ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್ 13 ಕ್ಕೆ ನಿಗಧಿಯಾಗಿದೆ.ಕೂಲ್,ಕೂಲ್ ಚುನಾವಣೆ ನಡೆಯಬಹುದು ಎನ್ನುವಾಗ ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ ಎಂಬ ಸನ್ನಿವೇಶ ಸೃಷ್ಟಿಯಾಗುತ್ತಿದೆ.
ಕಾಂಗ್ರೆಸ್ ಶಾಸಕರುಗಳಾದ ಜಿ.ಹೆಚ್.ಶ್ರೀನಿವಾಸ್, ಆನಂದ್ ಮತ್ತು ತಮ್ಮಯ್ಯ ಮುಖ್ಯಮಂತ್ರಿ ಬಳಿ ಹೋಗಿ ಚುನಾವಣೆ ನಡೆಸದಂತೆ ಮನವಿ ಮಾಡಿದ್ದಾರೆ ಆದರೆ ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಚುನಾವಣೆ ನಿಲ್ಲಿಸುವುದು ಕಷ್ಟ, ಕಷ್ಟ. ಆದರೂ ಸರ್ಕಾರದ ತೀರ್ಮಾನ ಹೇಳುವುದಕ್ಕೆ ಸಾಧ್ಯವಿಲ್ಲ. ಕೊನೆಗೆ ನ್ಯಾಯಾಲಯದ ತೀರ್ಮಾನ ಅಂತಿಮ ಸೇರು ಸಾವಸೇರು ಎಂಬಂತೆ ಆಗಬಹುದು.
ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಸಹಕಾರ ಸಂಘಗಳು ಮತ್ತು ಇತರ ಸಂಘಗಳಿಂದ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತಿದೆ.ಆದರೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸಮಸ್ಯೆ ಪ್ರಾರಂಭವಾಗಿದೆ.ಇಬ್ಬರು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ.ಮತ್ತು ಎಸ್.ಎಲ್.ಬೋಜೇಗೌಡ ಚುನಾವಣೆಗೆ ಸ್ಪರ್ಧೆ ಮಾಡುವ ತಯಾರಿ ನಡೆಸಿರುವುದು ಕಗ್ಗಂಟು ಸೃಷ್ಟಿಗೆ ಕಾರಣವಾಗಿದೆ.ಸಿ.ಟಿ.ರವಿ ಮೂಗ್ತಿಹಳ್ಳಿ ಸಂಘದಿಂದ ಎಂಟ್ರಿ ಕೊಟ್ಟಿರುವುದು ಬೋಜೇಗೌಡ ಉದ್ದೇಬೋರನಹಳ್ಳಿ ಸಂಘದಿಂದ ಬರುವ ಸಾಧ್ಯತೆ ಹೆಚ್ಚಾಗಿರುವುದು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ.
ಇದರ ಮಧ್ಯೆ ಹಾಲಿ ಸದಸ್ಯರಾಗಿರುವ ನಿರಂಜನ್ ಮತ್ತು ಸತೀಶ್ ನಡೆಯ ಮೇಲೆ ಹೊಸ ದಿಕ್ಕಿನಡೆ ತಿರಗಬಹುದು.ಯಾರು ಯಾರು ಯಾವ ಆಟ ಆಡುತ್ತಾರೆ ಎಂಬ ಲೆಕ್ಕಾಚಾರ ಕೂಡ ನಡೆಯುತ್ತಿದೆ. ಸಿ.ಟಿ.ರವಿ ಸಮಯ ನೋಡಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಬೋಜೇಗೌಡರು ಕೂಡ ಸೇರಿ ಪ್ಲಾನ್ ಮಾಡಬಹುದು.ಆದರೆ ಇವುಗಳನ್ನು ನಿಯಂತ್ರಿಸುವ ಶಕ್ತಿ ಕೂಡ ತಳ್ಳಿ ಹಾಕುವಂತೆ ಇಲ್ಲ.
ಆಡಳಿತಾರೂಢ ಪಕ್ಷ ಕಾಂಗ್ರೆಸ್ ಸಹಕಾರ ಕ್ಷೇತ್ರದಲ್ಲಿ ನಿತ್ರಾಣ ಗೊಂಡಿರುವುದರಿಂದ ಬಿಜೆಪಿ ಬಡಿದಾಟದ ಲಾಭ ಪಡೆಯಲು ಪ್ರಯತ್ನ ಮಾಡಬಹುದು. ಬ್ಯಾಂಕ್ ಸೂಪರ್ ಸೀಡ್ ಮಾಡಿಸಬೇಕು ಎಂದು ಪ್ರಯತ್ನ ಅಂತಿಮವಾಗಿ ನ್ಯಾಯಾಲಯದ ತೀರ್ಪು ಹೀಗಾಗಿ ಸೇರಿಗೆ ಸವಾಸೇರು ಎಂಬಂತೆ ಆಗಿದೆ.
ತರೀಕೆರೆ ಕಡೂರು, ಶೃಂಗೇರಿ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿಗೆ ಸಮಸ್ಯೆ ಇಲ್ಲ. ಮೂಡಿಗೆರೆ ಯಲ್ಲೂ ಸಮಸ್ಯೆ ಇಲ್ಲ ಆದರೆ ಇಲ್ಲಿ ತಟಸ್ಥವಾಗಿದ್ದಾರೆ. ತರೀಕೆರೆ ಶಾಸಕ ಶ್ರೀನಿವಾಸ್ ರೇವಣಸಿದ್ದೇಶ್ವರ ಸೊಸೈಟಿಯಿಂದ ಪ್ರತಿನಿಧಿಯಾಗಿರುವುದು ಕುತೂಹಲ ಹುಟ್ಟಿಸಿದರೆ ಕಡೂರು ಶಾಸಕ ಸುಮ್ಮನೆ ಇರುವುದಿಲ್ಲ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಇತ್ತ ಬೋಜೇಗೌಡರನ್ನು ಬಿಡುವಂತಿಲ್ಲ ಸಿ.ಟಿ.ರವಿ ರವಿ ಸಹಿಸುವಂತಿಲ್ಲ.ಅಧಿಕಾರವಿದ್ದರು ಹೊಂದಾಣಿಕೆ ರಾಜಕಾರಣ ಸಮಸ್ಯೆ ಸೃಷ್ಟಿಸಿದೆ.
ಹಾಲು ಒಕ್ಕೂಟದ ಸಂಘಗಳಿಂದ ಸೋನಾಲ್ ಸ್ಪರ್ಧೆಗೆ ಜಗದೀಶ್ ಅಡ್ಡಲಾಗಿರುವುದು ಖಚಿತ. ಟಿ.ಎ.ಪಿ.ಸಿ.ಎಂ.ಸಿ ಯಿಂದ ಜೀವರಾಜ್ ತೀರ್ಮಾನ ಅಂತಿಮ ಇನ್ನುಳಿದಂತೆ ಇತರೆ ಸಹಕಾರ ಸಂಘಗಳಿಂದ ಹಾಲಿ ಸದಸ್ಯರಾದ ಟಿ.ಎಲ್. ರಮೇಶ್ ಚುನಾವಣೆ ನಡೆಸುವಷ್ಟೇ ಪ್ರಯತ್ನ ನಡೆಸಿದ್ದಾರೆ. ಆದರೆ ಈಶ್ವರಹಳ್ಳಿ ಮಹೇಶ್ ಮುಂದಿಟ್ಟು ಬಿಜೆಪಿ ಜನತಾದಳ ಆಟ ಆಡುತ್ತಾರೆ.
ಒಟ್ಟಾರೆ ಡಿಸಿಸಿ ಬ್ಯಾಂಕ್ ಚುನಾವಣೆ ಕುತೂಹಲ ಹುಟ್ಟಿಸಿದೆ ಯಾರು,ಯಾರು ಯಾವ,ಯಾವ ಆಟಾ ನಡೆಸುತ್ತಾರೆ ಯಾರಿಗೆ ಯಾರು ಪಾಠ ಕಲಿಸುತ್ತಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಆಟ ನಡೆಯುತ್ತಿದೆ ಕಾಲ ಎಲ್ಲವನ್ನೂ ತಿಳಿಸುತ್ತದೆ ಕಾದು ನೋಡುವ.
DCC Bank Election – One color for each day one color for each moment – Congressman’s trick?
Leave a comment