರಿಸಿ ಜನಪರವಾಗಿ ನಿಲ್ಲಬಹುದು ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಮಾತನಾಡಿ ೧೯೪೭ನೇ ಇಸವಿಯಿಂದಲೂ ಹೊಂದಾಣಿಕೆ ಮಾಡಿಕೊಳ್ಳದೇ ನೇರವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಂಘ ಪರಿವಾರದ ವಿರುದ್ಧ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷವಾಗಿದೆ ಎಂದರು.
ಗಾಂಧೀಜಿ, ಅಂಬೇಡ್ಕರ್ ಮತ್ತು ನೆಹರುರವರ ಆದರ್ಶಗಳನ್ನು ಒಪ್ಪ್ಪಿಕೊಂಡಿರುವ ಪಕ್ಷ ಕಾಂಗ್ರೆಸ್. ಇದೇ ಬಿಜೆಪಿ ಹಾಗೂ ಕಾಂಗ್ರೆಸ್‌ಗಿರುವ ಹಲವಾರು ವ್ಯತ್ಯಾಸಗಳು. ಆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಮು ಖಂಡರು ಗೋಷ್ಟಿ, ಗ್ರಾಮಸಭೆ ನಡೆಸಿ ಸ್ಥಳೀಯವಾಗಿ ತಕ್ಕಉತ್ತರ ನೀಡಬೇಕು. ಜೊತೆಗೆ ಕಾಂಗ್ರೆಸ್ ಪಕ್ಷದ ಹಿನ್ನೆಲೆಯಲ್ಲಿ ಕೂಲಂಕೂಶವಾಗಿ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಮಾತನಾಡಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆ ಸ್ ಶಾಸಕರು ಗೆಲುವು ಸಾಧಿಸಲು ಕಾರ್ಯಕರ್ತರ ಪರಿಶ್ರಮವೇ ಕಾರಣವಾಗಿದೆ. ಹಾಗಾಗಿ ರಾಜ್ಯದಲ್ಲಿ ಅಧಿ ಕಾರ ಹಿಡಿದು ಎಲ್ಲಾ ಗ್ಯಾರಂಟಿಯನ್ನು ಈಡೇರಿಸಿದ್ದು, ಸರ್ಕಾರದ ಜನಪ್ರಿಯತೆ ಆಡಳಿತ ಸಹಿಸಿಕೊಳ್ಳಲಾಗದ ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ರಾಜ್ಯ ವಕ್ತಾರ ಅಬ್ದುಲ್ ಮುನೀರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹನೀಫ್, ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಗಂಗಾಧರ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ಮೊ ಹಮ್ಮದ್ ನಯಾಜ್, ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್, ಮುಖಂಡರುಗಳಾದ ಸುಧೀರ್‌ಕುಮಾರ್ ಮುರೊಳ್ಳಿ, ಎಂ.ಸಿ.ಶಿವಾನಂದಸ್ವಾಮಿ, ಆರ್. ಚಂದ್ರು ಮತ್ತಿತರರು ಉಪಸ್ಥಿತರಿದ್ದರು.
Congress is the party that has the principles of Ambedkar’s constitution.
Leave a comment