ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ.
ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ ನೋವು ,ಈಗಾಗಲೇ ಅರಬೀಕಾ ಕಾಫಿ ಶೇ.70 ರಷ್ಟು ನಾಶವಾಗಿದೆ.ಇನ್ನೂ ಫರ್ಚ್ಮೆಂಟ್ ಕಾಫಿ ಬೆಳೆ ಶೇ. 50 ನಾಶವಾಗಿವೆ ಇದರಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಇದರ ಜೊತೆಗೆ ಮುಂದಿನ ವರ್ಷದ ಬೆಳೆ ಕೂಡ ಬರುವುದಿಲ್ಲ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಮಲೆನಾಡಿನ ಜನರ ಜೀವನ ಎಂದರೆ ಕಾಫಿ ಆದರೆ ಕಾಫಿ ಬೆಳೆಗೆ ಕೊಳೆ ರೋಗವಾಗಿ ಬೆಳೆ ನಾಶವಾದರೆ ಇಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಅಷ್ಟೇ ಅಲ್ಲ ಜನಸಾಮಾನ್ಯರ ಜೀವನಕ್ಕೆ ತೊಂದರೆ ಆಗುವುದು ಗ್ಯಾರಂಟಿ.
ಕರ್ನಾಟಕ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಗ್ಯಾರಂಟಿ ಜನಜೀವನ ನಾಶ ಮಾಡುವುದು ಗ್ಯಾರಂಟಿ ,ಅದ್ದರಿಂದ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರ ನೆರವಿಗೆ ಬರ ಬೇಕೆಂದು ಕಾಫಿ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.
ಕಾಫಿಬೆಳೆ ಜೊತೆಗೆ ಮೆಣಸು ಮತ್ತು ತರಕಾರಿಗಳು ಕೂಡ ನಾಶವಾಗುತ್ತಿವೆ. ಕಳೆದ ಒಂದುವರೆ ತಿಂಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಮಾಯವಾಗಿ ಗದ್ದೆಗಳಂತೆ ಆಗಿವೆ.ಯಾವುದೇ ವಾಹನಗಳು ಚಲಿಸುವುದು ದುಸ್ಥರವಾಗಿವೆ.ಸರ್ಕಾರದಿಂದ ಗುಂಡಿ ಮುಚ್ಚುವ ಸಾಮಾನ್ಯ ಕೆಲಸಗಳು ಅಗುತ್ತಿಲ್ಲ ಶೃಂಗೇರಿ ಮತ್ತು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬೆಳೆಯ ಜೊತೆಗೆ ಶಾಸಕರುಗಳು ಕೊಳೆತಿರಬಹುದು ಎಂದು ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಬಯಲು ಭಾಗದಲ್ಲಿ ಅರ್ಥಿಕ ಬೆಳೆಯಾದ ಈರುಳ್ಳಿ ಮತ್ತು ತರಕಾರಿ ಬೆಳೆಗಳು ಕೊಳೆಯುತ್ತಿವೆ.ಇದರಿಂದಾಗಿ ರೈತರಿಗೆ ಬರ ಸಿಡಿಲು ಬಡಿದಂತೆ ಆಗಿದೆ.ಇಲ್ಲಿನ ಜನಪ್ರತಿನಿಧಿಗಳು ಜೆಲ್ಲಿ,ಬಾರ್,ಸೈಟ್ ಬ್ಯೂಜಿನೇಸ್ ನಲ್ಲಿ ಬ್ಯೂಜಿಯಾಗಿದ್ದಾರೆ ಎಂದು ಜನಸಾಮಾನ್ಯರ ಗೋಳು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಗನ ಮದುವೆ ಬ್ಯೂಸಿ,ಡ್ಯಾನ್ಸ್ ಮಾಡುತ್ತಿದ್ದಾರೆ.ಮೂಡಿಗೆರೆ ಶಾಸಕಿ ನಯನಮೋಟಮ್ಮ ಮಳೆ ಬಂದರೆ ನಾವು ಏನು ಮಾಡಬೇಕು, ಮಳೆ ನಿಲ್ಲಿಸಲು ಸಾಧ್ಯವೇ ಎಂದು ಹೇಳುತ್ತಿದ್ದರೆ,ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಐಸಿರಿಯಲ್ಲಿ ಯಡಿಯೂರಪ್ಪ ಮತ್ತು ವಿಜೆಯೇಂದ್ರ ಸ್ವಾಗತ ಮಾಡಲು ಸಮಯ ಕೊಟ್ಟಿದ್ದಾರೆ ಇವರಿಗೆ “ಐಸಿರಿ” ಮುಖ್ಯ ಎಂದು ಜನಸಾಮಾನ್ಯರ ಅಭಿಪ್ರಾಯ.
ಇನ್ನೂ ಜಿಲ್ಲಾಡಳಿತ ಮಳೆಯಲ್ಲಿ ಕರಗಿ ಹೋಗಿದ್ದಾರೆ.ಡಿ.ಕೆ.ಶಿವಕುಮಾರ್ ರೆಸಾರ್ಟ್ ಗೆ ದಾರಿ,ಡಿ.ಸಿ.ಸಿ.ಬ್ಯಾಂಕ್ ಚುನಾವಣೆ ನಡೆಯದಂತೆ ಮಾಡುವುದು ಹೇಗೆ ಎಂಬ ತಲೆಬಿಸಿಯಲ್ಲಿದ್ದಾರೆ .ಮಳೆ,ಬೆಳೆ, ರಸ್ತೆಗಳು ನಾಶವಾದರೆ ನಾವು ಏನು ಮಾಡಲಿ ಎಂಬ ಅಳಲು ಜಿಲ್ಲಾ ಮಂತ್ರಿ ನಾಪತ್ತೆಯಾಗಿರುವಾಗ ಯಾರನ್ನು ಹುಡುಕುವುದು ಎಂದರೆ ಸಂಘಟನೆಗಳು ಮನವಿ ಕೊಡುವುದು ಬಿಟ್ಟರೆ ಚಳುವಳಿಗಳು ಮಳೆಯ ಆರ್ಭಟದಲ್ಲಿ ತೇಲಿ ಹೋಗುತ್ತಿರುವಾಗ ಜನಸಾಮಾನ್ಯರು ಬಾಯಿ ಬಡಿದು ಕೊಳ್ಳುತ್ತಿದ್ದಾರೆ.ಇನ್ನೂ ವಿರೋಧ ಪಕ್ಷದವರು ಜಿಲ್ಲೆಯ ಸಮಸ್ಯೆಗಳನ್ನು ಬಿಟ್ಟು ಧರ್ಮಸ್ಥಳ, ಧರ್ಮಸ್ಥಳ ಎನ್ನುತ್ತಿದ್ದಾರೆ ಜಿಲ್ಲೆಯ ಜನರ ಸಮಸ್ಯೆಗಳನ್ನು ಕೇಳುವವರ ಹುಡುಕಾಟದಲ್ಲಿ ಜನಸಾಮಾನ್ಯರು ಇದ್ದಾರೆ.
Heavy rain in the district – coffee crop destroyed – road hazard
Leave a comment