ಚಿಕ್ಕಮಗಳೂರು: ಮನುಷ್ಯ ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯ ವರೆಗೂ ಉಳಿಯುವುದಿಲ್ಲ. ಆದರೆ ಗುರುಗಳಿಂದ ಕಲಿತಿರುವ ವಿದ್ಯೆ ಮಾತ್ರ ಕೊನೆಯತನಕ ಜೀವಂತವಾ ಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚೋಪ್ದಾರ್ ಹೇಳಿದರು.
ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಪ್ರೌಢಶಾಲೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದಿಂದ ಶುಕ್ರವಾರ ಏರ್ಪಡಿಸಿದ್ಧ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ. ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಮರೆಯಲು ಅಸಾಧ್ಯವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಬದುಕು ಸಮಾಜದಲ್ಲಿ ಛಲ, ಹಿಂಜರಿಕೆಯಿಲ್ಲದೇ ಮು ನ್ನೆಡೆಯಲು ಸಾಧ್ಯ. ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶೇಖರಪ್ಪ ಮಾತನಾಡಿ ಗುರು-ಶಿ?ರ ಬಾಂಧವ್ಯವನ್ನು ಗೌರವಿಸುವ, ಶಿಕ್ಷಕ ರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ. ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೆನಪಿಸಿಕೊಳ್ಳಲು ಏರ್ಪ ಡಿಸುವ ಸ್ನೇಹ ಸಮ್ಮಿಲನವು ಆಗಿದ್ದು, ಗುರುಗಳನ್ನು ಗೌರವಿಸಲು ದೂರದೂರಿನಿಂದ ಬಂದ ಹಳೇ ವಿದ್ಯಾ ರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಹೆಚ್.ಮೋಹನ್ ೧೯೮೫ರಲ್ಲಿ ಆರಂಭಗೊಂಡ ವಿದ್ಯಾಸಂಸ್ಥೆಗೆ ಧರ್ಮಸ್ಥಳ, ಶೃಂಗೇರಿ, ಹೊರನಾಡು ಕ್ಷೇತ್ರ ಹಾಗೂ ಮಾಜಿ ಶಾಸಕ ಎನ್.ಕೆ.ಹುಚ್ಚಪ್ಪ ಸೇರಿದಂತೆ ಅನೇಕ ದಾನಿಗಳ ಸಹಕಾರದಿಂದ ಮುನ್ನೆಡೆದಿದೆ. ಅಲ್ಲದೇ ಪ್ರತಿವರ್ಷ ವು ಉತ್ತಮ ಫಲಿತಾಂಶದಿಂದ ಶಾಲೆಯು ಮುಂಚೂಣಿಯಲ್ಲಿದೆ ಎಂದರು.
ಇದೇ ವೇಳೆ ವಿದ್ಯಾಸಂಸ್ಥೆಯಲ್ಲಿ ನಿವೃತ್ತರಾದ ಶಾಲೆಯ ಮುಖ್ಯಶಿಕ್ಷಕ ಕಲ್ಮರುಡಪ್ಪ, ಕರಕುಶಲ ಶಿಕ್ಷಕ ಕರುಣಾಕರ್ ಸೇರಿದಂತೆ ಅನೇಕ ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಿ.ಮಲ್ಲೇಗೌಡ, ಕಾರ್ಯದರ್ಶಿ ಎಇ.ಬಿ.ಶೇಖರಪ್ಪ, ಖಜಾಂಚಿ ಎಂ.ತಿಮ್ಮೇಗೌಡ, ನಿರ್ದೇಶಕರಾದ ಧನಲಕ್ಷ್ಮೀ ಚಂದ್ರಪ್ಪ, ಪುಷ್ಪಕಲಾ, ರಾಮ್ಸಿಂಗ್ನಾಯ್ಕ್, ಗೌರಿಶಂಕರ್, ಹಳೇ ವಿದ್ಯಾರ್ಥಿಗಳಾದ ವೆಂಕಟೇಶ್, ಮಧು, ಕೃಷ್ಭಮೂರ್ತಿ, ಸುರೇಂದ್ರಚಾರ್, ಚಂದ್ರ ಶೇಖರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
The knowledge learned from the Guru remains alive till the end.
Leave a comment