ಚಿಕ್ಕಮಗಳೂರು: ಕಡೂರು ತಾಲ್ಲೂಕು ಸಗನೀ ಬಸವನಹಳ್ಳಿ ಗ್ರಾಮದಲ್ಲಿ ಸೆಪ್ಟಂಬರ್ ೧ ರಂದು ಕಡವೆ ಬೇಟೆಯಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಸಗನೀ ಬಸವನಹಳ್ಳಿ ಗ್ರಾಮದ ಗೋವಿಂದಪ್ಪ ಎಂಬುವವರ ಮಗ ಮಂಜುನಾಥ ಹಾಗೂ ಮುನಿಯ ಬೋವಿ ಎಂಬುವವರ ಮಗ ಮಂಜಾಬೋವಿ ಎಂಬುವವರೇ ಬಂಧಿತ ಆರೋಪಿಗಳು. ಆರೋಪಿಗಳು ಇತರರೊಂದಿಗೆ ಸೇರಿ ಬೇಟೆಯಾಡಿದ್ದು, ಈ ಬಗ್ಗೆ ಸುಳಿವರಿತ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳದಲ್ಲಿ ಪತ್ತೆಯಾದ ಕಡವೆ ಮಾಂಸ, ಧರ್ಮ ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪ ಮಹಾನಿರೀಕ್ಷಕರಾದ ಜಿ.ಸಂಗೀತಾ, , ಸಿ.ಐ.ಡಿ ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ (ಪ್ರಭಾರ) ಪಿ.ಎಸ್.ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರಾದ ಕೆ.ಆರ್.ಸುನಿತ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಡಿ.ಹೆಚ್.ದಿನೇಶ, ಎಸ್.ಕೆ.ದಿವಾಕರ, ಕೆ.ಎಸ್.ದಿಲೀಪ್, ಎ.ಜಿ. ಹಾಲೇಶ್, ಹೆಚ್.ದೇವರಾಜ, ವೈ.ಹೇಮಾವತಿ, ಚಾಲಕರಾದ ತಿಮ್ಮಶೆಟ್ಟಿ ಹಾಗೂ ಕಡೂರು ವಲಯ ಅರಣ್ಯಾಧಿಕಾರಿ ಎಂ.ಆರ್. ಹರೀಶ್ ಹಾಗೂ ಅವರ ತಂಡದವರು ಭಾಗವಹಿಸಿದ್ದರು.
Two arrested for hunting otters
Leave a comment