Home Latest News ಕನ್ನಡದ ಒಳನುಡಿಗಳನ್ನು ಉಳಿಸಿ ಸಂಭ್ರಮಿಸೋಣ
Latest NewschikamagalurHomenamma chikmagalur

ಕನ್ನಡದ ಒಳನುಡಿಗಳನ್ನು ಉಳಿಸಿ ಸಂಭ್ರಮಿಸೋಣ

Share
Share

ತರೀಕೆರೆ: ಕನ್ನಡದ ಪ್ರತಿ ಶಬ್ದವನ್ನು ಉಳಿಸಿಕೊಂಡರೆ, ಬಹುತ್ವವನ್ನು ಉಳಿಸಿಕೊಳ್ಳುವುದಾಗಿದೆ. ಭಾಷೆ ನಮ್ಮದಲ್ಲ ಅನ್ನುವ ಕಾರಣಕ್ಕೆ ಅನ್ಯ ಭಾಷೆಯನ್ನು ಗೇಲಿ ಮಾಡುವುದು ಅಸಹನೆ ತೋರಿಸುತ್ತದೆ. ಕನ್ನಡದ ಒಳನುಡಿಗಳನ್ನು ಉಳಿಸಿ ಸಂಭ್ರಮಿಸೋಣ ಎಂದು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸದ್ಗುರು ಜನಸೇವಾ ಫೌಂಡೇಷನ್, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾಲ್ಲೂಕಿನ ರಂಗೇನಹಳ್ಳಿಯ ಶ್ರೀಅಂಬಾ ಭವಾನಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಧ್ಯಮಗಳು ಹಾಗೂ ಆಕಾಶವಾಣಿ ಕನ್ನಡಕ್ಕೆ ಅನ್ಯಾಯ ಮಾಡಿವೆ. ಮೇಲು ಎಂಬುದು ಆಡಳಿತಕ್ಕೆ ಇರಬೇಕೆ ಹೊರತು ಸಾಹಿತ್ಯಕ್ಕೆ ಇರಬಾರದು. ದೇವನೂರು ಮಹಾದೇವ ಅವರು ತಮ್ಮ ಕೃತಿ ‘ಕುಸುಮಬಾಲೆ’ಯ ಮೂಲಕ ನಂಜನಗೂಡಿನ ನೆಲದ ಭಾಷೆಯನ್ನು ಪರಿಚಯಿಸಿದರು. ಪ್ರತಿ ಹತ್ತು ಕಿಲೋ ಮೀಟರ್‌ಗೆ ಭಾಷೆ ಬದಲಾಗುತ್ತದೆ. ಈ ಭಿನ್ನತೆಯನ್ನು ನಾವು ಗೌರವಿಸಬೇಕು. ಕನ್ನಡದ ನಿಘಂಟುಗಳು ಒಳಗನ್ನಡವನ್ನು ಸೇರಿಸಿಕೊಳ್ಳಲಿಲ್ಲ’ ಎಂದು ಹೇಳಿದರು

ದಲಿತ ಅಭಿವ್ಯಕ್ತಿ ಮತ್ತು ಹೋರಾಟದಲ್ಲಿ ಕನ್ನಡ ಕುರಿತು ಮಾತನಾಡಿದ ಕತೆಗಾರ ತುಂಬಾಡಿ ರಾಮಯ್ಯ, ಹೋರಾಟಗಾರ ಪ್ರೊ.ಬಿ.ಕೃಷ್ಣಪ್ಪ ಚಳವಳಿಗಾರರು. ಬರಹಗಾರರಲ್ಲ. ಹಾಗೆಯೇ ದೇವನೂರು ಮಹಾದೇವ ಹೆಸರಾಂತ ಬರಹಗಾರರು. ಚಳವಳಿಗಾರರಲ್ಲ. ಬೀದಿಗಿಳಿದು ಹೋರಾಟ ಮಾಡುವ ಆಯಾಮಗಳು ಇಂದು ವಿಭಿನ್ನವಾಗಿವೆ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ಅಂದು ಗೋಡೆ ಮೇಲೆ ಬರೆದ ಹೋರಾಟದ ಸಾಲುಗಳು, ನಂತರ ಸರ್ಕಾರದ ಕಾನೂನುಗಳು ಆಗಿವೆ. ಹೋರಾಟಗಳು ಸಮಸ್ಯೆಗಳ ಮಧ್ಯೆ ಹುಟ್ಟಿಕೊಳ್ಳುತ್ತವೆ. 33 ವರ್ಷದ ಮೀಸಲಾತಿ ಹೋರಾಟ ಇಂದು ವೈಜ್ಞಾನಿಕವಾಗಿ ವಿಂಗಡಿಸಿ ಮೀಸಲಾತಿ ನಿಗದಿ ಪಡಿಸಿ ಎಂದು ಕೇಳುವಲ್ಲಿ ಶಿಕ್ಷಣ ಹಾಗೂ ಪ್ರಜ್ಞೆ ದೊಡ್ಡದು. ಈಗ ದೇವನೂರು ಮಹಾದೇವ ಅಂತಹವರು ಪತ್ರ ಬರೆದರೆ ಸಾಕು. ಹೋರಾಟದ ರೂಪ ಪಡೆಯುತ್ತದೆ. ಪ್ಯೂಡಲ್ ಸೊಸೈಟಿ ಇಂದಿಗೂ ಕೆಳ ವರ್ಗದವರನ್ನು ತಮ್ಮ ಮನೆಯ ಆಳಾಗಿರಬೇಕು ಎಂದು ಬಯಸುತ್ತದೆ. ಕುದ್ಮಲ್ ರಂಗರಾವ್ ಅವರ ತಿಳಿವಳಿಕೆ ಗಾಂಧಿಗೆ ಮಾರ್ಗದರ್ಶನ ಮಾಡಿತ್ತು. ಗಾಂಧಿ ಕುದ್ಮಲ್ ರಂಗರಾವ್ ಅವರನ್ನು ಗುರುವಾಗಿ ಸ್ವೀಕರಿಸಿದ್ದರು’ ಎಂದು ಹೇಳಿದರು.

ಶಿಕ್ಷಣದಲ್ಲಿ ವೈಜ್ಞಾನಿಕ ಮನೋ ಧರ್ಮ-ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ವೈಚಾರಿಕ ಪ್ರಚಾರಕ ಎಚ್.ಆರ್.ಸ್ವಾಮಿ ಮಾತನಾಡಿ, ಮೌಢ್ಯಗಳು ದಿನನಿತ್ಯ ನಮ್ಮನ್ನು ಸುತ್ತುತ್ತವೆ. ಪರಂಪಾರಗತ ನಂಬಿಕೆಗಳಿಂದ ಮೌಢ್ಯ ಉಳಿಯುತ್ತದೆ. ದೇವರ ಅಪ್ಪಣೆ ಪಡೆಯುವುದು ಭಾರತ ದೇಶದಲ್ಲಿ ಮಾತ್ರ ಆಗಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆಡಳಿತದಲ್ಲಿ ವೈಜ್ಞಾನಿಕ ಪರ ಚಿಂತನೆ ಹುಟ್ಟು ಹಾಕಿದರು ಎಂದು ಹೇಳಿದರು.

ಸಂವಾದದಲ್ಲಿ ಸಾಹಿತಿ ಟಿ.ದಾದಾಪೀರ್, ಲಕ್ಕವಳ್ಳಿ ಚಕ್ರವರ್ತಿ, ನವೀನ್ ಪೆನ್ನಯ್ಯ, ಅನಂತ ನಾಡಿಗ್ ಹಾಗೂ ಇತರರು ಭಾಗವಹಿಸಿದ್ದರು.

Let’s celebrate and preserve the Kannada idioms.

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...

ಅಂಬೇಡ್ಕರ್ ಸಂವಿಧಾನದ ತತ್ವ ಹೊಂದಿರುವ ಪಕ್ಷ ಕಾಂಗ್ರೆಸ್

ಚಿಕ್ಕಮಗಳೂರು:  ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ...