ಅಜ್ಜಂಪುರ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಭಾನುವಾರ ನಡೆದ ಮೊದಲ ಚುನಾವಣೆಯಲ್ಲಿ ಶೇ 77.76 ಮತದಾನವಾಗಿದೆ.
4,967 ಪುರುಷ ಮತಗಳಲ್ಲಿ 3,916 ಹಾಗೂ 5,285 ಮಹಿಳಾ ಮತಗಳಲ್ಲಿ 4,056 ಮತಗಳು ಚಲಾವಣೆಗೊಂಡವು. ಒಟ್ಟಾರೆ 10,252 ಮತದಾರರಲ್ಲಿ 7,972 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
1 ನೇ ವಾರ್ಡ್‌ನ ಒಟ್ಟು 876 ಮತಗಳಲ್ಲಿ 628, 2 ನೇ ವಾರ್ಡ್‌ನ 1,529 ಮತಗಳಲ್ಲಿ 1,108, 3ನೇ ವಾರ್ಡ್‌ನ 1,704 ಮತಗಳಲ್ಲಿ 1,313, 4ನೇ ವಾರ್ಡ್‌ನ 788 ಮತಗಳಲ್ಲಿ 595, 5ನೇ ವಾರ್ಡ್‌ನ 791 ಮತಗಳಲ್ಲಿ 630, 6ನೇ ವಾರ್ಡ್‌ನ 761 ಮತಗಳಲ್ಲಿ 658, 7ನೇ ವಾರ್ಡ್‌ನ 789 ಮತಗಳಲ್ಲಿ 643, 8ನೇ ವಾರ್ಡ್‌ನ 505 ಮತಗಳಲ್ಲಿ 442, 9ನೇ ವಾರ್ಡ್‌ನ 467 ಮತಗಳಲ್ಲಿ 430, 10ನೇ ವಾರ್ಡ್‌ನ 855 ಮತಗಳಲ್ಲಿ 662, 11ನೇ ವಾರ್ಡ್‌ನ 1,187 ಮತಗಳಲ್ಲಿ 863 ಮತಗಳು ಚಲಾವಣೆಯಾದವು.
ಬೆಳಗಿನಿಂದಲೇ ಮತದಾರರು ಮತ ಕೇಂದ್ರದತ್ತ ಮುಖ ಮಾಡಿದ್ದರು. 10 ಗಂಟೆಯಿಂದ 3 ಗಂಟೆವರೆಗೆ ಮತದಾನ ಏರುಗತಿ ಪಡೆದಿತ್ತು. ಮತ ಕೇಂದ್ರದಲ್ಲಿ ಸಾಲುಗಟ್ಟಿ ನಿಂತು ಮತದಾನ ಮಾಡಿದರು. ಸಂಜೆ ವೇಳೆಗೆ ಮತದಾನ ಪ್ರಮಾಣ ಕ್ಷೀಣಿಸಿತ್ತು.
ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ, ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಉತ್ತರ ದಿಕ್ಕಿನ ಶಾಲೆ, ಸರ್ಕಾರಿ ಪೂರ್ವ ದಿಕ್ಕಿನ ಶಾಲೆ ಮತ ಕೇಂದ್ರದ ಬಳಿ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು ಜಮಾಯಿಸಿದ್ದರು. ಮತದಾರರ ಮನವೊಲಿಸಲು ಅಂತಿಮ ಹಂತದವರೆಗೂ ಕಸರತ್ತು ನಡೆಸಿದ್ದು ಕಂಡುಬಂದಿತು.
11 ವಾರ್ಡ್‌ಗಳ 31 ಅಭ್ಯರ್ಥಿಗಳ ಭವಿಷ್ಯಗಳಲ್ಲಿ ಇವಿಎಂಗಳಲ್ಲಿ ಭದ್ರವಾಗಿದ್ದು, ಮತ ಎಣಿಕೆ ಬುಧವಾರ (ಆ.20) ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
77.76% voter turnout in Ajjampura town panchayat elections
Leave a comment