Home namma chikmagalur ಮೇಲ್ವರ್ಗದರು ಮಾಡಿದ ಒತ್ತುವರಿ ತೆರವಿಗೆ ಗ್ರಾಮಸ್ಥರ ಆಗ್ರಹ
namma chikmagalurchikamagalurHomeLatest News

ಮೇಲ್ವರ್ಗದರು ಮಾಡಿದ ಒತ್ತುವರಿ ತೆರವಿಗೆ ಗ್ರಾಮಸ್ಥರ ಆಗ್ರಹ

Share
Share

ಚಿಕ್ಕಮಗಳೂರು: ಹಾಂದಿ ಗ್ರಾಮದಲ್ಲಿ ಊರಿನವರು ವಾಸಿಸಲು ನಿವೇಶನಕ್ಕೆ ಉಚಿತವಾಗಿ ಜಾಗ ನೀಡಿದ ಕುಟುಂಬ ಸಮಸ್ಯೆ ಎದುರಿಸುವಂತಾಗಿದ್ದು, ಗ್ರಾಮದ ಜನತೆ ನಿವೇಶನ ಹೊರತುಪಡಿಸಿ ಕೊಟ್ಟಿಗೆ ನಿರ್ಮಿಸಿಕೊಂಡಿರುವ ಜಾಗವನ್ನು ಬಿಡಿಸಿಕೊಡ ಬೇಕು. ಮೇಲ್ವರ್ಗದ ಇಬ್ಬರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಎಚ್.ಎಂ.ಸೋಮಶೇಖರ್ ಒತ್ತಾಯಿಸಿ ದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಾಂದಿ ಗ್ರಾಮದಲ್ಲಿ ಈಗಾಗಲೇ ೧೯೭೨ರಲ್ಲಿ ಮನೆಗಳಿಗೆ ಹಕ್ಕುಪತ್ರ ಗಳನ್ನು ವಿತರಣೆ ಮಾಡಿದ್ದು, ಕಾರಣಾಂತರಗಳಿಂದ ಮತ್ತೇ ೫೨ ವರ್ಷಗಳ ಬಳಿಕ ಹಕ್ಕುಪತ್ರ ವಿತರಿಸುತ್ತಿರುವುದು ಶ್ಲಾಘನೀಯ. ಆದರೆ, ಒಂದು ಕಟುಂಬದ ಆಸ್ತಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.

೧೯೫೨-೫೨ರಲ್ಲಿ ಕುಟುಂಬದ ಹಿರಿಯರು, ಸ್ವಾತಂತ್ರ್ಯ ಹೋರಾಟಗಾರ, ಗ್ರಾ.ಪಂ.ಸದಸ್ಯ, ಟಿಡಿಬಿ ಸದಸ್ಯರಾದ ಎಚ್.ಯು. ಮಂಜಪ್ಪ ಅವರು ಹಾಂದಿ ಗ್ರಾಮದ ಸರ್ವೇ ನಂ.೧೬೯ರಲ್ಲಿ ೬.೧೧ ಎಕರೆ ಜಮೀನು ಹೊಂದಿದ್ದು, ಅದರಲ್ಲಿ ೨ ಎಕರೆ ಜಾಗ ಹಾಂದಿ ಗ್ರಾಮದ ಪರಿಶಿಷ್ಟ ಜಾತಿಯವರು ವಾಸಿಸಲು ಬಿಟ್ಟುಕೊಟ್ಟಿದ್ದರು. ೧೯೭೨ರಲ್ಲಿ ೨೮ ಜನರಿಗೆ ಹಕ್ಕುಪತ್ರ ಕ್ಷೇತ್ರಾಭಿವೃದ್ಧಿ ಅಧಿಕಾರಿ ನೀಡಿದ್ದಾರೆ ಎಂದು ತಿಳಿಸಿದರು.

ಮೂರ್ನಾಲ್ಕು ತಿಂಗಳಿಂದ ಕಂದಾಯ ಉಪಗ್ರಾಮ ಮಾಡುವುದಾಗಿ ಸಂಬಂಧಪಟ್ಟ ಇಲಾಖೆ ಮಾಡುತ್ತಿದ್ದು, ಈ ಸರ್ವೇ ನಂಬರ್‌ನಲ್ಲಿ ಎರಡು ಎಕರೆಯನ್ನು ಗ್ರಾಮದವರು ಮನೆಕಟ್ಟಲು ಬಿಟ್ಟುಕೊಟ್ಟಿದ್ದರೆ, ಮಂಜಪ್ಪನವರ ಹಿರಿಯ ಮಗ ಎಚ್.ಎಂ. ಉದ್ದಂಡಮೂರ್ತಿಗೆ ೨.೧೧ ಎಕರೆ, ಮೂರನೇ ಮಗ ರಾಧಾಕೃಷ್ಣಗೆ ಎರಡು ಎಕರೆ ಬಿಟ್ಟುಕೊಟ್ಟಿದ್ದಾರೆ. ರಾಧಕೃಷ್ಣ ಮೃತರಾದ ಬಳಿಕ ಅವರ ಮಗ ಸುಭಾಷ್‌ಚಂದ್ರ ಅವರ ಹೆಸರಿಗೆ ಪಹಣಿ ಬರುತ್ತಿದೆ ಎಂದರು.

ಜಾಗ ಹದ್ದುಬಸ್ತು ಸರ್ವೇಯಾಗಿಲ್ಲ, ಕೆಳಗೂರು ಪಂಚಾಯತ್‌ನವರು, ಕಂದಾಯ ಇಲಾಖೆ ಗಮನಿಸದೆ ಏಕಾಏಕಿ ಕಂದಾಯ ಉಪಗ್ರಾಮ ಮಾಡುತ್ತಿರುವುದು ಸರಿಯಲ್ಲ, ಸುಭಾಷ್‌ಚಂದ್ರ ಹೆಸರಿಗೆ ಬಂದ ಜಮೀನಿನಲ್ಲಿ ೧೯೭೨ ರಿಂದ ವಾಸಿಸುತ್ತಿದ್ದೇವೆ. ಕುರಿ, ದನ, ಸೌದೆ ಕೊಟ್ಟಿಗೆ ನಿರ್ಮಿಸಿಕೊಂಡು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಭೇಟಿ ಮಾಡಿದ ವೇಳೆ ಪರಿಶೀಲಿಸಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯವಾಗುತ್ತಿರುವುದನ್ನು ಕಂದಾಯ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಹೇಳಿದರು.

ನಾವು ಮನೆಕಟ್ಟಲು ೨ಎಕರೆ ಬಿಟ್ಟುಕೊಟ್ಟಿರುವ ಜಾಗವನ್ನು ಇಬ್ಬರು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ಇದನ್ನು ತೆರವು ಗೊಳಿಸಿ ಪರಿಶಿಷ್ಟಜಾತಿಯ ನಿವೇಶನರಹಿತರಿಗೆ ನಿವೇಶನ ಕೊಡುವ ಮೂಲಕ ಈ ಜಾಗದಲ್ಲೇ ಜಾಗ ನೀಡಿರುವ ನಮ್ಮ ಕುಟುಂಬಕ್ಕೆ ೧೫ನಿವೇಶನಗಳನ್ನು ಬಿಟ್ಟುಕೊಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು. ಸುದ್ದಿಗೋಷ್ಟಿ ಯಲ್ಲಿ ಕುಟುಂಬದ ದಿಲೀಪ್‌ಕುಮಾರ್, ಧನಲಕ್ಷ್ಮಿ, ಲಕ್ಷ್ಮಿ, ಎಚ್.ಯು.ದೇವರಾಜು, ಕೇಶವಮೂರ್ತಿ ಇದ್ದರು.

Villagers demand removal of encroachment by upper castes

Share

Leave a comment

Leave a Reply

Your email address will not be published. Required fields are marked *

Don't Miss

ತಾಯ್ನಾಡಿನ ಋಣ ತೀರಿಸಲು ಸೈನಿಕ ವೃತ್ತಿ ಶ್ರೇಷ್ಟ

ಚಿಕ್ಕಮಗಳೂರು:  ಭೂಮಿಯಲ್ಲಿ ಜನಿಸಿದ ಮನುಜ ಕೊನೆಗೊಂದು ದಿನ ದೇಹವನ್ನು ತ್ಯಜಿಸಲೇಬೇಕು. ಈ ಮಧ್ಯೆದಲ್ಲಿ ತಾಯ್ನಾಡಿನ ಋಣ ತೀರಿಸಲು ಹಾಗೂ ಭಾರತವನ್ನು ಗಟ್ಟಿಗೊಳಿಸಲು ಸೈ ನಿಕ ವೃತ್ತಿ ಅತ್ಯಂತ ಶ್ರೇಷ್ಟವಾಗಿದೆ ಎಂದು ಜಿಲ್ಲಾ...

ಧಾರಾಕಾರ ಮಳೆಗೆ ಶೃಂಗೇರಿಯಲ್ಲಿ ತುಂಗಾನದಿಯಲ್ಲಿ ಪ್ರವಾಹ

ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶನಿವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ. ಶೃಂಗೇರಿಯಲ್ಲಿ 70 ಮಿ.ಮೀ, ಕಿಗ್ಗಾದಲ್ಲಿ 152.4 ಮಿ.ಮೀ, ಕೆರೆಕಟ್ಟೆಯಲ್ಲಿ 211 ಮಿ.ಮೀ ಮಳೆಯಾಗಿದ್ದು, ಒಟ್ಟು 2,825 ಮಿ.ಮೀ...

Related Articles

ಡಕಾಯಿತಿ ಪ್ರಕರಣ ಆರೋಪಿಗಳ ಬಂಧನ-2.55 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಚಿಕ್ಕಮಗಳೂರು: ಡಕಾಯಿತಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅಂದಾಜು ೨.೫೫ ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು...

ಗಿರಿ ಭಾಗದ ತಾಣಗಳಿಗೆ ಪ್ರವಾಸಿಗರಿಗೆ ಆನ್‌ಲೈನ್ ನೊಂದಣಿ ಕಡ್ಡಾಯ ಅವೈಜ್ಞಾನಿಕ

ಚಿಕ್ಕಮಗಳೂರು: ಗಿರಿ ಭಾಗದ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ಆನ್‌ಲೈನ್ ನೊಂದಣಿ ಕಡ್ಡಾಯಗೊಳಿಸಿರುವ ಜಿಲ್ಲಾಡಳಿತದ ಕ್ರಮ ಅವೈಜ್ಞಾನಿಕವಾಗಿದ್ದು,...

ಬೀದಿ ನಾಯಿಗಳಿಗೆ ನಿಯಂತ್ರಣಕ್ಕೆ ಅಗತ್ಯ ಕ್ರಮ

ಚಿಕ್ಕಮಗಳೂರು: ಅತಿ ಶೀಘ್ರದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಿಯಂತ್ರಣಕ್ಕೆ...

ವ್ಯಸನ ಮುಕ್ತ ದಿನಾಚರಣೆ – ವಿಚಾರ ಸಂಕಿರಣ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ವ್ಯಾಪಾರ-ವ್ಯವಹಾರ ಕಂಡು ಬಂದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ...